ಹಾವೇರಿ ರಸ್ತೆ ಅಪಘಾತ | 14 ಜನರಲ್ಲಿ ಜನರಲ್ಲಿ ಬದುಕಿದ್ದು ಒಂದೇ ಹುಡುಗಿ..!
ಹಾವೇರಿ: ನಿಂತಿದ್ದ ಲಾರಿಗೆ ಭೀಕರವಾಗಿ ಟಿಟಿ ವಾಹನ ಗುದ್ದಿದ ಪರಿಣಾಮ ವಾಹನದಲ್ಲಿದ್ದ ಹನ್ನೊಂದು ಜನ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೆಲ್ಲಾ ಆಸ್ಪತ್ರೆಗೆ ದಾಖಲಿಸಿತ್ತಾದರೂ ಮತ್ತೆ ಇಬ್ಬರು ಮೃತ ಪಟ್ಟಿದ್ದಾರೆ. ಹದಿನಾಲ್ಕು ಜನರಲ್ಲಿ ಬದುಕುಳಿದದ್ದು ಒಂದೇ ಹುಡುಗಿ. ಟಿಟಿ ಮಾಲೀಕರ ಕುಟುಂಬದಲ್ಲೂ ನಾಲ್ಕು ಜನ ಸಾವನ್ನಪ್ಪಿದ್ದಾರೆ.
ಇನ್ನೂ ನಾಗೇಶ್ ತಾಯಿ ವಿಶಾಲಾಕ್ಷಿ ಮನೆಯ ಎಲ್ಲರೂ ಮೃತ ಪಟ್ಟಿದ್ದಾರೆ. ವಿಶಾಲಾಕ್ಷೀ ಆಶಾ ಕಾರ್ಯಕರ್ತೆಯಾಗಿದ್ದರು. ಈ ಅಪಘಾತದಲ್ಲಿ ವಿಕಲಚೇತನ ಯುವತಿ ಕೂಡ ಪ್ರತಾಣ ಬೆಳೆಸಿದ್ದರು. ವಿಶಾಲಾಕ್ಷಿ ಪುತ್ರಿ ಹುಟ್ಟಿದಾಗಿನಿಂದ ಅಂಗವಿಕಲತೆಯನ್ನು ಅನುಭವಿಸಿಸುತ್ತಿದ್ದರು. ಹುಟ್ಟಿನಿಂದಲೂ ಪೊಲಿಯೋ ರೋಗಕ್ಕೆ ತುತ್ತಾಗಿದ್ದರು. ಇದೀಗ ದೇವರ ದರ್ಶನಕ್ಕೆಂದು ತೆರಳಿದ್ದ ಸಂದರ್ಭದಲ್ಲಿ, ನಡೆದ ಅಪಘಾತದಲ್ಲಿ ಈ ವಿಕಲ ಚೇತನ ಯುವತಿ ಒಬ್ಬಳೇ ಬದುಕುಳಿದಿದ್ದಾರೆ.
ಪ್ರತಿ ವರ್ಷ ಕೂಡ ದೇವರ ದರ್ಶನಕ್ಕೆ ಹೋಗುತ್ತಿದ್ದರು. ಆದರೆ ಈ ವರ್ಷ ಇಷ್ಟು ಜನರ ಆಯಸ್ಸು ಮುಗಿದಿತ್ತು ಎನಿಸುತ್ತದೆ. ಎಲ್ಲರೂ ಒಂದೇ ದಿನ ಸಾವನ್ನಪ್ಪಿದ್ದಾರೆ. ಬದುಕುಳಿದ ಅಂಗವಿಕಲ ಯುವತಿ ಕಂಡು ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ. ಮೊದಲೇ ಬದುಕು ಹೇಗೆ ಎಂಬ ಚಿಂತೆಯಾಗಿತ್ತು. ಹೇಗೊಕ ತಾಯಿ ಕೆಲಸ ಮಾಡಿಕೊಂಡು ಸಾಕುತ್ತಿದ್ದರು. ಆದರೆ ಈಗ ನೋಡಿಕೊಳ್ಳುವ ಪೋಷಕರೆ ಇಲ್ಲದೆ ಇರುವಾಗ ಆ ಯುವತಿಯ ಕಥೆ ಏನು ಎಂಬುದೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಇನ್ನು ಮೃತದೇಹಗಳು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿಗೆ ತಲುಪಿಲ್ಲ. ಆಸ್ಪತ್ರೆಯಲ್ಲಿಯೇ ಇದ್ದು, ಸುಭದ್ರಬಾಯಿ, ಮಾನಸ, ಮಂಜುಳಾ, ಆದರ್ಶ, ಆರ್ಯ, ವಿಶಾಲಾಕ್ಷಿ, ರೂಪಾಬಾಯಿ, ನಂದನ, ಅಂಜಲಿ, ನಾಗೇಶ್ ರಾವ್, ಅರುಣ ಕುಮಾರ, ಮಂಜುಳಾ ಬಾಯಿ, ಭಾಗ್ಯಾ ಬಾಯಿ ಮೃತರಾಗಿದ್ದಾರೆ.