Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕ್ಷೇತ್ರದ ಕುಂದು-ಕೊರತೆಗಳ ಬಗ್ಗೆ ಮಾತಾಡಿದ್ದೇನೆ.. ದುಡ್ಡು ಕೇಳಿಲ್ಲ : ಪಿಎಸ್ಐ ಸಾವಿನ ಬಳಿಕ ಶಾಸಕ ಪ್ರತಿಕ್ರಿಯೆ

06:18 PM Aug 05, 2024 IST | suddionenews
Advertisement

ಬೆಂಗಳೂರು: ರಾಯಚೂರಿನ ಪಿಎಸ್ಐ ಪರಶುರಾಮ್ ಇತ್ತಿಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಸಕ ಹಾಗೂ ಅವರ ಮಗ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪರಶುರಾಮ್ ಪತ್ನಿ ಆರೋಪ ಮಾಡಿದ್ದಾರೆ. ಪರಶುರಾಮ್ ಆತ್ಮಹತ್ಯೆಯ ಬಳಿಕ, ತಮ್ಮ ಹೆಸರು ಕೇಳಿದ ಬೆನ್ನಲ್ಲೇ, ಎಫ್ಐಆರ್ ದಾಖಲಾದ ಬೆನ್ನಲ್ಲೇ ಶಾಸಕ ಚೆನ್ನಾರೆಡ್ಡಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

Advertisement

ಬಳಿಕ ಮಾತನಾಡಿರುವ ಶಾಸಕ ಚನ್ನಾರೆಡ್ಡಿ ಪಾಟೀಲ, ನನ್ನ ವಿರುದ್ಧ ಕೇಳಿ ಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾವ ಪೊಲೀಸಗ ಬಳಿಯೂ ದುಡ್ಡು ಕೇಳಿಲ್ಲ. ದುಡ್ಡಿನ ಬಗ್ಗೆ ಮಾತು ಕೂಡ ಆಡಿಲ್ಲ. ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಮಾತನಾಡಿದ್ದೇನೆ ಅಷ್ಟೆ. ಬೇರೆ ಯಾವ ವಿಷಯವನ್ನು ನಾನು ಮಾತನಾಡಿಲ್ಕ

ಪ್ರಕರಣವನ್ನು ನಮ್ಮ ಸರ್ಕಾರ ಸಿಐಎಇಗೆ ವಹಿಸಿದೆ. ತನಿಖಾ ವರದಿ ಬಂದ ಮೇಲೆ ನಾನು ಸೇರಿ ಸತ್ಯಾಂಶ ತಿಳಿಯುತ್ತದೆ‌. ಎಫ್ಐಆರ್ ದಾಖಲು ಮಾಡುವುದು ಪೊಲೀಸರಿಗೆ ಬಿಟ್ಟಿದ್ದು. ಆ ವಿಚಾರದಲ್ಲಿ ನಾನು ಭಾಗಿಯಾಗಿಲ್ಲ. ಆ ಕುರಿತು ಯಾರ ಜೊತೆಗೂ ಮಾತನಾಡಿಲ್ಲ. ಇದೊಂದು ಷಡ್ಯಂತ್ರ. ತಂದೆ-ಮಗನನ್ನು ಸಿಕ್ಕಿ ಹಾಕಿಸಬೇಕೆಂದು ಮಾಡಿರುವ ಹುನ್ನಾರ. ಸಿಐಡಿ ವರದಿ ಬಂದ ಮೇಲೆ ಅದು ಷಡ್ಯಂತ್ರವೋ, ಅಲ್ಲವೋ ಎಂಬುದು ಹೊರಗೆ ಬರುತ್ತದೆ. ಕಾನೂನಿಗೆ ನಾನು ತಲೆ ಬಾಗುತ್ತೇನೆ. ಸಿಐಡಿ ಅವರು ಕರೆ ಮಾಡಿದ ತಕ್ಷಣ ನಾನು ಹೋಗಿ ವಿಚಾರಣೆಗೆ ಸಹಕಾರ ಕೊಡುತ್ತೇನೆ. ಸಿಎಂ ಅವರು ನಮ್ಮ ನಾಯಕ. ಪಕ್ಷದ ಸಭೆಗೆ ಬರಲು ಹೇಳಿದ್ದರು, ಅದಕ್ಕೆ ಹೋಗಿದ್ದೆ ಎಂದಿದ್ದಾರೆ.

Advertisement

Advertisement
Tags :
bengaluruchitradurgaconstituencyMLA's reactionPSI's deathsuddionesuddione newsಕ್ಷೇತ್ರಚಿತ್ರದುರ್ಗಪಿಎಸ್ಐಬೆಂಗಳೂರುಶಾಸಕ ಪ್ರತಿಕ್ರಿಯೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article