ಬಿಜೆಪಿ ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ : ಸಚಿವ ಪರಮೇಶ್ವರ್ ಹೇಳಿದ್ದೇನು ?
ಬೆಂಗಳೂರು: ಮೂಡಾ ಹಗರಣ ವಿರೋಧಿಸಿ ಬಿಜೆಪಿ ನಾಯಕರು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಆದರೆ ಆರಂಭದಲ್ಲಿ ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ನೀಡಲ್ಲ ಎಂದು ಹೇಳಿದ್ದರು. ಇದೀಗ ಪಾದಯಾತ್ರೆಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆಮಾತನಾಡಿರುವ ಜಿ.ಪರಮೇಶ್ಚರ್,ಬಿಜೆಪಿ ನಾಯಕರು ಶಾಂತಿಯುತವಾಗಿ ಪಾದಯಾತ್ರೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪಾದಯಾತ್ರೆಗೆ ಸರ್ಕಾರ ಅನುಮತಿ ನೀಡಲಾಗುತ್ತಿದೆ ಎಂದಿದ್ದಾರೆ. ಈ ಮೂಲಕ ಬಿಜೆಪಿ ನಾಯಕರು ನಡೆಸುತ್ತಿರುವ ಪಾದಯಾತ್ರೆಗೆ ಯಾವುದೇ ತಕರಾರಿಲ್ಲ ಎಂದಿದ್ದಾರೆ.
ಇನ್ನು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ನೋಟೀಸ್ ಕೊಟ್ಟಿರುವುದರ ಬಗ್ಗೆ ಮಾತನಾಡಿ, ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಆತುರಾತುರವಾಗಿ ನೋಟೀಸ್ ಕೊಟ್ಟಿದ್ದಾರೆ. ಗುರುವಾರ ರಾತ್ರಿಯೇ ಸಂಪುಟ ನಿರ್ಣಯ ಕಳಿಸಲು ನಿರ್ಧರಿಸಿದ್ದೆವು. ರಾಜ್ಯದಲ್ಲಿ ರಾಜ್ಯಪಾಲರಿಲ್ಲ. ಕಚೇರಿಗೆ ತಲುಪಿರಬೇಕು. ರಾಜ್ಯಪಾಲರ ಮೇಲೆ ಒತ್ತಡಗಳು ಬಂದಿವೆ ಎನ್ನುವ ಅನುಮಾನ ಇದೆ. ದೂರು ಪಡೆದ ದಿನವೇ ರಾಜ್ಯಪಾಲರು ನೋಟೀಸ್ ಕೊಟ್ಟಿದ್ದಾರೆ. ಜುಲೈ 26ರಂದೇ ಟಿಜೆ ಅಬ್ರಾಹಂ ಅವರು ದೂರು ನೀಡಿದ್ದರು.
ರಾಜ್ಯಪಾಲರಿಗೆ ನೀಡಿರುವ ನೋಟೀಸ್ ಗೆ ಈಗಾಗಲೇ ಸಿಎಸ್ ಉತ್ತರ ನೀಡಿದ್ದಾರೆ. ಇದಾದ ಮೇಲೆ ರಾಜ್ಯಪಾಲರಿಂದ ಶೋಕಾಸ್ ನೋಟೋಸ್ ಬಂದಿದೆ. ಪ್ರಾಸಿಕ್ಯೂಷನ್ ಗೆ ಕೊಡಲ್ಲ ಎಂಬ ವಿಶ್ವಾಸ ಇದೆ. ಒಂದು ವೇಳೆ ಕೊಟ್ಟರು ಅದನ್ನು ಕಾನೂನು ಮೂಲಕವೇ ಎದುರಿಸುತ್ತೇವೆ. ರಾಜ್ಯಪಾಲರು ಏನೇ ನಿರ್ಧಾರ ತೆಗೆದುಕೊಂಡರು, ಅದನ್ನು ಕಾನೂನು ಮೂಲಕವೇ ನಾವೂ ಎದುರಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು ಹೇಳಿದ್ದಾರೆ.