For the best experience, open
https://m.suddione.com
on your mobile browser.
Advertisement

ನನ್ನ ಫ್ಯಾನ್ಸ್ ಒಳ್ಳೆಯವರು ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ : ಕಿಚ್ಚ ಸುದೀಪ್

01:59 PM Sep 02, 2024 IST | suddionenews
ನನ್ನ ಫ್ಯಾನ್ಸ್ ಒಳ್ಳೆಯವರು ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ   ಕಿಚ್ಚ ಸುದೀಪ್
Advertisement

ಬೆಂಗಳೂರು: ಇಂದು ಕಿಚ್ಚ ಸುದೀಪ್ ಹುಟ್ಟುಹಬ್ಬ. 51ನೇ ವಸಂತಕ್ಕೆ ಕಾಲಿಟ್ಟಿರುವ ಸುದೀಪ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಜಯನಗರದ ಎಂಇಎಸ್ ಗ್ರೌಂಡ್ ನಲ್ಲಿ ಅಭಿಮಾನಿಗಳಿಗೋಸ್ಕರವೇ ಸಮಯ ಮೀಸಲಿಟ್ಟಿದ್ದರು. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಅಭಿಮಾನಿಗಳ ಜೊತೆಗೆ ಸಮಯ ಕಳೆದಿದ್ದಾರೆ. ಅಭಿಮಾನಿಗಳಿಗೆ ಕೇಕ್, ಹಾರ ಏನನ್ನು ತರಬೇಡಿ ಎಂದೇ‌ ಮನವಿ ಮಾಡಿದ್ದರು. ಫ್ಯಾನ್ಸ್ ಕೂಡ ತಮ್ಮ ನೆಚ್ಚಿನ ನಟನ ದರ್ಶನ ಮಾಡಿ ಖುಷಿ ಪಟ್ಟಿದ್ದಾರೆ.

Advertisement
Advertisement

ಇದೇ ವೇಳೆ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ ಕಿಚ್ಚ ಸುದೀಪ್, ಅಭಿಮಾನಿಗಳು ತೋರಿಸುವ ಪ್ರೀತಿಯಿಂದ ಇವತ್ತು ನಾನಿಲ್ಲಿದ್ದೀನಿ. ಅಭಿಮಾನಿಗಳು ನನ್ನ ಪ್ರತಿಬಿಂಬ. ಹೋದಲೆಲ್ಲಾ ತಲೆ ಎತ್ತಿ ಓಡಾಡ್ತೀನಿ ಅಂದ್ರೆ ಅದಕ್ಕೆ ಕಾರಣ ನನ್ನ ಅಭಿಮಾನಿಗಳೆ. ಅಭಿಮಾನಿಗಳಿಗೆ ಕಳಂಕ ತರುವ ಕೆಲಸವನ್ನು ನಾನು ಯಾವತ್ತು ಮಾಡಲ್ಲ. ಬರೀ ಸಿನಿಮಾದಿಂದ ಹೀರೋ ಆಗುವುದಕ್ಕೆ ಆಗಲ್ಲ. ವ್ಯಕ್ತಿತ್ವದಿಂದ ನಾವೂ ಒಳ್ಳೆ ವ್ಯಕ್ತಿಯಾಗಬೇಕು. ನಾವು ಬೆಳಗ್ಗೆ ಎದ್ದ ಕೂಡಲೇ ಮುಖಕ್ಕೆ ಮೇಕಪ್ ಹಾಕೋದೆ ನಿಮಗೋಸ್ಕರ.

ಅಭಿಮಾನಿಗಳಿಂದ ಬರುವ ಕೂಗು ನನ್ನನ್ನು ತಗ್ಗಿಸಿ, ಬಗ್ಗಿಸಿ ನಡೆಯುವಂತೆ ಮಾಡುತ್ತದೆ. ನನ್ನ ಫ್ಯಾನ್ಸ್ ಒಳ್ಳೆಯವರು, ಅದಕ್ಕೆ ನಾನು ಒಳ್ಳೆಯವನಾಗಿದ್ದೇನೆ. ನನ್ನ ಅಭಿಮಾನಿಗಳಿಂದ ನಾನು. ಆದಷ್ಟು ಬೇಗ ಮ್ಯಾಕ್ಸ್ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇನೆ. ಈ ಸಿನಿಮಾ ತಡವಾಯ್ತು. ಆದಷ್ಟು ಬೇಗ ರಿಲೀಸ್ ಡೇಟ್ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ.

Advertisement

ಮ್ಯಾಕ್ಸ್ ಸಿನಿಮಾ ಅನೌನ್ಸ್ ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಬಿಗ್ ಬಾಸ್ ಕೂಡ ಸರ್ಪೈಸ್ ನೀಡುತ್ತಿದೆ. ಅತಿ ಶೀಘ್ರದಲ್ಲಿಯೇ ಬಿಗ್ ಬಾಸ್ ಕೂಡ ಆರಂಭವಾಗಲಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಡಬ್ಬಲ್ ಧಮಾಕ.

Advertisement

Tags :
Advertisement