For the best experience, open
https://m.suddione.com
on your mobile browser.
Advertisement

ಹಿಂದೂ ಮಹಾಗಣಪತಿ ಉತ್ಸವ : ಕಂಗೊಳಿಸುತ್ತಿದೆ ಕೋಟೆನಾಡು

05:33 PM Sep 26, 2024 IST | suddionenews
ಹಿಂದೂ ಮಹಾಗಣಪತಿ ಉತ್ಸವ   ಕಂಗೊಳಿಸುತ್ತಿದೆ ಕೋಟೆನಾಡು
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 26 : ನಗರದಲ್ಲಿ ನಡೆಯುತ್ತಿರುವ ಹಿಂದೂ ಮಹಾ ಗಣಪತಿ ಶೋಭಾಯಾತ್ರೆಯ ಅಂಗವಾಗಿ ನಗರದ ವಿವಿಧ ವೃತ್ತಗಳಲ್ಲಿನ ಮೂರ್ತಿಗಳಿಗೆ ವಿಶೇಷವಾದ ಆಲಂಕಾರವನ್ನು ಮಾಡಲಾಗಿದೆ. ಪ್ರತಿ ವರ್ಷವೂ ಸಹಾ ಇದೆ ರೀತಿ ಅಲಂಕಾರವನ್ನು ಹಿಂದೂ ಮಹಾ ಗಣಪತಿ ಸೇವಾ ಸಮಿತಿಯವತಿಯಿಂದ ಮಾಡಲಾಗುತ್ತದೆ.

Advertisement

ನಗರದ ಮಜೆಸ್ಟಿಕ್ ವೃತ್ತದಲ್ಲಿನ ಮದಕರಿನಾಯಕರ ಪ್ರತಿಮೆ ಹಿಂಭಾಗದಲ್ಲಿ ಕೋಟೆಯ ಆಲಂಕಾರವನ್ನು ಮಾಡಲಾಗಿದ್ದು, ಮೆಲಗಡೆಯಲ್ಲಿ ಶಿವನ ವಿಗ್ರಹ ಅದೆ ತಲೆಯ ಮೇಲೆ ತ್ರಿಶೋಲವನ್ನು  ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ ಕೆಳಗಡೆಯಲ್ಲಿ ಅಕ್ಕ-ಪಕ್ಕದಲ್ಲಿ ಆನೆಗಳ ಮೂರ್ತಿಯನ್ನು ಇರಿಸಲಾಗಿದೆ. ಇದರೊಂದಿಗೆ ಕೋಟೆಯ ಭಾಗದಲ್ಲಿ ಹಸಿರಿನ ಸೋಬಗನ್ನು ನಿರ್ಮಾಣ ಮಾಡಲಾಗಿದೆ. ಮದಕರಿ ನಾಯಕನ ಪ್ರತಿಮೆಯ ಸುತ್ತಲೂ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.

Advertisement

ಇನ್ನೂ ಜಿಲ್ಲಾಧಿಕಾರಿಗಳ ಕಚೇರಿ ವ್ಥತ್ತದಲ್ಲಿನ ಒನಕೆ ಓಬವ್ವ ಪ್ರತಿಮೆಗೂ ಸಹಾ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ. ಚನ್ನಮ್ಮಳ ಹಿಂದೆಗಡೆಯಲ್ಲಿ ಕೋಟೆಯ ಅಲಂಕಾರವನ್ನು ಮಾಡಲಾಗಿದ್ದು, ದ್ವಾರ ಬಾಗಿಲನ್ನು ನಿರ್ಮಾಣ ಮಾಡಲಾಗಿದೆ ಇಲ್ಲಿ ಚನ್ನಮ್ಮ ಹೈದರಾಲಿ ಸೈನಿಕರನ್ನು ಸದೆ ಬಡಿಯುವ ಚಿತ್ರಕ್ಕೆ ಸೂಕ್ತವಾದ ಹೊಂದಾಣಿಕೆಯಾಗಿದೆ. ಇದರೊಂದಿಗೆ ವಿದ್ಯುತ್ ದೀಪದ ಅಲಂಕಾರವನ್ನು ಸಹಾ ಮಾಡಲಾಗಿದೆ.

