For the best experience, open
https://m.suddione.com
on your mobile browser.
Advertisement

Gyanvapi Mosque: ಜ್ಞಾನವಾಪಿ ಮಸೀದಿ ವಿವಾದ | ಹಿಂದೂಗಳಿಗೆ ಪೂಜೆಗೆ ಅನುಮತಿ, ಐತಿಹಾಸಿಕ ತೀರ್ಪು ನೀಡಿದ ಕೋರ್ಟ್

07:44 PM Jan 31, 2024 IST | suddionenews
gyanvapi mosque  ಜ್ಞಾನವಾಪಿ ಮಸೀದಿ ವಿವಾದ   ಹಿಂದೂಗಳಿಗೆ ಪೂಜೆಗೆ ಅನುಮತಿ  ಐತಿಹಾಸಿಕ ತೀರ್ಪು ನೀಡಿದ ಕೋರ್ಟ್
Advertisement

Advertisement

ಸುದ್ದಿಒನ್ : ಜ್ಞಾನವಾಪಿ ಮಸೀದಿ-ಮಂದಿರ ವಿವಾದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ವಾರಣಾಸಿಯ ನ್ಯಾಯಾಲಯವು ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅನುಮತಿ ನೀಡಿದೆ. ಅಷ್ಟರ ಮಟ್ಟಿಗೆ ಭಕ್ತರಿಗೆ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಕಾಶಿ ವಿಶ್ವನಾಥ ಟ್ರಸ್ಟ್  ಈ ಪ್ರಕರಣದಲ್ಲಿ ಸಿಕ್ಕ ಬಹುದೊಡ್ಡ ಗೆಲುವು ಇದಾಗಿದೆ. ಒಂದು ವಾರದೊಳಗೆ ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವನಿಗೆ ಪೂಜೆ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದೆ.

Advertisement

ಇತ್ತೀಚೆಗಷ್ಟೇ ಜ್ಞಾನವಾಪಿಯ ಆವರಣದಲ್ಲಿ ಸಮೀಕ್ಷೆ ನಡೆಸಿದ್ದ ಭಾರತೀಯ ಪುರಾತತ್ವ ಇಲಾಖೆಯು ಈಗ ಜ್ಞಾನವಾಪಿ ಮಸೀದಿ ಇರುವ ಪ್ರದೇಶದಲ್ಲಿ ಬೃಹತ್ ಹಿಂದೂ ದೇವಾಲಯವಿತ್ತು. ಆ ದೇವಾಲಯವನ್ನು ಧ್ವಂಸ ಮಾಡಿ ಅಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂಬ ವರದಿಯನ್ನು ನೀಡಿತ್ತು.

ಇದು ಸಂಭವಿಸಿದ ಕೆಲವು ದಿನಗಳ ನಂತರ, ಜ್ಞಾನವಾಪಿ ಮಸೀದಿ ಆವರಣದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ನ್ಯಾಯಾಲಯ ಅನುಮತಿ ನೀಡಿತು. ಈ ಆದೇಶದಿಂದ ಹಿಂದೂ ಸಮುದಾಯಗಳು ಸಂತಸಗೊಂಡಿವೆ.

ಮಸೀದಿ ಆವರಣದಲ್ಲಿ ಹಿಂದೂ ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಾರದೊಳಗೆ ಪೂಜೆ ಆರಂಭಿಸಲಾಗುವುದು ಎಂದು ಕಾಶಿ ವಿಶ್ವನಾಥ ಟ್ರಸ್ಟ್‌ನ ಸದಸ್ಯರು ತಿಳಿಸಿದ್ದಾರೆ. ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳಿಗೆ ಸಂದ ಬಹುದೊಡ್ಡ ಜಯ ಇದಾಗಿದೆ ಎಂದು ಟ್ರಸ್ಟ್ ಹೇಳಿದೆ.

ವಾರಣಾಸಿ ನ್ಯಾಯಾಲಯವು ಜ್ಞಾನವಾಪಿ ಮಸೀದಿಯೊಳಗೆ ಮುಚ್ಚಿದ ವ್ಯಾಸ್ ಕಾ ತೆಖಾನಾದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅನುಮತಿ ನೀಡಿ ಹೊಸ ಆದೇಶಗಳನ್ನು ಹೊರಡಿಸಿದೆ. ವಾರಣಾಸಿ ಜಿಲ್ಲಾಡಳಿತಕ್ಕೆ 7 ದಿನಗಳೊಳಗೆ ಅಗತ್ಯ ವ್ಯವಸ್ಥೆ ಕಲ್ಪಿಸುವಂತೆ ನ್ಯಾಯಾಲಯ ಸೂಚಿಸಿದೆ.

ವಾರಣಾಸಿ ನ್ಯಾಯಾಲಯವು ಬುಧವಾರ ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿ ಆವರಣದ ಸೀಲ್ ಮಾಡಿದ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ಅನುಮತಿ ನೀಡಿದೆ. ವಾರಣಾಸಿ ನ್ಯಾಯಾಲಯದ ಆದೇಶದ ಪ್ರಕಾರ, ಹಿಂದೂ ಭಕ್ತರು ವಾರಣಾಸಿಯ ಜ್ಞಾನವಾಪಿ ಮಸೀದಿಯೊಳಗೆ ಮುಚ್ಚಿದ ವ್ಯಾಸ್ ಕಾ ತೆಖಾನಾದಲ್ಲಿ ಈಗ ಪ್ರಾರ್ಥನೆ ಸಲ್ಲಿಸಬಹುದು.  ವಾರಣಾಸಿ ಜಿಲ್ಲಾ ಅಧಿಕಾರಿಗಳಿಗೆ ಮುಂದಿನ 7 ದಿನಗಳಲ್ಲಿ ಅಗತ್ಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿತ್ತು.

ಈ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ಪರವಾಗಿ ವಾದ ಮಂಡಿಸುತ್ತಿರುವ ವಕೀಲ ವಿಷ್ಣು ಶಂಕರ್ ಜೈನ್ ಅವರು ಈ ಆದೇಶಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಹಿಂದೂಗಳಿಗೆ ವ್ಯಾಸ್ ಕಾ ತೆಖಾನಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅನುಮತಿ ನೀಡಲಾಗಿದೆ. ವಾರಣಾಸಿ ಜಿಲ್ಲಾಡಳಿತ 7 ದಿನದೊಳಗೆ ಅದಕ್ಕೆ ವ್ಯವಸ್ಥೆ ಮಾಡಬೇಕಿದೆ. ಈಗ ಎಲ್ಲರಿಗೂ ಪೂಜೆ ಮಾಡುವ ಹಕ್ಕು ಇದೆ ಎಂದು ವಿಷ್ಣು ಶಂಕರ್ ಜೈನ್ ತಿಳಿಸಿದರು.

Tags :
Advertisement