Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಶಾರುಖ್ ಖಾನ್ ಗೆ ಹೀಟ್ ಸ್ಟ್ರೋಕ್ : ಆಸ್ಪತ್ರೆಗೆ ದಾಖಲು.. ಅಭಿಮಾನಿಗಳು ಶಾಕ್..!

09:24 PM May 22, 2024 IST | suddionenews
Advertisement

ನಟ ಶಾರುಖ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಟ್ ಸ್ಟ್ರೋಕ್ ನಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾರುಖ್ ಖಾನ್ ವಿಚಾರ ಕೇಳಿ ಅಭಿಮಾನಿಗಳು ಸಹ ಆತಂಕಕ್ಕೆ‌ ಒಳಗಾಗಿದ್ದಾರೆ. ಸದ್ಯ ಅವರಿಗೆ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಅಹಮದಾಬಾದ್ ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

ಶಾರುಖ್ ಖಾನ್, ಕೆಕೆಆರ್ ಹಾಗೂ ಎಸ್ಆರ್ಎಚ್ ಪಂದ್ಯ ನೋಡುವುದಕ್ಕೆಂದು ಬಂದಿದ್ದರು. ಪಂದ್ಯ ಮುಗಿದ ಬಳಿಕ ತಮ್ಮ ತಂಡದ ಸಂಭ್ರಮದಲ್ಲೂ ಭಾಗಿಯಾಗಿದ್ದರು. ಆದರೆ ದಿಢೀರನೆ ಆಸ್ಪತ್ರೆ ಸೇರಿದ್ದಾರೆ. ಅವರಿಗೆ ಹೀಟ್ ಸ್ಟ್ರೋಕ್ ಆಗಿರುವ ಮಾಹಿತಿ ಲಭ್ಯವಾಗಿದೆ.

ಹೀಟ್ ಸ್ಟ್ರೋಕ್ ಎಂದರೆ ನಿರ್ಜಲೀಕರಣ. ಅತಿಯಾದ ನೀರಿನ ಕೊರತೆಯಿಂದ ದೇಹದಲ್ಲಿನ ದ್ರವಾಂಶ ಕಡಿಮೆ ಆಗುತ್ತದೆ. ದೇಹದಲ್ಲಿ ನೀರಿನ ಕೊರತೆಯಿಂದ ತಲೆನೋವು, ತಲೆತಿರುಗುವಿಕೆ ಕಾರಣವಾಗುತ್ತದೆ. ಬೆವರುವಿಕೆಯು ಸಾಮಾನ್ಯವಾಗಿ ಹೀಗೆ ಆಗುತ್ತದೆ. ಸದ್ಯ ಈ ಸುದ್ದಿಯನ್ನು ಕೇಳಿದ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಸದ್ಯ ಅಹಮದಾಬಾದ್​ನ ಕೆ.ಡಿ ಆಸ್ಪತ್ರೆಗೆ ದಾಖಲಾದ ನಟನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

Advertisement

Advertisement
Tags :
Fans are shockedHeat strokehospitalizedShah Rukh Khanಅಭಿಮಾನಿಗಳು ಶಾಕ್ಆಸ್ಪತ್ರೆಗೆ ದಾಖಲುಶಾರುಖ್ ಖಾನ್ಹೀಟ್ ಸ್ಟ್ರೋಕ್
Advertisement
Next Article