ನನ್ನದು ತೆರೆದ ಪುಸ್ತಕ, ಮ್ಯಾಚ್ ಫಿಕ್ಸಿಂಗ್ ಇಲ್ಲ, ಸರ್ವಾಧಿಕಾರಿಯೂ ಅಲ್ಲ : ರೇಣುಕಾಚಾರ್ಯ ಹೀಂಗದಿದ್ಯಾಕೆ..?
ದಾವಣಗೆರೆ: ಕಾಂಗ್ರೆಸ್ ಒಡೆದ ಮನೆಯಾಗಿದೆ. ಕೇವಲ ಮೂರಷ್ಟೇ ಅಲ್ಲ, ತ್ರಿವಳಿ ಡಿಸಿಎಂ ಅಲ್ಲ. ಈಗೇನು ಮುಖ್ಯಮಂತ್ರಿ ಹೊರತುಪಡಿಸಿದೆಯಲ್ಲ, 32 ಸ್ಥಾನವನ್ನು ಡಿಸಿಎಂ ಸ್ಥಾನವೆಂದು ಘೋಷಿಸಲಿ. ಈ ಬಿಟ್ಟಿ ಭರವಸೆಗಳು, ಎಲ್ಲವೂ ಬೋಗಸ್ ಅದು ಅಂತ ಕಾಂಗ್ರೆಸ್ ಮೇಲೆ ಎಂ ಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಇದೆ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಸೇರಿ 28 ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದಿದ್ದಾರೆ.
ನಾಳೆ ಕುಮಾರಸ್ವಾಮಿ ಅವರು ದೆಹಲಿಗೆ ಹೋಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಹೋಗ್ಲಿ ಬಿಡು, ಅವರು ನಮ್ಮ ಪಲ್ಷದವರೇ. ಸೀಟು ಎಷ್ಟು ಕೊಡುತ್ತಾರೆ ಬಿಡುತ್ತಾರೆ ಎಂಬುದನ್ನು ಹೇಳುವುದಕ್ಕೆ ನಾನು ಯಾರು..? ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ನರೇಂದ್ರ ಮೋದಿ, ಅಮಿತ್ ಶಾ, ಭಾರತೀಯ ಜನತಾ ಪಾರ್ಟಿ, ಜೆಡಿಎಸ್ ಒಟ್ಟಾಗಿ ಹೋಗಬೇಕು. ಬರೀ ಸೀಟು ಹೊಂದಾಣಿಕೆ ಮಾತ್ರವಲ್ಲ, ಭಿನ್ನಾಭಿಪ್ರಾಯ, ಸಂಘರ್ಷಗಳನ್ನು ಬಿಡಬೇಕು. ಸಾಮರಸ್ಯದಿಂದ ಹೋದರೆ 28ಕ್ಕೆ 28 ಸೀಟು ಖಂಡಿತ ಗೆಲ್ಲುತ್ತೇವೆ. ಕಾಂಗ್ರೆಸ್ ಧೂಳಿಪಟವಾಗುತ್ತದೆ ಎಂದಿದ್ದಾರೆ. ರಾಮನ ಜಪ ಮಾಡಿ ಎಂದರೆ ಮಾತೆತ್ತಿದ್ದರೆ ಅಲ್ಲ ಅಲ್ಲ ಅಂತಾರೆ. ನಾವೂ ಅಲ್ಲ ವಿರೋಧಿಗಳಲ್ಲ. ಈ ಸರ್ಕಾರಕ್ಕೆ ರಾಮನ ಕರಸೇವಕರ ಶಾಪ, ರೈತರ ಶಾಪ, ಮಹಿಳೆಯರ ಶಾಪ ತಟ್ಟುತ್ತದೆ. ಈ ಮೂಲಕ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಕಾದು ನೋಡಿ ಎಂದು ಗರಂ ಆಗಿದ್ದಾರೆ.
ಲೋಕಸಭೆಗೆ ರೇಣುಕಾಚಾರ್ಯ ನಿಲ್ಲುತ್ತಾರಾ ಎಂಬ ಹೇಳಿಕೆಗೆ, ಇಲ್ಲಿ ರೇಣುಕಾಚಾರ್ಯ ಯಾವತ್ತಿಗೂ ತೆರೆದ ಹೃದಯ. ಮ್ಯಾಚ್ ಫಿಕ್ಸಿಂಗ್ ಇಲ್ಲ, ಸರ್ವಾಧಿಕಾರಿಯೂ ಅಲ್ಲ, ದಾವಣಗೆರೆ ಜಿಲ್ಲೆಯಿಂದ ಬಿಜೆಪಿ ಲೋಕಸಭೆ ಗೆಲ್ಲಬೇಕು ಎಂಬುದಿದೆ. ರೇಣುಕಾಚಾರ್ಯ ಆಸೆ ಮಾತ್ರವಲ್ಲ, ಜಿಲ್ಲೆಯ ಪ್ರತಿಯೊಬ್ಬ ಮತದಾರನ ಆಸೆ. ಸಮೀಕ್ಷೆ ಮಾಡಿಸಲಿ. ಅದರಲ್ಲಿ ಹೆಚ್ಚು ಅಂಕ ಬಂದವರಿಗೆ ಟಿಕೆಟ್ ನೀಡಲಿ. ಅವರಿಗಾಗಿ ನಾವೂ ದುಡಿಯುತ್ತೇವೆ ಎಂದಿದ್ದಾರೆ.