ನಗರ ಪೋಲಿಸ್ ಠಾಣೇಯ ಮುಂಭಾಗದಲ್ಲಿನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೂ ಸಹಾ ಈ ಬಾರಿ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ಅಂಬೇಡ್ಕರ್ ರವರಿಗೆ ರಾಜರ ರೀತಿಯ ದ್ವಾರವನ್ನು ನಿರ್ಮಾಣ ಮಾಡಿ ಅದರಲ್ಲಿ ಅಂಬೇಡ್ಕರ್‍ರವರ ಪ್ರತಿಮೆಯನ್ನು ಇರಿಸಿದಂತೆ ಕಾಣುತ್ತಿದೆ. ಪ್ರತಿಮೆ ಮಧ್ಯದಲ್ಲಿ ದೇಶದ ಲಾಂಚನವಾದ ಗಂಡು ಬೇರುಡವನ್ನು ಇರಿಸಲಾಗಿದೆ.

ಇದರಿಂದ ಮುಂದಿನ ಮಹಾವೀರ ವೃತ್ತದಲ್ಲಿಯೂ ಸಹಾ ವಿಶೀಷ್ಟ ರೀತಿಯ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ಮಹಾವೀರ ಲಾಂಚನ ಇನ್ನೂ ನಿರ್ಮಾಣವಾಗುತ್ತಿರುವುದರಿಂದ ಅಲ್ಲಿ ರಾಜ ಮಹಾರಾಜ್ರ ಮನೆಯಲ್ಲಿ ಇರುವಂತ ದ್ವಾರ ಭಾಗಿಲುಗಳನ್ನು ನಿರ್ಮಾಣ ಮಾಡಲಾಗಿದೆ.ಅಕ್ಕ-ಪಕ್ಕದಲ್ಲಿ ದೊಡ್ಡದಾದ ಗಂಟೆಗಳನ್ನು ನಿರ್ಮಾನ ಮಾಡಲಾಗಿದೆ. ಮಧ್ಯದಲ್ಲಿ ಚಿತ್ತಾರವಾದ ಬಾಗಿಲು ಹಾಗೂ ವಿದ್ಯುತ್ ದೀಪದ ಅಲಂಕಾರಗಳನ್ನು ನಿರ್ಮಾಣ ಮಾಡಲಾಗಿದೆ.

ನಗರದ ತಾಲ್ಲೂಕು ಕಚೇರಿ ಹತ್ತಿರದ ವಾಸವಿ ವೃತಕ್ಕೂ ಸಹಾ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ. ವಾಸವಿ ವೃತ್ತವನ್ನು ಪೂರ್ಣವಾಗಿ ಕಂಭಗಳಿಂದ ಅಲಂಕಾರ ಮಾಡಿದ್ದು, ಹಿಂದೆ ಮುಂದಗಡೆಯಲ್ಲಿ ಮಹಿಳೆಯ ಪ್ರತಿಮೆಯನ್ನು ಇರಿಸಲಾಗಿದೆ. ಅಲ್ಲದೆ ಮೇಲಗಡೆಯಲ್ಲಿ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ. ಅದರ ಮೇಲಗಡೆಯಲ್ಲಿ ಆನೆಯ ಮುಖವನ್ನು ಇರಿಸಲಾಗಿದೆ.

ಹೋಳಲ್ಕೆರೆ ರಸ್ತೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೂ ಸಹಾ ಅಲಂಕಾರವನ್ನು ಮಾಡಲಾಗಿದೆ. ಇಲ್ಲಿ ರಾಯಣ್ಣನ ಹಿಂದೆಗಡೆಯಲ್ಲಿ ಅರಮನೆಯ ಚಿತ್ರದ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಕ್ಕ-ಪಕ್ಕದಲ್ಲಿ ಕಂಬಗಳನ್ನು ಇರಿಸಲಾಗಿದೆ. ಮೇಲಗಡೆಯಲ್ಲಿ ವಿಶೇಷವಾದ ಅಲಂಕಾರವನ್ನ ಸಹಾ ಮಾಡಲಾಗಿದೆ. ಸುತ್ತಲೂ ಸಹಾ ಅಡ್ಡ ಗೋಡೆಯನ್ನು ನಿರ್ಮಿಸಲಾಗಿದೆ.

