Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೆ ಶಿವರಾಮ್ ಅವರ ಬಾಲ್ಯ ಹೇಗಿತ್ತು..? ಐಎಎಸ್ ಬಿಟ್ಟು ಸಿನಿಮಾ ರಂಗಕ್ಕೆ ಬಂದಿದ್ದೇಕೆ..?

08:00 PM Feb 29, 2024 IST | suddionenews
Advertisement

ಬೆಂಗಳೂರು: ನಟ, ರಾಜಕಾರಣಿ ಮಾಜಿ ಐಎಎಸ್ ಅಧಿಕಾರಿ ಕೆ ಶಿವರಾಮ್ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಕೆ ಶಿವರಾಮ್ ಅವರಿಗೆ ಹೃದಯಾಘಾತವೂ ಸಂಭವಿಸಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ. ಕೆ ಶಿವರಾಮ್ ಅವರು ಕನ್ನಡದಲ್ಲಿಯೇ ಬರೆದು ಮೊದಲ ಕನ್ನಡಿಗರೆಂಬ ಹೆಗ್ಗಳಿಕೆ ಇವರದ್ದಾಗಿತ್ತು. ಆದರೆ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

Advertisement

 

ಕೆ ಶಿವರಾಮ್ ಅವರು, ಇವರ ಪೂರ್ತಿ ಹೆಸರು ಶಿವರಾಮ್ ಕೆಂಪಯ್ಯ ಎಂದು. ರಾಮನಗರದ ಉರಗಲ್ಲಿ ಎಂಬ ಗ್ರಾಮದಲ್ಲಿ 1953 ಏಪ್ರಿಲ್ 6 ರಂದು ಜನಿಸಿದವರು. ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಮುಗಿಸಿ, ಬೆಂಗಳೂರಿಗೆ ಬಂದರು. ಮಲ್ಲೇಶ್ವರಂನಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದ್ದರು. ಅದರ ಜೊತೆಗೆನೆ ಶೀಘ್ರಲಿಪಿ ಕೋರ್ಟ್ ಹಾಗೂ ಕನ್ನಡದ ಟೈಪಿಂಗ್ ಕೂಡ ಮುಗಿಸಿದ್ದರು. ಬಳಿಕ ಸರ್ಕಾರಿ ಉದ್ಯೋಗವನ್ನು ಪಡೆದರು.

Advertisement

1973ರಲ್ಲಿ ಅಪರಾಧ ತನಿಖಾ ವಿಭಾಗ ಸೇರಿದರು. ಸರ್ಕಾರಿ ಉದ್ಯೋಗ ಮಾಡುತ್ತಲೆ, ಎರಡು ಪದವಿಯನ್ನು ಪಡೆದರು. 1982ರಲ್ಲಿ ಮೈಸೂರು ವಿವಿಯಿಂದ ಮಾಸ್ಟರ ಆಫ್ ಹಾರ್ಟ್ ಪದವಿಯನ್ನು ಪಡೆದರು. 1985ರಲ್ಲಿ ಕೆಎಎಸ್ ನಲ್ಲಿ ಪಾಸಾಗಿ ಉಪ ಪೊಲೀಸ್ ಅಧೀಕ್ಷಕರಾಗಿ ಆಯ್ಕೆಯಾದರು. 1986ರಲ್ಲಿ ಕರ್ನಾಟಕ ಆಡಳಿತ ಸೇವಾ ಪರೀಕ್ಷೆಯನ್ನು ಬರೆದು ಒಂದನೇ ರ್ಯಾಂಕ್ ಬರುತ್ತಾರೆ. ಸಹಾಯಕ ಪೊಲೀಸ್ ಕಮಿಷನರ್ ಆಗಿಯೂ ಸೇವೆ ಸಲ್ಲಿಸುತ್ತಾರೆ. ಬಳಿಕ ಐಎಎಸ್ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ. ಕನ್ನಡದಲ್ಲಿಯೇ ಪರೀಕ್ಷೆ ಬರೆದು ಪಾಸಾಗುತ್ತಾರೆ. ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಪಾಸ್ ಆದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಅವರ ತಂದೆ ನಾಟಕಗಳನ್ನು ಕಲಿಸಿಕೊಡುವ ಟೀಚರ್ ಆಗಿದ್ದರು. ಕೆ ಶಿವರಾಮ್ ಅವರು ಕೂಡ ನಂತರದ ದಿನಗಳಲ್ಲಿ ಬಣ್ಣದ ಲೋಕಕ್ಕೆ ಬರುತ್ತಾರೆ. ಹಲವು ಸಿನಿಮಾಗಳನ್ನು ಮಾಡುತ್ತಾರೆ.

Advertisement
Tags :
bangalorecinema industryIasK ShivaramVeteran actor K Shivaramಐಎಎಸ್ಕೆ ಶಿವರಾಮ್ಬೆಂಗಳೂರುಸಿನಿಮಾ ರಂಗ
Advertisement
Next Article