For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಸೇರಿದಂತೆ ರಾಜ್ಯದ ಕೊರೊನಾ ಮಾಹಿತಿ ಇಲ್ಲಿದೆ

07:04 PM Jan 10, 2024 IST | suddionenews
ಚಿತ್ರದುರ್ಗ ಸೇರಿದಂತೆ ರಾಜ್ಯದ ಕೊರೊನಾ ಮಾಹಿತಿ ಇಲ್ಲಿದೆ
Advertisement

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕೇಸ್ ಕಳೆದ 24 ಗಂಟೆಯಲ್ಲಿ ಒಟ್ಟು 201 ಹೊಸದಾಗಿ ಕೇಸ್ ದಾಖಲಾಗಿದೆ. ಆರೋಗ್ಯ ಇಲಾಖೆಯಿಂದ ಪ್ರತಿದಿನವೂ ತಪಾಸಣೆ ನಡೆಯುತ್ತಿದೆ. ಕಳೆದ 24 ಗಂಟೆಯಲ್ಲಿ 7315 ಜನರಿಗೆ ಟೆಸ್ಟ್ ಮಾಡಲಾಗಿದೆ. ಅದರಲ್ಲಿ ಹೊಸದಾಗಿ 201 ಕೇಸ್ ಗಳು ದಾಖಲಾಗಿವೆ.

Advertisement
Advertisement

ಈ ಮೂಲಕ 974 ಸಕ್ರಿಯ ಪ್ರಕರಣಗಳು ಇದಾವೆ. ಬೆಂಗಳೂರು ನಗರ - 121, ಮೈಸೂರು -10, ತುಮಕೂರು -14 ಕೇಸ್ ದಾಖಲಾಗಿದ್ದು, ಚಿತ್ರದುರ್ಗದಲ್ಲಿ ಒಬ್ಬರಿಗೆ ಕಾಣಿಸಿಕೊಂಡಿದ್ದು, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಗದಗ, ಹಾಸನ, ಕೊಪ್ಪಳ, ಮಂಡ್ಯ, ಹಾಸನ, ವಿಜಯನಗರದಲ್ಲಿ ಹತ್ತಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.

Advertisement

ಇನ್ನು ಕಳೆದ 24 ಗಂಟೆಯಲ್ಲಿ 2.74 ಪಾಸಿಟಿವ್ ರೇಟಿಂಗ್ ಆಗಿದೆ. 6557 RTPCR ಟೆಸ್ಟ್, 758 RAT ಟೆಸ್ಟ್ ಮಾಡಲಾಗಿದೆ. 915 ಜನ ಹೋಮ್ ಐಸೋಲೇಷನ್ ನಲ್ಲಿದ್ದಾರೆ. 59 ಜನ ಆಸ್ಪತ್ರೆಯಲ್ಲಿದ್ದು, 12 ಜನ ಐಸಿಯುನಲ್ಲಿದ್ದಾರೆ. ಒಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. 257 ಜನ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

Advertisement
Advertisement

Advertisement
Tags :
Advertisement