ಸರ್ಕಾರಿ ಭೂಮಿಯನ್ನು ಸಕ್ರಮಗೊಳಿಸಲು ಸರ್ಕಾರ ನಿರ್ಧಾರ..!
ಬೆಂಗಳೂರು: ಸಾಕಷ್ಟು ಕಡೆ ಸರ್ಕಾರಿ ಭೂಮಿಯಲ್ಲೇ ಜನ ಉಳುಮೆ ಜಮೀನು ಮಾಡಿಕೊಂಡಿದ್ದಾರೆ. ಇದೀಗ ಸರ್ಕಾರಿ ಜಮೀನಿನಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸುವ ಬಕರ್ ಹುಕುಂ ಯೋಜನೆಯಡಿಯಲ್ಲಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನರ್ ಪರಿಶೀಲಿಸಲಾಗುವುದು ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ಸರ್ಕಾರಿ ಭೂಮಿ ಸಕ್ರಮಗೊಳಿಸುವ ಅರ್ಜಿಗಳ ಇತ್ಯರ್ಥಕ್ಕೆ ನಿರ್ಧಾರ ಮಾಡಲಾಗಿದೆ. ಈ ನಿರ್ಧಾರದಿಂದ ಸಾಕಷ್ಟು ರೈತರು ಖುಷಿಯಾಗಿದ್ದಾರೆ. ಸಾಗುವಳಿ ಮಾಡುತ್ತಿರುವ 14 ಲಕ್ಷ ರೈತರು ಅರ್ಜಿ ಹಾಕಿದ್ದಾರೆ. ಸರ್ಕಾರಿ ಭೂಮಿಯನ್ನು ಸಕ್ರಮಗೊಳಿಸಲು ಅರ್ಜಿ ಹಾಕಿದ್ದಾರೆ. ಈ ಸಂಬಂಧ ತಹಶಿಲ್ದಾರರ ಜೊತೆಗೆ ಸಭೆ ನಡೆಸಿದ್ದೇನೆ. ನಾಲ್ಕೈದು ತಿಂಗಳಲ್ಲಿ ಇತ್ಯರ್ಥ ಮಾಡಿಕೊಡುವುದಾಗಿ ಸೂಚನೆ ನೀಡಲಾಗಿದೆ ಎಂದು ಕೃಷ್ಣ ಭೈರೇಗೌಡ ಅವರು ಹೇಳಿದ್ದಾರೆ. ಈ ಬಾರಿ ಬಗರ್ ಹುಕಂ ಕಮಿಟಿಯಲ್ಲಿ ಸಕ್ರಮದ ಜೊತೆ ಸಾಗುವಳಿ ಚೀಟಿ ಮತ್ತು ಭೂಮಿ ಸರ್ವೆ ಮಾಡಿ ರೈತರ ಹೆಸರಿಗೆ ನೋಂದಣಿ ಕೂಡ ಮಾಡಿಕೊಡುತ್ತೇವೆ. ರೈತರ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಮಾಡಿಕೊಡುತ್ತೇವೆ. ಹಿಂದೆ ಭೂಮಿ ಮಂಜೂರಾಗಿ ಪೋಡಿ ದುರಸ್ತಿ ಆಗದ 10 ಲಕ್ಷ ಪ್ರಕರಣಗಳಿವೆ. ಇವರೆಲ್ಲರ ದುರಸ್ತಿ ಪ್ರಕ್ರಿಕೆಯೆಗೆ ಚಾಲನೆ ನೀಡಿದ್ದೇವೆ ಎಂದು ಹೇಳಿದ್ದಾರೆ.
ಇದೆ ವೇಳೆ ಜಾತಿಗಣತಿ ವರದಿ ಜಾರಿ ಬಗ್ಗೆಯೂ ಮಾತನಾಡಿ, ಇದರ ಬಗ್ಗೆ ಪರ ವಿರೋಧಚರ್ಚೆಯಾಗಲಿ. ಯಾರಿಗೆ ಆಗಲಿ ಅವರವರ ಅಭಿಪ್ರಾಯ ಹೇಳುವ ಅವಕಾಶವಿದೆ. ಸಚುವ ಸಂಪುಟ ಸಭೆಯಲ್ಲಿ ಅಭಿಪ್ರಾಯ ಹೇಳುತ್ತೇನೆ. ನನ್ನ ಅಭಿಪ್ರಾಯವನ್ನು ಸಭೆಯಲ್ಲಿ ಹೇಳುತ್ತೇನೆ. ನಾನೇನೆ ಹೇಳಿಕೆ ನೀಡಿದರು ಈಗ ಅದು ಸರ್ಕಾರದ ಹೇಳಿಕೆಯಾಗುತ್ತದೆ. ಬೇರೆ ಸಚಿವರು ಏನೇ ಅಭಿಪ್ರಾಯ ಹೇಳಿದರು ಸಮಚಿತ್ತದಿಂದ ಸ್ವೀಕರಿಸುತ್ತೇನೆ ಎಂದಿದ್ದಾರೆ.