ವಿಪಕ್ಷ ನಾಯಕ ನಾನೇ : ಬಿಜೆಪಿ ವಿರುದ್ಧ ಮತ್ತೆ ಹರಿಹಾಯ್ದ ಶಾಸಕ ಯತ್ನಾಳ್
ವಿಜಯಪುರ: ಈಗಾಗಲೇ ಬಿಜೆಪಿಯಲ್ಲಿ ಆರ್ ಅಶೋಕ್ ಅವರನ್ನು ವಿಪಕ್ಷ ನಾಯಕನಾಗಿ ನೇಮಕ ಮಾಡಲಾಗಿದೆ. ಆದರೆ ಈ ಬೆನ್ನಲ್ಲೇ ನಾನೇ ವಿಪಕ್ಷ ನಾಯಕ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರ ಹಾಕಿದ್ದಾರೆ.
ವಿಜಯಪುರದ ಆನಂದ ನಗರದಲ್ಲಿ ಮಾತನಾಡಿ ಯತ್ನಾಳ್, ಬಿಜೆಪಿಯಲ್ಲಿ ವಿಪಕ್ಷ ನಾಯಕ ಸ್ಥಾನ ಸೇಲ್ ಆಗಿದ್ಯಾ..? ಯಾರರ ಏನನ ಕೊಟ್ಟು ತಗೊಂಡು ಮಾಡಿದ್ರೆ ನಾವೂ ಒಪ್ಪುತ್ತೇವೆ. ಈಗ ನಾನೇ ವಿಪಕ್ಷ ನಾಯಕ
ಮೊದಲು ಮಾಜಿ ಮುಖ್ಯಮಂತ್ರಿ ಅಂತ ಹೇಳ್ತಾ ಇದ್ರು. ಈಗ ನಿಕಟ ಪೂರ್ವ ಅಂತ ಹೇಳಿಕೊಳ್ಳುತ್ತಾರೆ. ಮಾಜಿ ಅಂತ ಹೇಳಿದರೆ ಏನು..? ನಿಕಟಪೂರ್ವ ಅಂತ ಬಂದಿದ್ದೆ ಯಡಿಯೂರಪ್ಪ ಅವರಿಂದ. ಈ ಹಿಂದೆ ಅಪ್ಪ ಮಗನುಗೆ ನಾಟಕ ಮಾಡಬೇಡಿ ಎಂದು ಹೇಳಿದ್ದೆ.
ಪಕ್ಷದಲ್ಲಿ ಎಲ್ಲಾ ಹುದ್ದೆಗಳು ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ದರೆ ಮನೆಯ ಬೆಕ್ಕುಗಳಿಗೆ ಕೊಟ್ಟುಬಿಡಿ. ಅವರನ್ನೆ ಪ್ರಧಾನ ಕಾರ್ಯದರ್ಶಿ, ಉಪಪ್ರಧಾನ ಕಾರ್ಯದರ್ಶಿ ಮಾಡುಬಿಡಿ. ಹೀಗಂಥಾ ಮೊನ್ನೆಯೇ ನಾನು ಹೇಳಿದ್ದೆ. ರೈತರ ಬಗ್ಗೆ ನಾಟಕ ಮಾಡುವುದನ್ನು ನೋಡಿಬಿಟ್ಟರೆ ಏನಪ್ಪ. ಎಲ್ಲರೂ ನಾಟಕ ಕಂಪನಿಯವರೇ ಎಂದು ಬಿವೈ ವಿಜಯೇಂದ್ರ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.
ನಾನು ಯಾವುದಕ್ಕೂ ಅಂಜುವುದಿಲ್ಲ. ನನಗೆ ಅಂಜಿಸುವುದಕ್ಕೆ ಬ್ಲಾಕ್ ಮೇಲ್ ಮಾಡುವುದಕ್ಕೆ ಬರುತ್ತಾರೆ. ನಿಮ್ಮದು ನನ್ನ ಬಳಿ ಇದೆ. ಈಗ ಡಿಕೆ ಶಿವಕುಮಾರ್ ಅವರದ್ದು ತೆಗೆದಿದ್ದೇನೆ. ಅವರ ವಿರುದ್ಧ ಮತ್ತೊಂದು ಕೇಸಿನಲ್ಲಿ ಹೋರಾಟ ಮಾಡುತ್ತೇನೆ. ಅವರಿಹೆ ಇನ್ನೂ ಸಮಾಧಾನವಾಗಿಲ್ಲ ಎಂದಿದ್ದಾರೆ.