For the best experience, open
https://m.suddione.com
on your mobile browser.
Advertisement

ನಂಗೆ ಕೇಕ್ ಇಷ್ಟ ಇಲ್ಲ.. ನಿಮ್ ಏರಿಯಾದಲ್ಲಿಯೇ ಊಟ ಹಾಕಿ : ಹುಟ್ಟುಹಬ್ಬದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಿವಿ ಮಾತು

11:42 AM Aug 31, 2024 IST | suddionenews
ನಂಗೆ ಕೇಕ್ ಇಷ್ಟ ಇಲ್ಲ   ನಿಮ್ ಏರಿಯಾದಲ್ಲಿಯೇ ಊಟ ಹಾಕಿ   ಹುಟ್ಟುಹಬ್ಬದ ಬಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಕಿವಿ ಮಾತು
Advertisement

ಬೆಂಗಳೂರು: ಸೆಪ್ಟೆಂಬರ್2.. ಕಿಚ್ಚ ಸುದೀಪ್ ಅವ ಹುಟ್ಟುಹಬ್ಬ, ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಹೂ, ಹಾರ, ಕೇಕ್ ಅಂತ ತೆಗೆದುಕೊಂಡು ಬರ್ತಾರೆ. ಆದರೆ ಇದೆಲ್ಲದ್ದಕ್ಕೂ ಕಿಚ್ಚ ಸುದೀಪ್ ಮನವಿಯೊಂದನ್ನು ಮಾಡಿದ್ದಾರೆ. ಹುಟ್ಟುಹಬ್ಬ ಹೇಗೆ ಆಚರಿಸಬೇಕೆಂದು ಹೇಳಿದ್ದಾರೆ.

Advertisement
Advertisement

'ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ನಾನು ಹಲವು ನಟರನ್ನು ನೋಡಿಕೊಂಡೆ ಬೆಳೆದವನು. ನನಗೂ ತುಂಬಾ ಆಸೆ ಇತ್ತು. ಆದರೆ ಹೋಗ್ತಾ ಹೋಗ್ತಾ ಬದಲಾಯಿತು. ಮನುಷ್ಯತ್ವದ ಬಗ್ಗೆಯೂ ಅರಿವಾಯಿತು. ಹೂಗಳು ಬಿದ್ದಿರುತ್ತವೆ. ಆ ಹೂ ಮಾಡಿಸುವುದಕ್ಕೆ ಇವ್ರು ಎಷ್ಟು ತಿಂಗಳು ಪ್ಲ್ಯಾನ್ ಮಾಡಿರ್ತಾರೆ. ಆ ಹಾರಗಳನ್ನೇನಾದರೂ ಹಾಕಿದ್ರೆ ಕುತ್ತಿಗೆ ಕಟ್ ಆಗುತ್ತೆ. ಅಷ್ಟು ದಪ್ಪ ಇರುತ್ತೆ. ಆದರೆ ಒಂದು ಸೆಕೆಂಡ್ ಗೆ ಇರುವ ಬೆಲೆ ಅದು. ಆಮೇಲೆ ಇನ್ನೆಲ್ಲೋ ಬಿದ್ದಿರುತ್ತೆ.

ಇನ್ನು ಕೇಕ್. ಸ್ಪರ್ಧೆ ಮೇಲೆ ಕೇಕ್ ಕಟ್ ಮಾಡ್ತೇವೆ. ಆ ಸಂಘದವರು ಇಷ್ಟು ಮಾಡಿದ್ರಾ..? ನಮ್ಮ ಸಂಘದವರು ಇಷ್ಟು ಮಾಡ್ತೀವಿ ಅನ್ನೋ ಕಾಂಪಿಟೇಷನ್. ಬೇಜಾರ್ ಮಾಡಿಕೊಳ್ಳುತ್ತಾರೆ ಅಂತ ತಿನ್ನೋದು, ಒಳಗೆ ಹೋಗಿ ವಾಂತಿ ಮಾಡೋದು. ಬೇಸರ ಮಾಡಿಕೊಳ್ಳುತ್ತಾರೆ ಅಂತ ಒಂದಷ್ಟು ವರ್ಷ ಅರ್ಜೆಸ್ಟ್ ಮಾಡಿಕೊಂಡೆ, ಹೇಳಿದೆ ಬೇಡ‌ ಅಂತ ಆದ್ರೂ ಕೇಳಲಿಲ್ಲ. ಕಟ್ ಮಾಡಿದ ಮೇಲೆ ಆ‌ ಕೇಕಿನಷ್ಟು ಅನಾಥ ಬೇರೆ ಯಾರೂ ಅಲ್ಲ. ಸಿಕ್ಕಾಪಟ್ಟೆ ಖರ್ಚು ಮಾಡಿರುತ್ತಾರೆ. ಆ ಥರದ ಸಂಭ್ರಮ ನನಗೆ ಬೇಡ ಸರ್. ನಾನಂತು ತಿಂತಾ ಇಲ್ಲ. ನಾನು ಎಲ್ಲರಿಗೂ ರಿಕ್ವೆಸ್ಟ್ ಮಾಡಿಕೊಂಡಿರೋದು ಸ್ಮಾಲೆಸ್ಟ್ ಕೇಕ್ 100-150 ರೂಪಾಯಿ ಅದು ಮುಂದೆ ಸಾವಿರಾರು ಗಟ್ಟಲೆ ಆಗುತ್ತೆ. ಅದೇ ದುಡ್ಡಲ್ಲಿ ನಿಮ್ಮ ಏರಿಯಾದಲ್ಲಿ ಹೊಟ್ಟೆ ತುಂಬುತ್ತೆ. ನನಗ್ಯಾಕೆ ಕೇಕು. ನಂಗೆ ಕೇಕ್ ಇಷ್ಟ ಇಲ್ಲ' ಎಂದಿದ್ದಾರೆ.

Advertisement
Advertisement

Advertisement
Tags :
Advertisement