ಇನ್ನೂ ಕೊನೆಯದಾಗಿ ಬರಗೇರಮ್ಮ ದೇವಾಲಯದ ಬಳಿಯಲ್ಲಿನ ಕನಕ ಪ್ರತಿಮೆಗೂ ಸಹಾ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ . ಇಲ್ಲಿ ಕನಕ ಮೂರ್ತಿಯ ಅಕ್ಕ-ಪಕ್ಕದಲ್ಲಿ ತಿರುಪತಿ ತಿಮಪ್ಪನ ಅಕ್ಕ-ಪಕ್ಕದಲ್ಲಿ ಇರುವಂತ ಶಂಕ- ಚಕ್ರವನ್ನು ನಿರ್ಮಾಣ ಮಾಡಲಾಗಿದೆ. ಮೇಲಗಡೆ ನವಿಲು ಕನಕನ ಮೂರ್ತಿಯ ಮೇಲೆ ತಿರುಪತಿ ತಿಮ್ಮಪ್ಪನ ನಾಮವನ್ನು ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಅಕ್ಕ-ಪಕ್ಕದಲ್ಲಿ ಕಂಭಗಳನ್ನು ಇರಿಸಿ ಅದಕ್ಕೆ ಛತ್ರಿಗಳನ್ನು ಜೋಡಿಸಿ ಶಿಲಾಬಾಲಕಿಯರನ್ನು ಇರಿಸಿ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ. ಕೆಳಗಡೆಯಲ್ಲಿ ಕೇಸರಿಯ ಅಲಂಕಾರವನ್ನು ಸಹಾ ಮಾಡಲಾಗಿದೆ.

ಇದ್ದಲ್ಲದೆ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನದ ಜೈನ್‍ಧಾಮದಿಂದ ಹಿಡಿದು ನಗರದ ಎಲ್ಲಾ ಬೀದಿಗಳಲ್ಲಿಯೂ ಸಹಾ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ ಅದರಲ್ಲೂ ಹಿಂದು ಮಹಾ ಗಣಪತಿ ಹೀಗುವ ಶೋಭಾಯತ್ರೆಯ ದಾರಿಯಲ್ಲಿ ಪೂರ್ಣವಾಗಿ ವಿದ್ಯುತ್ ದೀಪದ ಅಲಂಕಾರವನ್ನು ಮಾಡಲಾಗಿದೆ.

ಒಟ್ಟಿನಲ್ಲಿ ಸೆ. 28ರಂದು ನಡೆಯುವ ಶೋಭಾಯತ್ರೆಗೆ ಚಿತ್ರದುರ್ಗ ನಗರದ ಪೂರ್ಣವಾಗಿ ಸಜ್ಜಾಗಿದೆ, ಎಲ್ಲರ ಮನೆ ಹಾಗೂ ಮಳಿಗೆಯ ಮೇಲೂ ಸಹಾ ಕೇಸರಿ ಧ್ವಜಗಳನ್ನು ಹಾರಿಸಲಾಗಿದೆ. ಇದರೊಂದಿಗೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಜನತೆಯೂ ಸಹಾ ಇದರಲ್ಲಿ ಭಾಗವಹಿಸಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸುತ್ತಿದ್ದಾರೆ ಜಿಲ್ಲಾಡಳಿತ ಹಾಗೂ ರಕ್ಷಣಾ ಇಲಾಖೆಯೂ ಸಹಾ ಯಾವುದೇ ರೀತಿಯ ಗಲಾಟೆಗೆ ಅವಕಾಶ ನೀಡದಂತೆ ಎಚ್ಚರಿಕೆಯನ್ನು ವಹಿಸಿದೆ.

Tags :
Advertisement