For the best experience, open
https://m.suddione.com
on your mobile browser.
Advertisement

ಕಷ್ಟ ಎಂದು ಬಂದ ಹೆಣ್ಣು ಮಗುವಿಗೆ ಹಣದ ಸಹಾಯವನ್ನು ಮಾಡಿದ್ದೆ : ಬಿಎಸ್ ಯಡಿಯೂರಪ್ಪ ಸ್ಪಷ್ಟನೆ

12:54 PM Mar 15, 2024 IST | suddionenews
ಕಷ್ಟ ಎಂದು ಬಂದ ಹೆಣ್ಣು ಮಗುವಿಗೆ ಹಣದ ಸಹಾಯವನ್ನು ಮಾಡಿದ್ದೆ   ಬಿಎಸ್ ಯಡಿಯೂರಪ್ಪ ಸ್ಪಷ್ಟನೆ
Advertisement

Advertisement
Advertisement

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಸಹಾಯ ಕೇಳಲು ಹೋದಾಗ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದಾರೆ. ಈ ದೂರಿನ ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.

Advertisement

ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮೇಲೆ ಯಾರೋ ಹೆಣ್ಣು ಮಗಳು ದೂರು ಕೊಟ್ಟಿದ್ದಾರೆ ಅಂತ ಗೊತ್ತಾಯ್ತು. ಕಳೆದ ಒಂದೂವರೆ ತಿಂಗಳ ಹಿಂದೆ ಯಾರೋ ತಾಯಿ ಮಗಳು ಬಂದಿದ್ದರು. ಅನೇಕ ಸಾರಿ ಬಂದಿದ್ದರು ಹತ್ತಿರ ಸೇರಿಸಿರಲಿಲ್ಲ. ಒಮ್ಮೆ ಕಣ್ಣೀರು ಹಾಕುತ್ತಿದ್ದರು. ಆಗ ಮನೆಯೊಳಗೆ ಕರೆಸಿ ಸಮಸ್ಯೆ ಏನು ಅಂತ ಕೇಳಿದೆ. ಆ ತಾಯಿ ನನಗೆ ಅನ್ಯಾಯವಾಗಿದೆ, ಅದು ಇದು ಅಂತ ಹೇಳಿದ್ದರು. ಆಗ ಪೊಲೀಸ್ ಕಮಿಷನರ್ ದಯಾನಂದ್ ಅವರಿಗೆ ಕರೆ ಮಾಡಿ, ಈ ಹೆಣ್ಣು‌ ಮಗುವಿಗೆ ಸಹಾಯ ಮಾಡಿ ಎಂದು ಹೇಳಿದೆ.

Advertisement
Advertisement

ಆ ಹೆಣ್ಣು ಮಗು ನನ್ನ ಮೇಲೆಯೇ ಆ ಸಮಯದಲ್ಲಿ ಒಂಥರ ಮಾತನಾಡುವುದಕ್ಕೆ ಶುರು ಮಾಡಿದರು. ಆಗ ಇದು ಯಾಕೋ ಆರೊಇಗ್ಯ ಸರಿ ಇದ್ದಂತೆ ಕಾಣಲ್ಲ ಎಂದು ಪೊಲೀಸ್ ಕಮಿಷನರ್ ಕರೆ ಮಾಡಿ ಕಳುಹಿಸಿಕೊಟ್ಟೆ. ಅವತ್ತು ಕಷ್ಟ ಎಂದಾಗ ಸ್ವಲ್ಪ ಹಣದ ಸಹಾಯವನ್ನು ಮಾಡಿದೆ. ಆದರೆ ಈಗ ಈ ರೀತಿಯಾದಂತ ಬೆಳವಣಿಗೆಯಾಗಿದೆ. ಇದನ್ನೆಲ್ಲಾ ನಾನು ನಿರೀಕ್ಷೆ ಮಾಡಿರಲಿಲ್ಲ. ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವುದಕ್ಕರ ಹೋದರೆ ಏನಾಗುತ್ತದೆ ನೋಡಿ ಎಂದು ನಗುತ್ತಲೇ ಯಡಿಯೂರಪ್ಪ ಅವರು ಉತ್ತರ ನೀಡಿದ್ದಾರೆ.

Advertisement
Tags :
Advertisement