ನರೇಂದ್ರ ಮೋದಿಯವರ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ
ಸುದ್ದಿಒನ್, ಜೂ.09 : ನವದೆಹಲಿ: ಇಂದು ನೂತನ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈಶ್ವರನ ಹೆಸರಿನಲ್ಲಿ ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಷ್ಟ್ರಪತಿ ಭವನದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆದಿದೆ. ದ್ರೌಪದಿ ಮುರ್ಮಾ ಅವರು ಪ್ರತಿಜ್ಞಾವಿಧಿ ಬೊಧಿಸಿದ್ದಾರೆ.
https://x.com/pradeepgowdas/status/1799811962576236687?t=BIvrSI89lCM91FwHX0R0fg&s=19
ಇನ್ನು ನೂತನ ಪ್ರಧಾನ ಮಂತ್ರಿ ಮೋದಿ ಅವರ ಜೊತೆಗೆ ಹಲವು ಸಂಸದರು ಕೂಡ ಪದಗ್ರಹಣದಲ್ಲಿ ಭಾಗಿಯಾಗಿದ್ದರು. ಪದಗ್ರಹಣ ಸ್ವೀಕಾರ ಮಾಡಿದರು. ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಮೋದಿ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಾಗಲೇ ಕುಮಾರಸ್ವಾಮಿ ಗೆಲುವು ಕಂಡರೆ ಕೇಂದ್ರ ಸಚಿವ ಸ್ಥಾನ ಸಿಗುವ ಭರವಸರ ನೀಡಿದ್ದರು. ಇದೀಗ ಅದರಂತೆ ಕುಮಾರಸ್ವಾಮಿ ಕೇಂದ್ರದ ಮಂತ್ರಿಯಾಗಿದ್ದಾರೆ. ಯಾವ ಖಾತೆ ನೀಡುತ್ತಾರೆ ಎಂಬ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ಆದರೆ ಇಂದು ಮೋದಿ ಅವರ ಜೊತೆಗೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಕೇಂದ್ರದ ಮಂತ್ರಿಯಾಗಿದ್ದು, ಅವರ ಕುಟುಂಬಸ್ಥರಿಗೂ ಬಾರೀ ಸಂತದ ತಂದಿದೆ. ಇತ್ತಿಚೆಗಷ್ಟೇ ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದರು. ಕೇಂದ್ರದಿಂದ ತಂದೆಯವರಿಗೆ ಸ್ಥಾನಮಾನ ಸಿಕ್ಕರೆ ನಮಗೂ ಖುಷಿ ಎಂದು. ದೆಹಲಿಗೆ ತೆರಳುವ ಮುನ್ನ ಕುಮಾರಸ್ವಾಮಿ ಅವರು ಕೂಡ ಈ ಬಗ್ಗೆ ಮಾತನಾಡಿದ್ದರು. ಕೃಷಿ ಇಲಾಖೆ ಸಿಕ್ಕರೆ ಖಂಡಿತ ಸಂತೋಷದಿಂದ ಮಾಡುತ್ತೇನೆ. ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳುತ್ತೇನೆ ಎಂದಿದ್ದರು. ಸದ್ಯಕ್ಕೆ ಮೋ್ಇ ಸಂಪುಟದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಯಾವ ಖಾತೆ ಎಂಬುದು ಬಳಿಕ ಗೊತ್ತಾಗಲಿದೆ.