Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಟಿಕೆಟ್ ಕೈ ತಪ್ಪಿದ್ದು ಬೇಸರ ಇದೆ : ಕಾಂಗ್ರೆಸ್ ಸೇರುವ ಬಗ್ಗೆ ಡಿವಿ ಸದಾನಂದಗೌಡರು ಹೇಳಿದ್ದೇನು..?

01:23 PM Mar 21, 2024 IST | suddionenews
Advertisement

 

Advertisement

ಬೆಂಗಳೂರು: ಈ ಬಾರಿ ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದವರು ಡಿವಿ ಸದಾನಂದ ಗೌಡರು. ಆದರೆ ಬಿಜೆಪಿ ಆ ಕ್ಷೇತ್ರವನ್ನು ಶೋಭಾ ಕರಂದ್ಲಾಜೆ ಅವರಿಗೆ ನೀಡಿತ್ತು. ಇದು ಸಹಜವಾಗಿಯೇ ಸದಾನಂದ ಗೌಡರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಪಕ್ಷ ಬದಲಿಸುತ್ತಾರೆ. ಕಾಂಗ್ರೆಸ್ ಸೇರುತ್ತಾರೆ ಎಂಬ ಊಹಾಪೋಹ ಇತ್ತು. ಇದಕ್ಕೆ ಇಂದು ಸುದ್ದಿಗೋಷ್ಠಿ ಕರೆದು ಕ್ಲಾರಿಟಿ ನೀಡಿದ್ದಾರೆ.

ಸಂಜಯನಗರದ ಮನೆಯಲ್ಲಿ ಮಾತನಾಡಿರುವ ಸದಾನಂದಗೌಡರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಅಲ್ಲದೆ ನಾನು ಪಕ್ಷ ಶುದ್ಧೀಕರಣ ಮಾಡುವತ್ತ ಗಮನ ಹರಿಸುತ್ತೇನೆ. ಟಿಕೆಟ್ ಕೈತಪ್ಪಿದ್ದರಿಂದ ನೋವಾಗಿದ್ದು ನಿಜ. ಆದರೆ ನನ್ನ ಈ ಸ್ಥಿತಿಗೆ ಕಾರಣರಾದವರು ಖಂಡಿತ ಪಶ್ಚಾತ್ತಾಪ ಅನುಭವಿಸುತ್ತಾರೆ. ರಾಜ್ಯದಲ್ಲಿ ಪ್ರಧಾನಿ ಮೋದಿ ಪರವಾದ ವಾತಾವರಣ ಸೃಷ್ಟಿಯಾಗಬೇಕು. ಅವರು ಪರಿವರ್ತನೆಯ ಹರಿಕಾರ. ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು' ಎಂದಿದ್ದಾರೆ.

Advertisement

ಮೋದಿ ಹಾಗೂ ಬಿಜೆಪಿ ಕರ್ನಾಟಕದಲ್ಲಿ ಇರಬೇಕು. ಭ್ರಷ್ಟಾಚಾರವಾದ, ಜಾತಿವಾದ ಮುಕ್ತವಾದ ಪಕ್ಷ ಬಿಜೆಪಿ ಆಗಬೇಕು. ಶುದ್ಧೀಕರಣ ಅಭಿಯಾನಕ್ಕೆ ವೇಗ ಕೊಡುವುದಕ್ಕೆ ನನ್ನಿಂದ ಮಾತ್ರ ಸಾಧ್ಯ‌. ನಾನು ಪಕ್ಷಕ್ಕಾಗಿ‌ ಕೆಲಸ ಮಾಡಿದ ನಿಷ್ಠಾವಂತ ಕಾರ್ಯಕರ್ತ. ನಾನು ಸಿಂಗಲ್ ಮ್ಯಾನ್ ಆರ್ಮಿ ಅಲ್ಲ. ಪಕ್ಷದಲ್ಲಿಯೂ ಒಂದಷ್ಟು ಜನರು ಶುದ್ಧೀಕರಣ ಬಯಸುತ್ತಿದ್ದಾರೆ. ಪಕ್ಷದ ಜವಾಬ್ದಾರಿ ವಹಿಸಿದವರು ಸ್ವಾರ್ಥಿಗಳಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬ, ಮಕ್ಕಳು, ಜಾತಿ ತನ್ನವರಿಗೆ ಸೀಮಿತ ಮಾಡಿದ್ದಾರೆ. ಮೋದಿಯವರ ಮೇರಾ ದೇಶ್ ಮೇರಾ ಪರಿವಾರ್ ಆಗಬೇಕು ಎಂದು ಡಿವಿ ಸದಾನಂದಗೌಡರು ಹೇಳಿದ್ದಾರೆ. ಇದೆ ವೇಳೆ ತಾನೂ ಕಾಂಗ್ರೆಸ್ ಸೇರಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Advertisement
Tags :
bengaluruchitradurgaCongressDV Sadanand Gowdasuddionesuddione newsticketಕಾಂಗ್ರೆಸ್ಚಿತ್ರದುರ್ಗಟಿಕೆಟ್ಡಿವಿ ಸದಾನಂದಗೌಡರುಬೆಂಗಳೂರುಬೇಸರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article