ದರ್ಶನ್ ಹೆಲ್ತ್ ಕಂಡೀಷನ್ ಈಗ ಹೇಗಿದೆ..?
ಬೆಂಗಳೂರು: ಆರೋಗ್ಯ ಸಮಸ್ಯೆಯ ಕಾರಣದಿಂದಾನೇ ನಟ ದರ್ಶನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಅದು ಕೇವಲ ಆರು ವಾರಗಳ ಕಾಲ ಮಾತ್ರ. ಹೀಗಾಗಿ ದರ್ಶನ್ ತಮ್ಮ ಹೆಲ್ತ್ ಕಂಡೀಷನ್ ಬಗ್ಗೆ ಆಗಾಗ ಹೈಕೋರ್ಟ್ ಗೆ ಮಾಹಿತಿಯನ್ನು ನೀಡುತ್ತಲೆ ಇರಬೇಕು. ಇಂದು ಹೈಕೋರ್ಟಗ ಗೆ ದರ್ಶನ್ ಪರ ವಕೀಲರು ಹೆಲ್ತ್ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ. ಈ ವರದಿಯಲ್ಲಿ ದರ್ಶನ್ ಈಗ ಹೇಗಿದ್ದಾರೆ ಎಂಬುದನ್ನು ತಿಳಿಸಲಾಗಿದೆ.
ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನರ ರೋಗ ತಜ್ಞ ಡಾ.ನವೀನ್ ಮತ್ತು ಅವರ ತಂಡ ದರ್ಶನ್ ಅವರನ್ನು ಪರೀಕ್ಷೆ ಮಾಡುತ್ತಿದೆ. ಬೆನ್ನು ನೋವು ಜಾಸ್ತಿಯಾಗಿರುವ ಕಾರಣ ಸದ್ಯಕ್ಕೆ ಎಂಆರ್ಐ, ಸ್ಕ್ಯಾನಿಂಗ್ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಿ, ಎಕ್ಸಾಮಿನೇಷನ್ ನಲ್ಲಿ ಇರಿಸಿದೆ. ಈ ಸಂಬಂಧ ವಕೀಲರು ಹೈಕೋರ್ಟ್ ನ ಫೈಲಿಂಗ್ ಕೌಂಟರ್ ಗೆ ವರದಿ ಸಲ್ಲಿಸಿದ್ದಾರೆ.
ವೈದ್ಯರು ಹೈಕೋರ್ಟ್ ಗೆ ನೀಡಿರುವ ವರದಿ ಪ್ರಕಾರ ದರ್ಶನ್ ಅವರಿಗೆ ಈಗಾಗಲೇ ಚಿಕಿತ್ಸೆ ಶುರುವಾಗಿದ್ದು, ಎಲ್4, ಎಸ್1 ಗೆ ಫಿಸಿಯೋ ಥೆರಪಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ. ಆದರೆ ಇದೆ ಚಿಕಿತ್ಸೆ ಅಂತಿಮ ಅಲ್ಲ. ಸರ್ಜರಿ ಮಾಡುವ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಸರ್ಜರಿಯ ಬಗ್ಗೆ ಸಂಪೂರ್ಣ ವಿವರನ್ನು ರೋಗಿಗೆ ನೀಡಲಾಗಿದೆ. ಅವರು ಒಪ್ಪಿದ ಬಳಿಕೆ ಸರ್ಜರಿ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. ಸರ್ಜರು ಮಾಡಬೇಕಾ ಅಥವಾ ಬೇಡವಾ ಎಂಬುದು ಆನಂತರ ನಿರ್ಧಾರ ಮಾಡುತ್ತೇವೆ. ಆತ ಒಪ್ಪಿದ ಬಳಿಕ ನೋಡಿ ತೀರ್ಮಾನ ಮಾಡುತ್ತೇವೆ ಎಂದು ದರ್ಶನ್ ಪರೀಕ್ಷೆ ಮಾಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಆ ವರದಿಯನ್ನು ವಕೀಲರು ಹೈಕೋರ್ಟ್ ಗೆ ತಲಯಪಿಸಿದ್ದಾರೆ.