For the best experience, open
https://m.suddione.com
on your mobile browser.
Advertisement

ಹೈಕಮಾಂಡ್ ನಿರ್ಧಾರಕ್ಕೆ‌ ನಾನು ಬದ್ಧ, ಸಚಿವ ಸ್ಥಾನ ಬಿಟ್ಟುಕೊಡಬೇಕೆಂದರೆ ಬಿಟ್ಟುಕೊಡುತ್ತೇನೆ : ಸಚಿವ ಪರಮೇಶ್ವರ್

06:56 PM Oct 31, 2023 IST | suddionenews
ಹೈಕಮಾಂಡ್ ನಿರ್ಧಾರಕ್ಕೆ‌ ನಾನು ಬದ್ಧ  ಸಚಿವ ಸ್ಥಾನ ಬಿಟ್ಟುಕೊಡಬೇಕೆಂದರೆ ಬಿಟ್ಟುಕೊಡುತ್ತೇನೆ   ಸಚಿವ ಪರಮೇಶ್ವರ್
Advertisement

Advertisement
Advertisement

ಬೆಂಗಳೂರು : ಪಕ್ಷ ಅಧಿಕಾರಕ್ಕೆ ಬಂದಾಗ ಆ ಪಕ್ಷದಲ್ಲಿರುವವರು ಸಚಿವ ಸ್ಥಾನಕ್ಕಾಗಿ ನಿರೀಕ್ಷೆ ಮಾಡುತ್ತಾರೆ. ಆದರೆ ಎಲ್ಲರಿಗೂ ಸಚುವ ಸ್ಥಾನ ಸಿಗಲ್ಲ. ಇದೀಗ ಸಚಿವ ಸ್ಥಾನ ತ್ಯಾಗ ಮಾಡುವ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿದ್ದಾರೆ. ಹೈಕಮಾಂಡ್ ಯಾರಿಗೆ ಸಚುವ ಸ್ಥಾನ ಬಿಟ್ಟುಕೊಡು ಎನ್ನುತ್ತೋ ಅವರಿಗೆ ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.

Advertisement

Advertisement
Advertisement

ಮಂತ್ರಿಯಾಗಬೇಕು ಎಂದು ಎಲ್ಲಾ ಶಾಸಕರು ಬಯಸುವುದು ಒಳ್ಳೆಯದೆ. ಆದರೆ ಇದರ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಇಂಥವರಿಗೆ ಸಚಿವ ಸ್ಥಾನ ಬಿಟ್ಟುಕೊಡಿ ಎಂದು ಹೈಕಮಾಂಡ್ ಹೇಳಿದರೆ, ನಾನು ಬಿಟ್ಟುಕೊಡುತ್ತೇನೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ ಎಂದಿದ್ದಾರೆ. ಇದೆ ವೇಳೆ ಡಿಸಿಎಂ ಗಳ ವಿಚಾರವಾಗಿ ಮಾತನಾಡಿ, ಮೂರು ಡಿಸಿಎಂಗಳ ಹುದ್ದೆ ಬಹಳ ಹಳೆಯದು. ಯಾರಿಗೆ, ಯಾವ ಹುದ್ದೆ ಕೊಡಬೇಕು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತೆ. ಯಾವ ಸಂದರ್ಭದಲ್ಲಿ ಹುದ್ದೆ ಕೊಡಬೇಕು ಎಂಬುದು ಕೂಡ ಹೈಕಮಾಂಡ್ ಗೆ ಬಿಟ್ಟಿದ್ದು ಎಂದಿದ್ದಾರೆ.

ಇದೆ ವೇಳೆ ಬಿಜೆಪಿಯವರ ಬಗ್ಗೆ ಮಾತನಾಡಿದ್ದು, ಬಿಜೆಪಿಯವರಿಗೆ ನಮ್ಮ ಪಕ್ಷದ ಮೇಲೆ ಹೆಚ್ಚು ಆಸಕ್ತಿ ಇದ್ದಂತೆ ಕಾಣುತ್ತದೆ. ನಮ್ಮ ಬಗ್ಗೆ ಮಾತ್ರ ಮಾತನಾಡುತ್ತಾರೆ. ಅವರ ಪಕ್ಷದ ವಿಚಾರವಾಗಿ ಹೆಚ್ಚು ಮಾತನಾಡಲ್ಲ, ತಲೆಕೆಡಿಸಿಕೊಳ್ಳಲ್ಲ. ನಮ್ಮ ಪಕ್ಷದ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಪ್ರವಾಸದ ಬಗ್ಗೆಯೂ ಮಾತನಾಡಿದ್ದು, ಯಾರೆಲ್ಲಾ ಹೋಗುತ್ತಿದ್ದಾರೆ, ಯಾಕೆ ಹೋಗುತ್ತಿದ್ದಾರೆ ಗೊತ್ತಿಲ್ಲ. ಸುತ್ತಾಡುವುದಕ್ಕೆ ಹೋಗುತ್ತಿದ್ದಾರಾ ಗೊತ್ತಿಲ್ಲ. ದುಬೈನಲ್ಲಿ ನಮ್ಮ ಕನ್ನಡಪರ ಸಂಘಟನೆಗಳು ಇದಾವೆ, ಅವುಗಳು ಏನಾದರೂ ಕರೆದಿದವಾ ಗೊತ್ತಿಲ್ಲ ಎಂದು ಸತೀಶ್ ಜಾರಕಿಹೊಳಿ ಅವರ ದುಬೈ ಪ್ರವಾಸದ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

Advertisement
Tags :
Advertisement