For the best experience, open
https://m.suddione.com
on your mobile browser.
Advertisement

ಮಂತ್ರಾಲಯ ಮಠಕ್ಕೆ ಭಕ್ತರಿಂದ ಹೆಲಿಕಾಪ್ಟರ್ ಕೊಡುಗೆ

04:30 PM Nov 28, 2023 IST | suddionenews
ಮಂತ್ರಾಲಯ ಮಠಕ್ಕೆ ಭಕ್ತರಿಂದ ಹೆಲಿಕಾಪ್ಟರ್ ಕೊಡುಗೆ
Advertisement

ಸುದ್ದಿಒನ್, ಬೆಂಗಳೂರು :  ಭಕ್ತರೊಬ್ಬರು ಮಂತ್ರಾಲಯ ರಾಘವೇಂದ್ರಸ್ವಾಮಿ ಮಠಕ್ಕೆ ಹೆಲಿಕಾಪ್ಟರ್ ನೀಡುವುದಾಗಿ ತಿಳಿಸಿದ್ದಾರೆ. 

Advertisement
Advertisement

ರಾಮನಗರದ ಶ್ರೀ ಫೌಂಡೇಶನ್ ಸಂಸ್ಥಾಪಕ ಸುರೇಶ್ ಅವರು ಮಂತ್ರಾಲಯದ ಪೀಠಾಧ್ಯಕ್ಷರಾದ ಶ್ರೀ ಸುಬುದೇಂದ್ರ ತೀರ್ಥರಿಗೆ ಹೆಲಿಕಾಪ್ಟರ್ ಕೊಡುಗೆಯಾಗಿ ನೀಡಲಾಗುವುದು ಎಂದು ಹೇಳಿದರು.

Advertisement

Advertisement
Advertisement

ಈ ಕುರಿತು ನವೆಂಬರ್ 24ರಂದು ಮಂತ್ರಾಲಯಕ್ಕೆ ತೆರಳಿ ಶ್ರೀಗಳೊಂದಿಗೆ ಚರ್ಚಿಸಿದ್ದೇನೆ ಎಂದರು. ಬೆಂಗಳೂರಿನಿಂದ 50 ಕಿ.ಮೀ ದೂರದಲ್ಲಿ ರೂ.300 ಕೋಟಿ ವೆಚ್ಚದಲ್ಲಿ 253 ಅಡಿ ಎತ್ತರದ ರಾಘವೇಂದ್ರ ಸ್ವಾಮಿಯ ವಿಗ್ರಹ ನಿರ್ಮಿಸಲಾಗುತ್ತಿದೆ ಎಂದರು.

ಶ್ರೀಮಠಕ್ಕೆ ಹೆಲಿಕಾಪ್ಟರ್ ಕೊಡುಗೆ ನೀಡಲಾಗುವುದು ಎಂದು ವಿವರಿಸಿದರು.
ಮೇಲಾಗಿ ಪೀಠಾಧಿಪತಿಗಳ ಅನುಮತಿ ಪಡೆದು ಮಂತ್ರಾಲಯದಲ್ಲಿ ಸೂಚಿಸಿದ ಸ್ಥಳದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾಮಗಾರಿಯನ್ನು ಶೀಘ್ರ ಆರಂಭಿಸುವುದಾಗಿ ತಿಳಿಸಿದ್ದಾರೆ. ಹೆಲಿಪ್ಯಾಡ್ ಕಾಮಗಾರಿ ಪೂರ್ಣಗೊಂಡರೆ ಸಂಕ್ರಾಂತಿ ಹಬ್ಬಕ್ಕೆ ಮಂತ್ರಾಲಯದ ಶ್ರೀಗಳಿಗೆ ಹೆಲಿಕಾಪ್ಟರ್ ಹಸ್ತಾಂತರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಅಲ್ಲದೇ ಡಿಸೆಂಬರ್ ಮೊದಲ ವಾರದಲ್ಲಿ ಸುಬುದೇಂದ್ರ ತೀರ್ಥರು ಬೆಂಗಳೂರು ಸಮೀಪದ ಶ್ರೀ ರಾಘವೇಂದ್ರ ಸ್ವಾಮಿಯ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಪರಿಶೀಲನೆ ನಡೆಸಿ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಸುರೇಶ್ ಸ್ಪಷ್ಟಪಡಿಸಿದರು.

ಭಕ್ತರ ದೇಣಿಗೆಯಿಂದ ಮಂತ್ರಾಲಯದಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಮಂತ್ರಾಲಯಕ್ಕೆ ನೇರ ರೈಲು ಮಾರ್ಗವಿಲ್ಲ. 13 ಕಿಮೀ ದೂರದಲ್ಲಿರುವ ಮಾಧವರಂನಲ್ಲಿ ರೈಲಿನಿಂದ ಇಳಿದು ಮಂತ್ರಾಲಯಕ್ಕೆ ತಲುಪಬೇಕಿದೆ. ಅಲ್ಲದೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಕಳೆದ ವರ್ಷ ಕುಟುಂಬ ಸಮೇತ ಭೇಟಿ ನೀಡಿದ್ದರು. ಈ ಹಿಂದೆ ಬಳ್ಳಾರಿಯ ಗಣಿ ಉದ್ಯಮಿಯೊಬ್ಬರು ದೇವಸ್ಥಾನದ ಅಭಿವೃದ್ಧಿಗೆ 90 ಲಕ್ಷ ರೂ. ಮಂತ್ರಾಲಯ ಮಠದಲ್ಲಿ 6 ಕೋಟಿ ರೂಗಳಲ್ಲಿ ಕೈಗೊಂಡ ಶಿಲಾ ಮಂಟಪ ನಿರ್ಮಾಣಕ್ಕೆ ನೆರವಾಗಿದ್ದರು.

Advertisement
Tags :
Advertisement