For the best experience, open
https://m.suddione.com
on your mobile browser.
Advertisement

ಹರಿಪ್ರಸಾದ್ ವಿಚಾರಣೆಗೆ ರಾಜ್ಯಪಾಲರ ಒತ್ತಡ ಕಾರಣವಾ‌‌..? ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು..?

12:11 PM Jan 20, 2024 IST | suddionenews
ಹರಿಪ್ರಸಾದ್ ವಿಚಾರಣೆಗೆ ರಾಜ್ಯಪಾಲರ ಒತ್ತಡ ಕಾರಣವಾ‌‌    ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು
Advertisement

Advertisement

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಗೋಧ್ರಾ ಘಟನೆ ನಡೆಯಬಹುದು. ಹೀಗಾಗಿ ರಕ್ಷಣೆ ನೀಡಿ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಹೇಳಿದ ಮಾತು ಬಾರೀ ಚರ್ಚೆಗೆ ಕಾರಣವಾಗಿತ್ತು. ನಿನ್ನೆ ಪೊಲೀಸರು ಈ ಸಂಬಂಧ ವಿಚಾರಣೆ ನಡೆಸಿದ್ದಾರೆ.

ಇಂದು ವಿಚಾರಣೆಯ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಎಲ್ಲಿಂದ, ಯಾರು ಡೈರೆಕ್ಟ್ ಮಾಡುತ್ತಾ ಇದ್ದಾರೆ ಎಂಬುದನ್ನು ಗಮನಿಸಬೇಕು. ಗವರ್ನರ್ ಪದೇ ಪದೇ ಈ ಬಗ್ಗೆ ಕೇಳುತ್ತಾ ಇದ್ದಾರೆ. ರಾಜ್ಯಪಾಲರ ಮಾತಿಗೆ ಗೌರವ ಕೊಟ್ಟು, ನಮ್ಮ ಗೃಹ ಇಲಾಖೆಯವರು ಕೇಳಿದ್ದಾರೆ. ಅಷ್ಟಕ್ಕೆ ಸೀಮಿತವಾಗಿದೆ ಅಷ್ಟೇ. ಅದನ್ನ ಹೊರತುಪಡಿಸಿದರೆ ಸರ್ಕಾರವೇ ಕರೆಸಿದ್ದು, ಗೃಹ ಇಲಾಖೆಯವರೆ ಕರೆಸಿ ಮುಜುಗರ ಮಾಡಿದ್ದು ಎಂಬುದೆಲ್ಲ ಇಲ್ಲ. ಆದರೆ ನಾವು ಗಮನಿಸಬೇಕಾದ ವಿಚಾರ ಏನು..? ರಾಜ್ಯಪಾಲರು ಯಾಕೆ ಅಷ್ಟು ಆಸಕ್ತರು..? ಕೇಂದ್ರ ಸರ್ಕಾರದಿಂದ ನಿರ್ದೇಶನವಿದೆಯಾ, ಹೀಗೆ ಮಾಡಬೇಕು ಅಂತ. ಸರ್ಕಾರಕ್ಕೆ, ಹರಿಪ್ರಸಾದ್ ಅವರಿಗೆ ಮುಜುಗರ ಮಾಡಬೇಕು ಅಂತ‌. ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ, ಅಲ್ಲಲ್ಲಿ ರಾಜ್ಯಪಾಲರ ಮುಖಾಂತರ ಆಳ್ವಿಕೆ ಮಾಡಲು ಹೊರಟಿದ್ದಾರೆ. ಏನೇ ಇದ್ದರು ಕಾನೂನು ಚೌಕಟ್ಟಿನಲ್ಲಿ ಮಾಡ್ತೇವೆ.

Advertisement

ಲಾ ಆಂಡ್ ಆರ್ಡರ್ ಗೂ ರಾಜ್ಯಪಾಲರ ಆಫೀಸ್ ಗೆ ಏನು ಸಂಬಂಧ. ಇಲ್ಲಿ ಏನಾದರೂ ಕೊಲ್ಯಾಪ್ಸ್ ಆಗಿದೆಯಾ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮವನ್ನ ಬೇಕಂತ ಎರಡ್ಮೂರು ತಿಂಗಳು ಹಿಡಿದುಕೊಂಡು ಕೂತಿದ್ರಲ್ಲ ಯಾಕೆ..? ಹಿಂದಿನ ಸರ್ಕಾರದಲ್ಲಿ ಯಾವತ್ತು ಹೀಗೆ ಆಗಿಲ್ಲ. ಈಗ ಯಾಕೆ ಆಗ್ತಾ ಇದೆ ಎಂದಿದ್ದಾರೆ.

ಪಿಎಸ್ಐ, ಸಿಟಿಐ ಪೇಪರ್ ಲೀಕ್ ಬಗ್ಗೆ ಮಾತನಾಡಿ, ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ನಮ್ಮ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಾಗಿದೆ. ಯಾಕಂದ್ರೆ ಇದು ಯುವಕರ ಬದುಕಿನ ಪ್ರಶ್ನೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಅಂದ್ರೆ ಕೆಲ ಅಧಿಕಾರಿಗಳು ಹಳೇ ಚಾಳಿ ಬಿಟ್ಟಿಲ್ಲ. ವೀರಪ್ಪ ಕಮಿಟಿಯನ್ನು ಚರ್ಚೆ ಮಾಡಿದ್ದೀವಿ. ಅದರಿಂದ ವರದಿಯನ್ನು ಕೊಡುತ್ತಾರೆ. ಹಿಂದಿನ ಸರ್ಕಾರದ ರೀತಿ ಹಗರಣವೇ ನಡೆದಿಲ್ಲ, ಸೋರಿಕೆಯೇ ಆಗಿಲ್ಲ ಅಂತೆಲ್ಲಾ ಹೇಳಲ್ಲ. ಯಾರಿಗೂ ಅನ್ಯಾಯವಾಗದ ರೀತಿ ನೋಡಿಕೊಳ್ಳುತ್ತೀವಿ ಎಂದಿದ್ದಾರೆ.

Tags :
Advertisement