Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಗೋಲ್ ಮಾಲ್ ಬಗ್ಗೆ ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ : ವಿನಯ್ ಕುಲಕರ್ಣಿ

01:09 PM Jul 02, 2024 IST | suddionenews
Advertisement

 

Advertisement

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ವಾಲ್ಮೀಕಿ ನಿಗಮ, ಮೈಸೂರು ಮೂಡಾದ ಹಗರಣಗಳು ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ರಾಜ್ಯದಲ್ಲಿ ಮತ್ತಷ್ಟು ಹಗರಣಗಳ ಬಗ್ಗೆ ಶಾಸಕ ವಿನಯ್ ಕುಲಕರ್ಣಿ ಮಾತನಾಡಿದ್ದಾರೆ. ಪಕ್ಷದ ಮುಖಂಡರಿಗೂ ಈ ಬಗ್ಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ್ ಕುಲಕರ್ಣಿ, ನಮ್ಮ ಬೋರ್ಡ್ ನಲ್ಲಿ ದುರಾಡಳಿತ ನಡೆದಿದೆ. ಆ ಬೋರ್ಡ್ ಗೆ ನಾನು ಹೆಡ್. ಅಲ್ಲಿನ ವ್ಯವಸ್ಥೆ ಸರಿ ಇಲ್ಲ. ಲಾಸ್ಟ್ ಟೈಂ ಮಂತ್ರಿಗಳು ಸಹ ಹೇಳಿದ್ದರು. ಇದನ್ನು ಸಿಐಡಿಗೆ ಕೊಡಬೇಕು ಅಂತ. ಆದರೆ ಪರಿಶೀಲನೆ ನಡೆಯಲಾರದಂತ ದುರಾಡಳಿತ ನಡೆದಿದೆ. ಮೊನ್ನೆ ನಾವೂ ವಾಲ್ಮೀಕಿ ಬೋರ್ಡ್ ವ್ಯವಸ್ಥೆ ನೋಡಿದ್ದೇವೆ‌. ಅದಕ್ಕಿಂತಲೂ ಕೆಟ್ಟ ವ್ಯವಸ್ಥೆ ಇಲ್ಲಿ ಆಗುವುದು ಬೇಡ. ಅದಕ್ಕಾಗಿ ಪತ್ರಗಳನ್ನು ಕೊಟ್ಟಿದ್ದೇನೆ. ಆ ವಿಚಾರ ಪ್ರಸ್ತಾಪ ಮಾಡುವ ವಿಚಾರ ಬಂದಾಗ ಮಾತನಾಡುತ್ತೇನೆ. ಅಲ್ಲಿ ಹಲವಾರು ದುರಾಡಳಿತ ನಡೆದಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಂದಂತಹ ಸಮಯದಲ್ಲಿ ಈ ವಿಚಾರಗ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ.

Advertisement

ಇದೇ ವೇಳೆ ದೆಹಲಿಗೆ ಹೋಗಿದ್ದರ ಬಗ್ಗೆಯೂ ಮಾತನಾಡಿ, ದೆಹಲಿಗೆ ಹೋಗಿದ್ದು ನಿಜ. ಅಸಮಾಧಾನವೇನು ಇಲ್ಲ. ಯಾರ ಮುಂದೆಯೂ ಅಸಮಾಧಾನವನ್ನು ವ್ಯಕ್ತಪಡಿಸಿಲ್ಲ. ಗೌರವ ಇಲ್ಲದ ಕಡೆ ನಾನ್ಯಾಕೆ ಹೋಗಲಿ ಎಂದಿದ್ದಾರೆ. ಜೊತೆಗರ ದುರಾಡಳಿತದ ಬಗ್ಗೆ ಮಾತು ಮುಂದುವರೆಸಿ, ನಮ್ಮ ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ. ಹತ್ತು ಹದಿನೈದು ಕಂಪನಿಗಳಿದಾವೆ. ಅದರಲಗಲಿ ಯಾವೆಲ್ಲಾ ಗೋಲ್ ಮಾಲ್ ಆಗಿದೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ.. ತನಿಖೆ ನಡೆಯಲಿ. ನಾನು ಈ ಸಂಬಂಧ ಪತ್ರ ಕಿಟ್ಟು ಎರಡೂವರೆ ತಿಂಗಳಾಯಿತು. ಮುಖ್ಯಮಂತ್ರಿಗೂ ವಿಚಾರ ತಿಳಿಸಿದ್ದೇನೆ ಎಂದಿದ್ದಾರೆ.

Advertisement
Tags :
bengaluruchitradurgainformedsuddionesuddione newsVinay Kulkarniಗೋಲ್ ಮಾಲ್ಚಿತ್ರದುರ್ಗಬೆಂಗಳೂರುಮುಖಂಡರುವಿನಯ್ ಕುಲಕರ್ಣಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article