Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನಾನೊಂದು ಪಕ್ಷದ ಅಧ್ಯಕ್ಷ, ದೆಹಲಿಗೆ ಹೋದರೂ ಒಂದು ಮಾತು ಹೇಳಿಲ್ಲ : ಸಿ ಎಂ ಇಬ್ರಾಹಿಂ

05:16 PM Sep 30, 2023 IST | suddionenews
Advertisement

 

Advertisement

ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಗೆಲ್ಲುವುದಕ್ಕೆ ರೆಡಿಯಾಗಿದೆ. ಈ ಮೈತ್ರಿ ಎರಡು ಪಕ್ಷದಲ್ಲಿಯೂ ಹಲವರಿಗೆ ಸಮಾಧಾನ ತರುತ್ತಿಲ್ಲ. ಅದರಲ್ಲೂ ರಾಜ್ಯಾಧ್ಯಕ್ಷರಾದ ಸಿ ಎಂ ಇಬ್ರಾಹಿಂ ಅವರ ಬಳಿಯೂ ಯಾವುದೇ ಚರ್ಚೆ ನಡೆಸಿಲ್ಲ. ಅಂದಿನಿಂದ ಈ ಬಗ್ಗೆ ಮಾತನಾಡದ ಸಿ ಎಂ ಇಬ್ರಾಹಿಂ ಇಂದು ಮೈತ್ರಿ ಬಗ್ಗೆ ಮಾತನಾಡಿದ್ದಾರೆ.

ಅಕ್ಟೋಬರ್16 ರಂದು ಈ ಬಗ್ಗೆ ಮಾತನಾಡುವುದಕ್ಕೆ ನಿರ್ಧಾರ ಮಾಡಿದ್ದೇನೆ. ಅಲ್ಲಿಯವರೆಗೂ ಅವಕಾಶ ಮಾಡಿಕೊಡಿ. ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ಮಾಡುತ್ತೇನೆ. ರಾಜ್ಯದ ವಿಷಯಗಳ ಬಗ್ಗೆ ಈಗಾಗಲೇ ಕುಮಾರಸ್ವಾಮಿ ಮಾತನಾಡಿದ್ದಾರೆ. ನಾನೊಂದು ಪಕ್ಷದ ಅಧ್ಯಕ್ಷ. ನೀವೂ ದೆಹಲಿಗೆ ಹೋಗಿದ್ದೀರಿ. ಆದರೆ ಅಲ್ಲಿ ಏನು ಚರ್ಚೆ ಮಾಡಿದ್ದೀರಿ, ಎಂಬ ಬಗ್ಗೆ ನನಗೆ ಒಂದು ಮಾತನ್ನು ಹೇಳಿಲ್ಲ. ಮೈತ್ರಿ ಎಲ್ಲಿ ಆಗಿದೆ, ಏನು ಚರ್ಚೆ ಮಾಡಿದ್ದಾರೆ ಎಂಬ ಯಾವ ಮಾಹಿತಿಯೂ ಇಲ್ಲ ಎಂದಿದ್ದಾರೆ.

Advertisement

 

ಜನತಾದಳದ ಮೂಲ ಮತಗಳು ಈ ಬಾರಿ ಕಾಂಗ್ರೆಸ್​ಗೆ ಹೋಗಿದೆ. ಅದನ್ನು ಒಪ್ಪಲು ತಯಾರಿಲ್ಲ, ಅದನ್ನು ಒಪ್ಪಿಕೊಳ್ಳಿ. ಪಕ್ಷದಲ್ಲಿ ಚರ್ಚೆ ಆಗಿ ನಿರ್ಣಯ ಆದ ಮೇಲೆ ರಾಜ್ಯಾಧ್ಯಕ್ಷನಾಗಿ ನಾನು ಸಹಿ ಹಾಕಬೇಕು. ಕೋರ್ ಕಮಿಟಿ ಪ್ರವಾಸ ಶುರು ಮಾಡಿಲ್ಲ, ಆಗಲೇ ಹೋಗಿ ಭೇಟಿ ಮಾಡಿ ಬಂದಿದ್ದಾರೆ ಎಂದು ಕುಮಾರಸ್ವಾಮಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

Advertisement
Tags :
bengalurucm IbrahimDelhifeaturedpartyPresidentsuddioneಅಧ್ಯಕ್ಷದೆಹಲಿಪಕ್ಷಬೆಂಗಳೂರುಸಿ ಎಂ ಇಬ್ರಾಹಿಂಸುದ್ದಿಒನ್
Advertisement
Next Article