ಅರ್ಚಕರ ವೇತನ ವಾಪಾಸ್ ಕೇಳಿದ ಸರ್ಕಾರ :4,74,000 ನೀಡುವಂತೆ ಅರ್ಚಕ ಕಣ್ಣನ್ ಗೆ ನೋಟೀಸ್
ಚಿಕ್ಕಮಗಳೂರು: ರಾಜ್ಯ ಸರ್ಕಾರ ಅರ್ಚಕರಿಗೆ ಶಾಕ್ ನೀಡಿದೆ. ಅರ್ಚಕರಿಗೆ ನೀಡಿದ ವೇತನವನ್ನು ವಾಪಾಸ್ ಕೇಳುವ ಮೂಲಕ ಶಾಕ್ ನೀಡಿದೆ. ಚಿಕ್ಕಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ ಅವರ ವೇತನವನ್ನು ವಾಪಾಸ್ ಕೇಳಿದೆ. ಕನ್ನಡ ಪಂಡಿತ, ಕನ್ನಡ ಪೂಜಾರಿ ಎಂದೇ ಖ್ಯಾತರಾಗಿದ್ದಾರೆ ಕಣ್ಣನ್. ಕನ್ನಡದಲ್ಲಿಯೇ ರಾಮಾರ್ಚನೆ ಕೂಡ ಮಾಡುತ್ತಿದ್ದರು. ಇದೀಗ ಅವರಿಗೇನೆ ರಾಜ್ಯ ಸರ್ಕಾರ ಶಾಕ್ ನೀಡಿದೆ.
ಕಳೆದ 50 ವರ್ಷಗಳಿಂದ ಚಿಕ್ಕಮಗಳೂರು ಹೊರ ವಲಯದಲ್ಲಿರುವ ಕಲ್ಯಾಣ ಕೋದಂಡ ರಾಮ ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ತಿಂಗಳು 7500 ರೂಪಾಯಿ ವೇತನ ನೀಡುತ್ತಿತ್ತು. ಬಳಿಕ ದೇವಾಲಯದ ಆದಾಯ ಕಡಿಮೆ ಇದೆ ಎಂಬ ಕಾರಣಕ್ಕೆ 4,500 ರೂಪಾಯಿ ನೀಡುತ್ತಿತ್ತು. ಇದೀಗ 10 ವರ್ಷದ 4,74,000 ರೂಪಾಯಿ ಹಣವನ್ನು ಸರ್ಕಾರ ವಾಪಾಸ್ ನೀಡುವಂತೆ ಕೇಳಿದೆ.
ಈ ತಿಂಗಳ ವೇತನವನ್ನು ಸರ್ಕಾರ ತಡೆಹಿಡಿದಿದೆ. ಡಿಸೆಂಬರ್ 2ರಂದು ತಹಶಿಲ್ದಾರ್ ಸುಮಂತ್ ನೋಟೀಸ್ ನೀಡಿದ್ದಾರೆ. ಅರ್ಚಕ ಕಣ್ಣನ್ ಅವರು ಪೂಜೆ ಮಾಡುವ ದೇವಾಲಯದಲ್ಲಿ ಪ್ರತಿದಿನವೂ ಕನ್ನಡದಲ್ಲಿಯೇ ಸೀತಾ-ರಾಮನಿಗೆ ಮಂತ್ರಘೋಷ ಮಾಡುತ್ತಾರೆ. ಈ ದೇವಾಲಯಕ್ಕೆ ರಾಜ್ಯ - ಹೊರ ರಾಜ್ಯದಿಂದಾನೂ ಭಕ್ತರು ಬರುತ್ತಾರೆ. ಪೂಜೆಗಳನ್ನು ಮಾಡಿಸುತ್ತಾರೆ. ಸೀತಾ-ರಾಮನ ದೇಗುಲದಲ್ಲಿ ಇದೊಂದು ವಿಶೇಷತೆಯನ್ನೇ ಹೊಂದಿದೆ. ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಂತ್ರಘೋಷಣೆ ಮಾಡಲಿದ್ದಾರೆ. ಪ್ರತಿ ದಿನ ಕಿವಿಗೆ ಇಂಪಾಗಿ ಕೇಳುವಂತೆ ಕನ್ನಡದ ಮಂತ್ರ ಇರುತ್ತದೆ. ಇದೀಗ ಕನ್ನಡದ ಪಂಡಿತರಿಗೆ ರಾಜ್ಯ ಸರ್ಕಾರ ನೋಟೀಸ್ ನೀಡಿದ್ದು, ಭಕ್ತರಿಗೆ ಶಾಕ್ ಎನಿಸಿದೆ.