Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ಸೇರಿದಂತೆ ರಾಜ್ಯದ ಕೊರೊನಾ ಮಾಹಿತಿ ಇಲ್ಲಿದೆ

07:04 PM Jan 10, 2024 IST | suddionenews
Advertisement

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್ ಕಳೆದ 24 ಗಂಟೆಯಲ್ಲಿ ಒಟ್ಟು 201 ಹೊಸದಾಗಿ ಕೇಸ್ ದಾಖಲಾಗಿದೆ. ಆರೋಗ್ಯ ಇಲಾಖೆಯಿಂದ ಪ್ರತಿದಿನವೂ ತಪಾಸಣೆ ನಡೆಯುತ್ತಿದೆ. ಕಳೆದ 24 ಗಂಟೆಯಲ್ಲಿ 7315 ಜನರಿಗೆ ಟೆಸ್ಟ್ ಮಾಡಲಾಗಿದೆ. ಅದರಲ್ಲಿ ಹೊಸದಾಗಿ 201 ಕೇಸ್ ಗಳು ದಾಖಲಾಗಿವೆ.

Advertisement

ಈ ಮೂಲಕ 974 ಸಕ್ರಿಯ ಪ್ರಕರಣಗಳು ಇದಾವೆ. ಬೆಂಗಳೂರು ನಗರ - 121, ಮೈಸೂರು -10, ತುಮಕೂರು -14 ಕೇಸ್ ದಾಖಲಾಗಿದ್ದು, ಚಿತ್ರದುರ್ಗದಲ್ಲಿ ಒಬ್ಬರಿಗೆ ಕಾಣಿಸಿಕೊಂಡಿದ್ದು, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಕೊಪ್ಪಳ, ಮಂಡ್ಯ, ಹಾಸನ, ವಿಜಯನಗರದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಇನ್ನು ಕಳೆದ 24 ಗಂಟೆಯಲ್ಲಿ 2.74 ಪಾಸಿಟಿವ್ ರೇಟಿಂಗ್ ಆಗಿದೆ. 6557 RTPCR ಟೆಸ್ಟ್, 758 RAT ಟೆಸ್ಟ್ ಮಾಡಲಾಗಿದೆ. 915 ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. 59 ಜನ ಆಸ್ಪತ್ರೆಯಲ್ಲಿದ್ದು, 12 ಜನ ಐಸಿಯುನಲ್ಲಿದ್ದಾರೆ. ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. 257 ಜನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

Advertisement

Advertisement
Tags :
balladrybangalorechitradurgacorona viruscovidCOVID 19 LIVE UPDATESdavanagerefeaturedhealth bulletinlive updatesnew DelhisuddioneVijayanagaraಕರೋನ ವೈರಸ್ ಲೈವ್ ಅಪ್ಡೇಟ್ಕೋವಿಡ್ ವರದಿಚಿತ್ರದುರ್ಗದಾವಣಗೆರೆನವದೆಹಲಿಬಳ್ಳಾರಿಬೆಂಗಳೂರುವಿಜಯನಗರಸುದ್ದಿಒನ್
Advertisement
Next Article