For the best experience, open
https://m.suddione.com
on your mobile browser.
Advertisement

ಗುಬ್ಬಿ | ಹಣ ದುಪ್ಪಟ್ಟ ಆಮಿಷ : ನಾಲ್ಕು ಕೋಟಿಗೂ ಅಧಿಕ ಹಣ ವಂಚನೆ

05:51 PM Jul 27, 2024 IST | suddionenews
ಗುಬ್ಬಿ   ಹಣ ದುಪ್ಪಟ್ಟ ಆಮಿಷ   ನಾಲ್ಕು ಕೋಟಿಗೂ ಅಧಿಕ ಹಣ ವಂಚನೆ
Advertisement

ಸುದ್ದಿಒನ್, ಗುಬ್ಬಿ, ಜುಲೈ. 27 : ವಾಟ್ಸಾಪ್ ಗ್ರೂಪ್ ಮೂಲಕ ಅಪ್ ಅಪ್ಲೋಡ್ ಮಾಡಿ ಹೂಡಿದ ಹಣಕ್ಕೆ ಪ್ರತಿ ನಿತ್ಯ ದುಪ್ಪಟ್ಟ ಹಣ ನೀಡುವ ಆಮಿಷಕ್ಕೆ ಬಲಿಯಾದ ಸುಮಾರು 500 ಮಂದಿಯ ನಾಲ್ಕರಿಂದ ಐದು ಕೋಟಿ ರೂ ಹಣ ಲಪಾಟಿಯಿಸಿದ ಬೃಹತ್ ಅನೈನ್ ವಂಚನೆ ಪ್ರಕರಣ ತಾಲ್ಲೂಕಿನ ಸಿ.ಎಸ್.ಪುರ ಪೊಲೀಸ್ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement
Advertisement

ಕಲ್ಲೂರು ಗ್ರಾಮದಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿದ ವಂಚಕರ ಜಾಲ ಮೊದಲು ಡಾಟಾ ಮೀರ್ ಎ.ಐ. ಎಂಬ ಅಪ್ ಡೌನ್ಲೋಡ್ ಮಾಡಲು ಸೂಚಿಸಿ ಹಣದ ಹೂಡಿಕೆ ಹಾಗೆಯೇ ನಿತ್ಯ ಹಣ ಲಾಭ ಬರುವ ಬಗ್ಗೆ ಹೇಳಿರುತ್ತಾರೆ. 300 ರಿಂದ ಆರಂಭಿಸಿ 4 ಲಕ್ಷದ ವರೆಗೆ ವಹಿವಾಟು ಮಾಡುವ ಮುಗ್ಧ ಜನರು ತಮ್ಮ ಹೂಡಿಕೆ ಹಣಕ್ಕೆ 80 ದಿನದಲ್ಲಿ ದುಪ್ಪಟ್ಟ ಹಣ ನೀಡುವ ಆಸೆಗೆ ವಂಚಕ ಜಾಲ ಮೊದಲ ಹಂತದಲ್ಲಿ ದುಪ್ಪಟ್ಟ ಹಣ ನೀಡಿ ನಂಬಿಸಿದ್ದಾರೆ.

ಚೈನ್ ಲಿಂಕ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರಿದ ಕಲ್ಲೂರಿನ 600 ಕ್ಕೂ ಅಧಿಕ ಜನ ಹಣದ ಆಸೆ ಹಾಗೆಯೇ ಒಬ್ಬ ಗ್ರಾಹಕರನ್ನು ಹುಡುಕಿಕೊಟ್ಟರೆ ಶೇಕಡಾ 10 ಕಮಿಷನ್ ಆಸೆಗೆ ಬಲಿಯಾಗಿದ್ದಾರೆ. ಬೆಂಗಳೂರು ವಾಸಿಯಾಗಿರುವ ಕಲ್ಲೂರು ಮೂಲದ ಮೂರು ಮಂದಿ ಈ ಚೈನ್ ಲಿಂಕ್ ಪ್ರಚಾರ ಮಾಡಿ ನಂತರ ಕೆಲವರನ್ನು ಬೆಂಗಳೂರು ನಗರದಲ್ಲಿ ಮೀಟಿಂಗ್ ನಡೆಸಿ ದೊಡ್ಡ ವೇತನ ನೀಡುವ ಆಸೆ ಸಹ ಹುಟ್ಟಿಸಿದ್ದಾರೆ.

Advertisement

5 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಐದು ದಿನದಲ್ಲಿ 450 ರೂಪಾಯಿ ಬರುವ ಆಸೆ, ಕೆಲವರಿಗೆ 80 ದಿನದಲ್ಲಿ ದ್ವಿಗುಣ ಹಣ ನೀಡುವ ಆಮಿಷ ಹಾಗೆಯೇ ವಿವಿಧ ರೀತಿಯ ಸ್ಕೀಂ ವಿವರಿಸಿ ವಂಚಿಸಿ 4 ಕೋಟಿಗೂ ಅಧಿಕ ಹಣ ಸಂಗ್ರಹದ ಬಳಿಕ ಆ್ಯಪ್ ರದ್ದು ಮಾಡಿ ವ್ಯವಸ್ಥಿತವಾಗಿ ನಾಪತ್ತೆಯಾಗಿದ್ದಾರೆ. ಇವರ ಬಗ್ಗೆ ಸಿ.ಎಸ್.ಪುರ ಪೊಲೀಸ್ ಠಾಣೆಗೆ ಸುಮಾರು 40 ಮಂದಿ ವಂಚನೆಗೆ ಒಳಗಾದವರು ದೂರು ನೀಡಿದ್ದಾರೆ. ವ್ಯವಸ್ಥಿತ ಜಾಲ ರಾಜ್ಯದೆಲ್ಲೆಡೆ ಆನ್ಲೈನ್ ಮೋಸ ನಡೆಸಿರುವ ಅನುಮಾನವಿದೆ. ಈ ಪ್ರಕರಣ ಗಂಭೀರವಾಗಿ ಪರಿಗಣಿಸಿ ಮುಂದಿನ ತನಿಖೆ ನಡೆಸುವುದಾಗಿ ಡಿವೈಎಸ್ಪಿ ಶೇಖರ್ ತಿಳಿಸಿದ್ದಾರೆ.

Advertisement

Tags :
Advertisement