For the best experience, open
https://m.suddione.com
on your mobile browser.
Advertisement

ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ : ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ..!

01:09 PM Nov 03, 2024 IST | suddionenews
ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ   ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
Advertisement

ಬೆಂಗಳೂರು: ಮಠ ಸಿನಿಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಇಡೀ ಚಿತ್ರರಂಗ ಶಾಕ್ ಆಗಿದೆ. ಇದ್ದಕ್ಕಿದ್ದ ಹಾಗೇ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದೇ ಯಾರಿಗೂ ತಿಳಿಯುತ್ತಿಲ್ಲ. ಕನ್ನಡದ ಚಿತ್ರರಂಗದ ಅತ್ಯಂತ ಸೃಜನಶೀಲ ನಿರ್ದೇಶಕರ ಸಾಲಿನಲ್ಲಿ ಗುರುಪ್ರಸಾದ್ ನಿಲ್ಲುತ್ತಾರೆ. ಇದೀಗ ಏಕಾಏಕಿ ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಂಡಿದ್ದಾರೆ.

Advertisement

2006ರಲ್ಲಿ ಮಠ ಸಿನಿಮಾವನ್ನು ನಿರ್ದೇಶನ ಮಾಡುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗಿದ್ದರು. ಇಲ್ಲಿಯವರೆಗೂ ಐದು ಕನ್ನಡ ಸಿನಿಮಾಗಳನ್ನು ಮಾಡಿದ್ದಾರೆ. ಒಂದು ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿತ್ತು. ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡು ದಿಗ್ಬ್ರಮೆಗೊಳಿಸಿದ್ದಾರೆ.

ಮತ್ತೊಂದು ಶಾಕಿಂಗ್ ವಿಚಾರ ಅಂದ್ರೆ ಗುರುಪ್ರಸಾದ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 10 ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮಾದನಾಯಕನಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಮೃತದೇಹ ಪತ್ತೆಯಾಗಿದೆ. ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Advertisement
Advertisement

ನಿನ್ನೆ ಅವರ ಹುಟ್ಟುಹಬ್ಬವಿತ್ತು. ಆದೃ ಹುಟ್ಟುಹಬ್ಬಕ್ಕೂ ಮುನ್ನವೇ ಜೀವ ಕಳೆದುಕೊಂಡಿದ್ದಾರೆ. ಸತ್ತು ಹತ್ತು ದಿನಗಳಾಗಿವೆ ಎನ್ನಲಾಗಿದೆ. ಬಿಗ್ ಬಾಸ್ ನಲ್ಲೂ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಕನ್ನಡ ಇಂಡಸ್ಟ್ರಿಯಲ್ಲಿ ನಿರ್ದೇಶನ ಮಾತ್ರವಲ್ಲ ಒಳ್ಳೆ ಬರಹಗಾರರಾಗಿದ್ದರು. ಮಾಡಿದ್ದು ಐದೇ ಸಿನಿನಾವಾದರೂ ಒಳ್ಳೊಳ್ಳೆ ಸಿನಿಮಾಗಳನ್ನು ನೀಡಿ, ಖ್ಯಾತಿ ಪಡೆದಿದ್ದರು. ಇತ್ತಿಚೆಗೆ ಸುಮಾರು ಜನ ನಿಮ್ಮ ಸಿನಿಮಾ ಯಾವಾಗ ಬರುತ್ತೆ ಅಂತೆಲ್ಲಾ ಕೇಳುತ್ತಿದ್ದರು. ಆದರೆ ಇದೀಗ ಎಲ್ಲರನ್ನು ಬಿಟ್ಟು ಇಹಲೋಕ ತ್ಯಜಿಸಿದ್ದಾರೆ. ಹತ್ತು ದಿನವಾದರು ಅವರ ಸಾವಿನ ಸುಳಿವು ಯಾರಿಗೂ ಸಿಗದೆ ಇರುವುದೆ ವಿಪರ್ಯಾಸ.

Tags :
Advertisement