Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾನು ಗಾಬರಿಯಾಗಿ ಮನೆಯಿಂದ ಹೊರಗೆ ಬಂದು ಬಿಟ್ಟೆ : ಡಿಕೆ ಶಿವಕುಮಾರ್

11:49 AM Dec 01, 2023 IST | suddionenews
Advertisement

ಬೆಂಗಳೂರು: ಇಂದು‌ ನಗರದ ಕೆಲ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದ ಬೆಳಗ್ಗೆಯಿಂದ ಪೋಷಕರು ಗಾಬರಿಯಲ್ಲಿಯೇ ಇದ್ದಾರೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಯಗೊಂಡಿದ್ದಾರೆ. ಶಾಲೆಗಳಿಗೆ ಬಾಂಬ್ ಬೆದರಿಕೆ ಬಗ್ಗೆ ಮಾತನಾಡಿದ್ದು, ಟಿವಿ ನೋಡುತ್ತಿದ್ದೆ. ಗಾಬರಿಗೊಂಡು ಮನೆಯಿಂದ ಹೊರಗೆ ಬಂದೆ ಎಂದಿದ್ದಾರೆ.

Advertisement

 

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವುದೇ ಗಾಬರಿ ಬೇಡ. ತಮ್ಮ ಮಕ್ಕಳು ಸುರಕ್ಷಿತವಾಗಯೇ ಇರುತ್ತಾರೆ. ಟಿವಿ ನೋಡುತ್ತಾ ಇದ್ದೆ. ಈ ರೀತಿ ಬಂದಿದ್ದಕ್ಕೆ ನಾನು ಹಾಬರಿಯಾಗಿಬಿಟ್ಟೆ. ನನ್ನ ಸಂಬಂಧಪಟ್ಟ ಶಾಲೆಗಳು, ನನ್ನ ಮನೆಯ ಎದುರಗಡೆಯ ಶಾಲೆಯ ಹೆಸರು ಬರುತ್ತಾ ಇತ್ತು. ಹೀಗಾಗಿ ಗಾಬರಿಯಾಗಿ ಮನೆಯಿಂದ ಹೊರಗಡೆ ಬಂದೆ. ಪೊಲೀಸರು ಏನು ಮೇಲ್ ಬಂದಿದೆ ಎಂದು ತೋರಿಸಿದ್ದಾರೆ.

Advertisement

 

ನಮ್ಮ ಪೊಲೀಸ್ ಅಧಿಕಾರಿಗಳೆಲ್ಲಾ ಮಾತನಾಡಿದರು. ಇಷ್ಟು ಸಮಯದ ತನಕ ಇದೊಂದು ಫೇಕ್ ನ್ಯೂಸ್ ಎಂದೇ ಕಾಣುತ್ತಾ ಇದೆ. ಆದರೆ ನಾವೂ ಜಾಗರೂಕರಾಗಿರಬೇಕು. ಪೊಲೀಸ್ ಕಮೀಷನರ್ ಕೂಡ ಪ್ರೆಸ್ ಕಾನ್ಫರೆನ್ಸ್ ಮಾಡಿದ್ದಾರೆ. ಎಲ್ಲಾ ಕಡೆಗೂ ಪೊಲೀಸ್ ಸೆಕ್ಯೂರಿಟಿ, ಬಾಂಬ್ ಸ್ಕ್ವಾಡ್ ಬಂದಿದೆ. ನನ್ನ ಮನೆ ಎದುರು ಆಗುವುದಕ್ಕೆ ಆಗುವುದಿಲ್ಲ. 24 ಗಂಟೆ ಪೊಲೀಸರು ಅಲ್ಲಿಯೇ ಇರುತ್ತಾರೆ. ಬೆಂಗಳೂರು ನಾಗರಿಕನಾಗಿ ಹೇಳುತ್ತೀನಿ. ಯಾವುದೇ ಭಯ ಬೇಡ. ನಿಮ್ಮ ಮಕ್ಕಳು ಸುರಕ್ಷಿತವಾಗಿ ಇರುತ್ತಾರೆ. ಬೇಕು ಅಂತಾನೆ ಕೆಲವರು ಮಿಸ್ ಯೂಸ್ ಮಾಡುತ್ತಾರೆ. ಹಬ್ಬ ನಡೆಯುತ್ತಾ ಇರುತ್ತದೆ. ಊಟ ಮಾಡುವವರು ಮಾಡುತ್ತಾ ಇರುತ್ತಾರೆ. ನಾವೂ ಜಾಗರೂಕತೆಯಿಂದ ಇರಬೇಕು ಅಷ್ಟೇ ಎಂದು ಇಂದು ಬಂದ ಬಾಂಬ್ ಬೆದರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Tags :
bangaloredk shivakumarಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಡಿಕೆ ಶಿವಕುಮಾರ್ಬೆಂಗಳೂರು
Advertisement
Next Article