ಚಿನ್ನದ ಬೆಲೆಯಲ್ಲಿ ಇಳಿಕೆ....!
ಕಳೆದ ಕೆಲವು ದಿನಗಳಿಂದ ಚಿನ್ನ ಏರಿದರೆ ಇಳಿಕೆಯತ್ತಲೂ ಸಾಗುತ್ತಿದೆ. ಇಂದು ಚಿನ್ನದ ದರ ಇಳಿಕೆಯಾಗಿದ್ದು, ಇದೇ ರೀತಿ ಇಳಿಕೆಯಾದರೆ ಮಹಿಳಾ ಮಣಿಗಳು ಫುಲ್ ಖುಷಿಯಾಗಿ ಬಿಡುತ್ತಾರೆ. 22 ಕ್ಯಾರೆಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 550 ರೂಪಾಯಿ ಇಳಿಕೆಯಾಗಿದೆ.
ಇಷ್ಟು ದಿನ ಆಭರಣ ಚಿನ್ನ ಏರಿಕೆಯಾಗುತ್ತಲೆ ಬರುತ್ತಿತ್ತು. ಈಗ ಹಲವು ದಿನಗಳ ಬಳಿಕ ಇಳಿಕೆಯಾಗಿದೆ. ಇನ್ನು 24 ಕ್ಯಾರಟ್ ಚಿನ್ನದ ದರದಲ್ಲಿ ಹತ್ತು ಗ್ರಾಂಗೆ 600 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ 10 ಗ್ರಾಂಗೆ 78,870 ರೂಪಾಯಿ ಆಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಪ್ರಸ್ತುತ 72,300 ಆಗಿದೆ. ಬೆಳ್ಳಿ ಬೆಲೆಯಲ್ಲೂ ಕೊಂಚ ಇಳಿಕೆಯಾಗಿದ್ದು 100 ಗ್ರಾಂ ಬೆಳ್ಳಿಯಲ್ಲಿ 3000 ರೂಪಾಯಿ ಇಳಿಕೆಯಾಗಿದೆ. ಈ ಮೂಲಕ ಒಂದು ಕೆಜೊ ಬೆಳ್ಳಿಗೆ 93,500 ಆಗುತ್ತದೆ.
ಇವತ್ತಿನ ಇಳಿಕೆ ಮಹಿಳಾ ಮಣಿಗಳಿಗೆ ಸಂತಸ ತಂದಿದೆ. ಡಿಸೆಂಬರ್ 14ರಿಂದ ಜನವರಿ 15ರವರೆಗೂ ಯಾವುದೇ ರೀತಿಯ ಮದುವೆ, ಶುಭ ಸಮಾರಂಭಗಳು ನಡೆಯುವುದಿಲ್ಲ. ಹೀಗಾಗಿ ಆ ಸಮಯಕ್ಕೆ ಚಿನ್ನದ ಸರ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಚಿನ್ನ ಬೆಳ್ಳಿ ದರ ಏರಿಕೆಯಾಗುತ್ತಿರುವುದನ್ನು ನೋಡಿದರೆ ಮಧ್ಯಮ ವರ್ಗದವರಿಗೆ ಚಿನ್ನದ ಮೇಲಿನ ಆಸಕ್ತಿ ಹೋಗಿ ಭಯ ಬರಬೇಕು ಆ ರೀತಿಯಾಗುತ್ತಿದೆ. ಬರೀ ಹತ್ತು ಗ್ರಾಂ ಚಿನ್ನ ತೆಗೆದುಕೊಳ್ಳಲು 70-80 ಸಾವಿರ ರೂಪಾಯಿ ವ್ಯಯಿಸಬೇಕು ಎಂದರೆ ಎಲ್ಲಿಂದ ತರುತ್ತಾರೆ. ಇನ್ಮೇಲೆ ಏನಿದ್ರು ಶ್ರೀಮಂತರ ಪಾಲಿಗಷ್ಟೇ ಎನಿಸುತ್ತದೆ ಚಿನ್ನ.