30 ವರ್ಷದಿಂದ ಸೀರೆಯನ್ನೇ ತೆಗೆದುಕೊಳ್ತಿಲ್ಲ : ಸರಳತೆಯಿಂದಾನೇ ಮತ್ತೆ ಮನಸ್ಸು ಗೆದ್ದ ಸುಧಾಮೂರ್ತಿ, ಹೇಳಿದ್ದೇನು..?
ಬೆಂಗಳೂರು: ಸುಧಾಮೂರ್ತಿ ಅಂದ್ರೆ ಸರಳತೆಯಿಂದಾನೇ ಯುವಕರಿಗೆ ಸ್ಪೂರ್ತಿಯಾದವರು. ಅವರ ನಡವಳಿಕೆ, ಅವರ ಮಾತುಗಳು ಎಲ್ಲರನ್ನು ಆಕರ್ಷಿಸುತ್ತದೆ. ಕೋಟ್ಯಾಧೀಶ್ವರರೇ ಆದರು ಸಿಂಪಲ್ ಆಗಿ ಇರುವುದಕ್ಕೆ ಇಷ್ಟ ಪಡುತ್ತಾರೆ. ಇದೀಗ ಕಳೆದ 30 ವರ್ಷದಿಂದ ಸೀರೆಯನ್ನೇ ಕೊಂಡುಕೊಂಡಿಲ್ಲ ಎಂಬ ಸತ್ಯವನ್ನು ಹೇಳಿದ್ದಾರೆ.
ಇತ್ತಿಚೆಗೆ ನೀಡಿದ ಸಂದರ್ಶನದಲ್ಲಿ ಹಲವು ಸ್ವಾರಸ್ಯಕರ ವಿಚಾರವನ್ನು ಹೇಳಿದ್ದಾರೆ. 'ಒಮ್ಮೆ ಕಾಶಿಗೆ ಹೋಗಿದ್ದೆ. ನೀವೂ ತುಂಬಾ ಇಷ್ಟ ಪಡುವ ಒಂದನ್ನು ತ್ಯಜಿಸಬೇಕು ಎಂದು ಹೇಳಿದ್ದರು. ಶಾಪಿಂಗ್ ಮಾಡುವುದನ್ನು ನಾನು ತುಂಬಾ ಇಷ್ಟ ಪಡುತ್ತೇನೆ. ಹೀಗಾಗಿ ಅದನ್ನು ತ್ಯಜಿಸಿ ಬಂದೆ. ಗಂಗೆಗೆ ನಾನು ಮಾತು ನೀಡಿದ್ದೇನೆ. ಈ ಜೀವಿತಾವಧಿಯಲ್ಲಿ ಶಾಪಿಂಗ್ ಮಾಡಲ್ಲ ಎಂದು. ಅಂದಿನಿಂದ ಕಳೆದ ಮೂವತ್ತು ವರ್ಷದಿಂದ ನಾನು ಸೀರೆಯನ್ನು ಕೊಂಡುಕೊಂಡಿಲ್ಲ.
ಸಹೋದರಿಯರು ಪ್ರತಿ ವರ್ಷ ಎರಡು ಸೀರೆಯನ್ನು ಕೊಡುತ್ತಿದ್ದರು. ಆದರೆ ಯಥೇಚ್ಛವಾಗಿ ಸೀರೆ ಸಂಗ್ರಹವಾಗುವುದಕ್ಕೆ ಶುರುವಾದ ಮೇಲೆ ಅದನ್ನು ನಿಭಾಯಿಸುವುದು ಕಷ್ಟ. ಹೀಗಾಗಿ ನನಗೆ ಇನ್ಮೇಲೆ ಉಡುಗೊರೆ ಕೊಡುವುದನ್ನು ನಿಲ್ಲಿಸಿ ಎಂದು ಹೇಳಿದೆ. ನಾನು ಸೀರೆಗಳನ್ನು ನೆಲ ಗುಡಿಸುವಂತೆ ಉಡುವುದಿಲ್ಲ. ಹೀಗಾಗಿ ಬೇಗ ಹಾಳಾಗುವುದಿಲ್ಲ. ಐವತ್ತು ವರ್ಷಗಳಿಂದ ಸೀರೆ ಉಡುತ್ತಿದ್ದೇನೆ. ಉಟ್ಟ ಮೇಲೆ ವಾಶ್ ಮಾಡಿಸಿ, ಇಸ್ತ್ರಿ ಮಾಡಿಸಿ, ಎತ್ತಿಡುತ್ತೇನೆ. ಹೀಗಾಗಿ ದೀರ್ಘ ಬಾಳಿಕೆ ಬರುತ್ತವೆ. ಮೂವತ್ತು ವರ್ಷದಿಂದ ನಾನು ಸೀರೆಗಳನ್ನೇ ತೆಗೆದುಕೊಂಡಿಲ್ಲ ಎಂದು ರಾಜ್ಯಸಭೆಯ ಸದಸ್ಯೆ ಸುಧಾಮೂರ್ತಿ ಅವರು ಹೇಳಿದ್ದಾರೆ. ಸುಧಾಮೂರ್ತಿ ಅವರ ಈ ಮಾತು ಮಹಿಳೆಯರಿಗೆ ಸ್ಪೂರ್ತಿಯಾಗಲೇಬೇಕು. ಅದರಲ್ಲೂ ಇತ್ತಿಚಿನ ದಿನಗಳಲ್ಲಿ ಬಟ್ಟೆಗಳಿಗಾಗಿಯೇ ದುಂಧು ವೆಚ್ಚ ಮಾಡುವವರು ಜಾಸ್ತಿ. ಕೋಟ್ಯಾಂತರ ರೂಪಾಯಿ ಲಾಭ ಪಡೆಯುವ ಸುಧಾಮೂರ್ತಿಯವರ ಜೀವನ ಶೈಲಿ ನಿಜಕ್ಕೂ ಸ್ಪೂರ್ತಿಯೇ ಸರಿ.