ತುಮಕೂರು ಜಿಲ್ಲೆಯ ಕೇಸಲ್ಲಿ ಇತಿಹಾಸವನ್ನೇ ಸೃಷ್ಟಿಸಿದ ಹೈಕೋರ್ಟ್ : ಕನ್ನಡಿಗರಿಂದ ಬಹುಪರಾಕ್
ಬೆಂಗಳೂರು: ಕರ್ನಾಟಕ ಹೈಕೋರ್ಟ್ ಕನ್ನಡ ಭಾಷೆಯ ವಿಚಾರದಲ್ಲಿ ಇತಿಹಾಸ ಸೃಷ್ಟಿಸಿದೆ. ಇದೆ ಮೊದಲ ಬಾರಿಗೆ ಕನ್ನಡದಲ್ಲಿಯೇ ತೀರ್ಪು ನೀಡಿದೆ. ಭಾರತ ಭಾಷಾ ದಿನವಾದ ಇಂದು ಈ ಇತಿಹಾಸವನ್ನು ಸೃಷ್ಟಿ ಮಾಡಿದೆ. ನ್ಯಾಯಮೂರ್ತಿ ಎಂ.ದೀಕ್ಷಿತ್ ಮತ್ತು ಸಿ..ಎಂ.ಜೋಶಿ ಅವರು ವಿಭಾಗೀಯ ಪೀಠದಲ್ಲಿ ಕನ್ನಡದಲ್ಲಿಯೇ ತೀರ್ಪು ಪ್ರಕಟಿಸಲಾಗಿದೆ. ಈ ಮಹತ್ವದ ದಿನಕ್ಕೆ ಕನ್ನಡಿಗರ ಮನಸ್ಸು ಸಂತಸಗೊಂಡಿದೆ.
ಇನ್ನು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ನಂಜಾವಧೂತ ಸ್ವಾಮೀಜಿ ಅವರು ಸಲ್ಲಿಸಿದ್ದ ಮೂಲ ಮೇಲ್ಮನವಿಯನ್ನು ಪೀಠ ಪುರಸ್ಕರಿಸಿದೆ. ಈ ಪ್ರಕರಣದ ತೀರ್ಪನ್ನು ಪೀಠವೂ ಕ್ಙಡದಲ್ಲಿಯೇ ನೀಡಿದೆ. ಇಂಗ್ಲೀಷ್‌ನಲ್ಲಿ ಕೀಡ ತೀರ್ಪನ್ನು ಬರೆಯಲಾಗಿತ್ತು. ಆದರೆ ತೀರ್ಪಿನ ಆಪರೇಟಿವ್ ಭಾಗವನ್ನು ನ್ಯಾ.ಕೃಷ್ಣ ಎಸ್ ದೀಕ್ಷಿತ್ ಅವರು ಕನ್ನಡದಲ್ಲಿ ಓದಿದರು. ಬಳಿಕ 'ಕನ್ನಡದ ಅವಸಾನ ಆಗಬಾರದು ಎನ್ನುವುದಾದರೆ ಕನ್ನಡಕ್ಕೆ ಮಾನ್ಯತೆ ಸಿಗಬೇಕು. ಸಾಂವಿಧಾನಿಕ ಸಂಸ್ಥೆಗಳಲ್ಲೂ ಕನ್ನಡದಲ್ಲಿ ವ್ಯವಹಾರ ನಡೆಯಬೇಕು' ಎಂದು ಹೇಳಿದರು.
'ನಿನ್ನೆ ಭಾರತ ಭಾಷಾ ದಿನವಾದ ಹಿನ್ನೆಲೆ ಇಂದು ಕನ್ನಡದಲ್ಲಿಯೇ ತೀರ್ಪು ನೀಡುತ್ತಿದ್ದೇವೆ. ಭಾರತದ ಭಾಷೆಗಳಿಗೆ ಮಾನ್ಯತೆ ನೀಡುವುದೇ ಈ ದಿನದ ಉದ್ದೇಶವಾಗಿದೆ. ಹೀಗಾ ಹೊಸ ಟ್ರೆಂಡ್ ಸೆಟ್ ಮಾಡಲು ನಾವೂ ನಿರ್ಧರಿಸಿದ್ದೇವೆ. ಸದ್ಯಕ್ಕೆ ಎಲ್ಲಾ ತೀರ್ಪನ್ನು ಇಂಗ್ಲಿಷ್ ನಲ್ಲಿಯೇ ನೀಡುತ್ತಿದ್ದೇವೆ. ಹೀಗೆ ಆದರೆ ಸಾಮಾನ್ಯ ಜನರಿಗೆ ಅರ್ಥವಾಗುವುದೇಗೆ. ಕನ್ನಡದಲ್ಲಿಯೇ ಕೊಡುವುದರಿಂದ ಸಾಮಾನ್ಯ ಜನರಿಗೆ ಅರ್ಥವಾಗುತ್ತದೆ. ಈ ತೀರ್ಪಿನಿಂದ ಬೇರೆ ನ್ಯಾಯಮೂರ್ತಿಗಳಿಗೂ ಉತ್ತಮ ಸಂದೇಶ ಸಿಕ್ಕಂತೆ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.