For the best experience, open
https://m.suddione.com
on your mobile browser.
Advertisement

ಜೂ.9ರವರೆಗೂ ಜೋರು ಮಳೆ : ಚಿತ್ರದುರ್ಗ ಸೇರಿದಂತೆ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ..!

09:42 AM Jun 05, 2024 IST | suddionenews
ಜೂ 9ರವರೆಗೂ ಜೋರು ಮಳೆ   ಚಿತ್ರದುರ್ಗ ಸೇರಿದಂತೆ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
Advertisement

ಬೆಂಗಳೂರು: ಈಗಾಗಲೇ ಮುಂಗಾರು ಮಳೆ ಚುರುಕುಗೊಂಡಿದ್ದು, ರಾಜ್ಯದೆಲ್ಲೆಡೆ ಮಳೆಯ ದರ್ಶನವಾಗುತ್ತಿದೆ. ಜೂನ್ 9ರ ವರೆಗೂ ರಾಜ್ಯದಲ್ಲಿ ಮಳೆಯಾಗಲಿದ್ದು, ಕೆಲವು ಭಾಗಕ್ಕೆ ಹವಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ನಗರಕ್ಕೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Advertisement

ಈಗಾಗಲೇ ಹಲವು ಕಡೆ ಜೋರು ಮಳೆಯಾಗಿದೆ. ಬೆಂಗಳೂರಿನಲ್ಲಿ ಇಂದು ಕೂಡ ದಾಖಲೆ ಮಟ್ಟದ ಮಳೆಯಾಗುವ ಮುನ್ಸೂಚನೆ ಇದೆ. ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜನಗರಕ್ಕೂ ಇಂದು ಮಳೆ ಬರಲಿದೆ ಎಂದು ಹವಮಾನ ಇಲಾಖೆ‌ ಸೂಚನೆ ನೀಡಿದೆ.

Advertisement

ಈಗಾಗಲೇ ಎಲ್ಲೆಡೆ ಮೋಡ ಕವಿದ ವಾತಾವರಣವಿದ್ದು, ಸಂಜೆ ವೇಳೆಗೆ ಅಥವಾ ಮಧ್ಯಾಹ್ನದ ಸಮಯಕ್ಕೇನೆ ಮಳೆಯಾಗುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಹೊರಗೆ ಹೋಗುವವರು ಕೊಂಚ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಛತ್ರಿ‌ತೆಗೆದುಕೊಂಡು ಹೋಗುವುದು, ರೈನ್ ಕೋಟ್ ತೆಗೆದುಕೊಂಡು ಹೋಗುವುದೋ ಏನಾದರೊಂದು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಹೋಗಬೇಕಾಗುತ್ತದೆ. ಮಳೆ ಸಂಜೆ ವೇಳೆ ದಿಢೀರನೆ ಬಂದಾಗ ಅದೆಷ್ಟೊ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕುತ್ತಾರೆ‌. ಏನು ಮಾಡುವುದಕ್ಕೂ ಆಗದೆ ಮಳೆ‌ನಿಲ್ಲುವ ತನಕ ಕಾಯಬೇಕಾದ ಪರಿಸ್ಥಿತಿ ಎದುರಾಗುತ್ತದೆ.‌ ಹೀಗಾಗಿ ಮನೆಯಿಂದ ಹೊರಡುವಾಗಲೇ ಒಂದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡರೆ ಮಳೆಯಿಂದ ರಕ್ಷಿಸಿಕೊಂಡು ಮನೆಗೆ ಬರಬಹುದು. ಇನ್ನು ಒಂದು ವಾರ ಅಂದ್ರೆ ಜೂನ್ 9ರವರೆಗೂ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.

Tags :
Advertisement