ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ : ಇಂದಿನಿಂದ ನವಂಬರ್ 15ರ ತನಕ ದರ್ಶನ ಭಾಗ್ಯ
ಹಾಸನ: ವರ್ಷಕ್ಕೆ ಒಂದೇ ಬಾರಿ ತೆರೆಯುವ ದೇವಸ್ಥಾನವೆಂದರೆ ಹಾಸನಾಂಬೆಯ ದೇವಸ್ಥಾನ. ವರ್ಷವಿಡಿ ದೇವಸ್ಥಾನದ ಬಾಗಿಲು ಹಾಕಿರಲಾಗುತ್ತದೆ. ವರ್ಷಕ್ಕೆ ಒಮ್ಮೆ ದೇವಸ್ಥಾನದ ಬಾಗಿಲು ತೆರೆದರೆ ಹಚ್ಚಿದ್ದ ದೀಪ ಹಾಗೇ ಉರಿಯುತ್ತಾ ಇರುತ್ತದೆ. ಇದು ಹಾಸನಾಂಬೆಯ ಪವಾಡವೇ ಸರಿ. ಇಂದಿನಿಂದ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ.
ನವೆಂಬರ್ 15ರ ತನಕ ಹಾಸನಾಂಬೆಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು ಮಧ್ಯಾಹ್ನ 12 ಗಂಟೆಗೆ ಸಾಂಪ್ರಾದಾಯದಂತೆ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಬಳಿಕ ಬನ್ನಿಮರಕ್ಕೆ ಪೂಜೆ ನೆರವೇರಿಸಲಾಗಿದೆ. ಭಕ್ತರಿಗೆ ಎರಡು ದಿನಗಳ ಕಾಲ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇಂದು ಮತ್ತು ಕೊನೆಯ ದಿನ ಅವಕಾಶ ನಿಷಿದ್ಧ.
ಹಾಸನಾಂಬೆಯ ದೇವಸ್ಥಾನ ವಾಡವೇ ಸರಿ. ಹಚ್ಚಿದ ದೀಪ ಆರುವುದಿಲ್ಲ, ಹಾಕಿದ ಹೂ ಬಾಡುವುದಿಲ್ಲ, ಪ್ರಸಾದ ಕೂಡ ಹಾಳಾಗಿರುವುದಿಲ್ಲ. ಅದು ಒಂದು ವರ್ಷದ ಹಿಂದೆ ಇದೆಲ್ಲವನ್ನು ಇಟ್ಟು, ಪೂಜೆಯ ಬಳಿಕ ಬಾಗಿಲು ಹಾಕಲಾಗಿರುತ್ತದೆ. ಇದೆಲ್ಲವೂ ಸಾಕಷ್ಟು ಕುತೂಹಲವನ್ನೇ ಮೂಡಿಸುತ್ತದೆ. ಇದೆಲ್ಲ ತಾಯಿಯ ಪವಾಡವೇ ಸರಿ. ಹೀಗಾಗಿ ರಾಜ್ಯಾದ್ಯಂತ ಲಕ್ಷಾಂತರ ಭಕ್ತರು ಬಂದು ತಾಯಿಯ ದರ್ಶನ ಪಡೆಯುತ್ತಾರೆ. ಹದಿನಾಲ್ಕು ದಿನಗಳ ಕಾಲ ತಾಯಿಯ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಭಕ್ತರು ದರ್ಶನ ಪಡೆದು ಪುನೀತರಾಗಬಹುದು. ಬಳಿಕ ಕೊನೆಯ ದಿನ ಅಂದರೆ ನವೆಂಬರ್ 15ರಂದು ಪೂಜಾ ವಿಧಿ ವಿಧಾನ ಮುಗಿಸಿ, ಬಾಗಿಲು ಹಾಕಲಾಗುತ್ತದೆ.