ನೇಹಾ ಕೊಲೆ ಕೇಸ್ ಸಿಐಡಿಗೆ ಒಪ್ಪಿಸಿದ ಸರ್ಕಾರ : ಬೇಸರ ಮಾಡಿಕೊಂಡ ರಂಭಾಪುರಿ ಶ್ರೀಗಳು
ಹುಬ್ಬಳ್ಳಿ: ನೇಹಾಳ ಕೊಲೆಯಾದ ಮೇಲೆ ನಿರಂಜನ ಹೀರೆಮಠ ಅವರಿಗೆ ಸಾಂತ್ವನ ಹೇಳಲು ಇಂದು ರಂಭಾಪುರಿ ಶ್ರೀಗಳು ಭೇಟಿ ನೀಡಿದ್ದಾರೆ. ಮನೆಗೆ ಬಂದು ಧೈರ್ಯ ಹೇಳಿ, ಒಂದಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಕೇಸನ್ನು ಸಿಐಡಿಗೆ ನೀಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವನ್ನು ಸಿಐಡಿಗೆ ನೀಡಿರುವುದು ಸಮಂಜಸವಲ್ಲ. ಇದು ನನಗೆ ಸಮಾಧಾನ ತಂದಿಲ್ಲ. ಏಕೆಂದರೆ ಅದು ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ. ಯಾವುದೋ ಒಂದು ಸಮುದಾಯವನ್ನು ತುಷ್ಟಿಕರಣ ಮಾಡಬಾರದು. ಎಲ್ಲಾ ರಾಜಕಾರಣಿಗಳು ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ಪ್ರಕರಣವನ್ನು ಆದಷ್ಟು ಬೇಗ ಮುಗಿಸಿ, ನ್ಯಾಯ ಕೊಡಿಸುವ ಕೆಲಸವಾಗಬೇಕು. ಒಂದು ವೇಳೆ ನ್ಯಾಯ ಸಿಗದಿದ್ದರೆ ಎಲ್ಲಾ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಿರಂಜನ್ ಹಿರೇಮಠ ಸಹ ಕೂಡ ರಾಜಕೀಯವಾಗಿ ಸಾಮಾಜಿಕವಾಗಿ ಇರುವವರು ಈಗಾಗಲೇ ಅವರು ಕಾರ್ಪೊರೇಟರ್ ಕೂಡ ಇದ್ದಾರೆ. ಹಾಗಾಗಿ ಇದರಲ್ಲಿ ಯಾರು ರಾಜಕೀಯ ಮಾಡದೇ ಯಾವ ಜಾತಿಭೇದ ಮಾಡದೇ ನೇಹಾ ಹತ್ಯೆಗೆ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು. ಪ್ರಕರಣದ ತನಿಖೆಯಲ್ಲಿ ಯಾವುದೇ ಲೋಪದೋಷವಾಗದ ರೀತಿ ಆದಷ್ಟು ಬೇಗ ಮುಗಿಸಿ ನ್ಯಾಯ ಕೊಡಿಸುವ ಕೆಲಸ ಆಗಬೇಕು. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೇರಿದಂತೆ ಹಲವು ರಾಜಕೀಯ ನಾಯಕರು ಬಂದು ಸಾಂತ್ವನ ಹೇಳಿದ್ದಾರೆ.
ನೇಹಾ ಕೊಲೆಯಾದ ಮೇಲೆ ನ್ಯಾಯಕ್ಕಾಗಿ ಸಾಕಷ್ಟು ಹೋರಾಟಗಳು ನಡೆದಿವೆ. ಬಳಿಕ ಈ ಕೇಸನ್ನು ಸಿಐಡಿಗೆ ವಹಿಸಲಾಗಿದೆ. ತನಿಖೆ ಕೂಡ ಮುಂದುವರೆದಿದೆ.