For the best experience, open
https://m.suddione.com
on your mobile browser.
Advertisement

ಕನ್ನಡದಲ್ಲೂ ನಟಿಸಿದ್ದ ಹಾಟ್ ಬ್ಯೂಟಿ ನಿಧನ : ಪೂನಂ ಪಾಂಡೆ ಸಾವಿನಿಂದ ಬಾಲಿವುಡ್ ಶಾಕ್

03:42 PM Feb 02, 2024 IST | suddionenews
ಕನ್ನಡದಲ್ಲೂ ನಟಿಸಿದ್ದ ಹಾಟ್ ಬ್ಯೂಟಿ ನಿಧನ   ಪೂನಂ ಪಾಂಡೆ ಸಾವಿನಿಂದ ಬಾಲಿವುಡ್ ಶಾಕ್
Advertisement

Advertisement
Advertisement

ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ, ಪೂನಂ ಪಾಂಡೆ ಇಂದು ನಿಧನರಾಗಿದ್ದಾರೆ. ಪೂನಂ ಪಾಂಡೆ ನಿಧನದಿಂದ ಇಡೀ ಬಾಲಿವುಡ್ ಶಾಕಿಂಗ್ ನಲ್ಲಿದೆ‌. ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಬಹಿರಂಗ ಪಡಿಸಲಾಗಿದೆ.

ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಕನ್ನಡದಲ್ಲಿಯೂ ಸಿನಿಮಾಗಳನ್ನು ಮಾಡಿದ್ದರು‌. ಹಳ್ಳಿ ಹೈದ ಪ್ಯಾಟೇಗ್ ಬಂದ ಖ್ಯಾತಿಯ ರಾಜೇಶ್ ನಟನೆಯ 'ಲವ್ ಈಸ್ ಪಾಯಿಸನ್' ಸಿನಿಮಾದಲ್ಲಿ ಸೊಂಟ ಬಳುಕಿಸಿದ್ದರು. ಈ ಬಾಲಿವುಡ್ ನಟಿ ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ಆದರೆ ಕಳೆದ ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವಿಡಿಯೋದಲ್ಲಿ 'ಬಿಳಿ ಮತ್ತು ಕಪ್ಪು. ನನ್ನ ಒಳಗೆ ಮತ್ತು ಯೌವನದ ಜೀವನವನ್ನು ಸಮತೋಲನಗೊಳಿಸುತ್ತದೆ' ಎಂದು ಬರೆದುಕೊಂಡಿದ್ದರು. ಆದರೆ ಇಂದು ಅವರಿಲ್ಲ.

Advertisement
Advertisement

ಪೂನಂ ಪಾಂಡೆ ಮಾರ್ಚ್ 11ರ 1991ರಲ್ಲಿ ಕಾನ್ಸುರದಲ್ಲಿ ಜನಿಸಿದ್ದರು. ಈಗಿನ್ನು ಅವರ ವಯಸ್ಸು 32. ಪೂನಂ ಪಾಂಡೆ 2013ರಲ್ಲಿ ಬಾಲಿವುಡ್ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ನಶಾ ಸಿನಿಮಾದ ಮೂಲಕ ಬಣ್ಣ ಹಚ್ಚುವ ಮೂಲಕ ಮೊದಲ ಬಾರಿಗೆ ನಟಿಸಿದ್ದರು. 2020ರ ಸೆಪ್ಟೆಂಬರ್ ನಲ್ಲಿ ಸ್ಯಾಮ್ ಬಾಂಬೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ವೈವಾಹಿಕ ಜೀವನದಲ್ಲಿ ಹತ್ತನೇ ದಿನಕ್ಕೆ ಬಿರುಕು ಮೂಡಿತ್ತು. ಈಗ ನಟಿ ತನ್ನವರನ್ನೆಲ್ಲಾ ಬಿಟ್ಟು ಬಾರದೂರಿಗೆ ಹೋಗಿದ್ದಾರೆ.

Advertisement
Tags :
Advertisement