ರಾಮಲಲ್ಲಾ ಮೂರ್ತಿಯ ಕೆತ್ತನೆ ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಿತ್ತು..? ಮಾಹಿತಿ ಬಿಚ್ಚಿಟ್ಟರು ಪೇಜಾವರಶ್ರೀ
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಗಾಗಿ ಇಡೀ ದೇಶದ ಜನ ಕಾಯುತ್ತಿದ್ದಾರೆ. ಅಯೋಧ್ಯೆಯಂತೂ ಮಧುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಇನ್ನು ಕೇವಲ ಮೂರು ದಿನಗಳು ಮಾತ್ರ ಈ ಅದ್ಭುತವನ್ನು ಕಣ್ತುಂಬಿಕೊಳ್ಳಲು ಸಮಯ ಬಂದೇ ಬಿಡುತ್ತದೆ. ರಾಮಲಲ್ಲಾ ಮೂರ್ತಿಯ ಕೆತ್ತನೆ ಆಗಿದ್ದು ನಮ್ಮ ರಾಜ್ಯದಿಂದ. ಅದು ಹೇಗಾಯ್ತು..? ಶಿಲ್ಪಿಯ ಆಯ್ಕೆ ಹೇಗಾಯ್ತು..? ಶಿಲೆಗೆ ಏನೆಲ್ಲಾ ಹೇಳಿದ್ದರು ಈ ಎಲ್ಲಾ ಪ್ರಶ್ನೆಗಳು ಕಾಡದೆ ಇರುವುದಿಲ್ಲ. ಅದಕ್ಕೆಲ್ಲ ಪೇಜಾವರ ಶ್ರೀಗಳೇ ಉತ್ತರ ನೀಡಿದ್ದಾರೆ.
ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ಪೇಜಾವರ ಶ್ರೀಗಳು, ರಾಮ ಮಂದಿರಕ್ಕಾಗಿ ಪ್ರತಿಮೆ ನಿರ್ಮಾಣ ಮಾಡಬೇಕು ಎಂದಾಗ, ಮೂರು ಪ್ರತಿಮೆಗಳ ನಿರ್ಮಾಣವಾಗಲಿ ಎಂದರು. ಯಾಕಂದ್ರೆ ಕಡೆ ಗಳಿಗೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಯಾವುದೇ ಸಮಸ್ಯೆ ಎದುರಾಗಬಾರದು ಎಂದು. ಬಳಿಕ ಯಾರ ಕೈಯಿಂದ ಮೂರ್ತಿ ಕೆತ್ತನೆ ಮಾಡಿಸುವುದು ಎಂಬ ಚರ್ಚೆ ಶುರುವಾದಾಗ, ಪ್ರಸಿದ್ಧ ಪಡೆದ ಎಲ್ಲಾ ಕಲಾವಿದರನ್ನು ಕರೆಸಲಾಗಿತ್ತು. ಅನುಭವ, ಕೆಲಸ ಹಂಚಿಕೊಳ್ಳಲು ಹೇಳಲಾಗಿತ್ತು. ಅದರಲ್ಲಿ ಮೂರು ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಆ ಮೂವರಲ್ಲಿ ಇಬ್ಬರು ಕರ್ನಾಟಕದವರೇ. ಮೂರ್ತಿ ಆಯ್ಕೆಯಾಗಿದ್ದು ಕೂಡ ಕರ್ನಾಟಕದ್ದೇ ಎಂಬುದು ಹೆಮ್ಮೆಯ ಸಂಗತಿ ಎಂದಿದ್ದಾರೆ.
ಸೆಲೆಕ್ಷನ್ ಕಮಿಟಿಯಲ್ಲೂ ಕರ್ನಾಟಕದಿಂದ ಪೇಜಾವರ ಶ್ರೀಗಳು ಮಾತ್ರ ಇದ್ದರಂತೆ. ಇನ್ನುಳಿದಂತೆ ಅಯೋಧ್ಯೆವರೇ ಇದ್ದರು. ಅದೃಷ್ಟವೆಂಬಂತೆ ಕರ್ನಾಟಕದ ಶಿಲೆಯೇ ಆಯ್ಕೆಯಾಗಿದ್ದು, ಆ ಶಿಲೆಗೆ ಬಳಸಿದ ಕಲ್ಲು ಸಹ ಕರ್ನಾಟಕದ್ದೆ ಆಗಿದೆ. ಇನ್ನುಳಿದ ಮೂರ್ತಿಗಳಿಗೂ ಮುಂದೆ ಯೋಗ್ಯವಾದ ಸ್ಥಳದಲ್ಲಿ ಪೂಜೆ ಸಲ್ಲಿಸಲಾಗುತ್ತದೆಯಂತೆ. ಜನವರಿ 22ಕ್ಕೆ ಕರ್ನಾಕಟದ ಶಿಲ್ಪಿ ಕೆತ್ತಿದ ರಾಮನ ಶಿಲೆ ಅನಾವರಣಗೊಳ್ಳಲಿದೆ.