ಕಣ್ಣನ್ ಗೆ ನೀಡಿದ್ದ ನೋಟೀಸ್ ವಾಪಾಸ್ ಪಡೆಯಲು ಸರ್ಕಾರ ಸೂಚನೆ..!
ಚಿಕ್ಕಮಗಳೂರು: ದೇವಾಲಯದ ಆದಾಯಕ್ಕಿಂತ ಹೆಚ್ಚಾಗಿ ಸಂಬಳ ನೀಡಲಾಗುತ್ತಿದೆ ಎಂಬ ಆರೋಪದಡಿ ಅರ್ಚಕ, ಹಿರಿಯ ಸಾಹಿತಿ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ತಹಶೀಲ್ದಾರ್ ನೋಟೀಸ್ ನೀಡಿದ್ದರು. ಇದೀಗ ಈ ಸಂಬಂಧ ಸರ್ಕಾರದಿಂದಾನೇ ನೋಟೀಸ್ ವಾಪಸ್ ತೆಗೆದುಕೊಳ್ಳುವುದಕ್ಕೆ ಸೂಚನೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ, ಈ ಬಗ್ಗೆ ನನಗೂ ಮಾಹಿತಿ ಇರಲಿಲ್ಲ. ಇದು ತಹಶಿಲ್ದಾರ್ ಅವರು ಮಾಡಿರುವ ಯಡವಟ್ಟು. ಇದರಲ್ಲಿ ಕಣ್ಣನ್ ಅವರದ್ದು ಏನು ತಪ್ಪಿಲ್ಲ, ತಹಶಿಲ್ದಾರ್ ಅವರು ದುಡ್ಡುಕೊಟ್ಟಿದ್ದಕ್ಕೆ ಅವರು ತೆಗೆದುಕೊಂಡಿದ್ದಾರೆ. ಕೂಡಲೇ ಆ ನೋಟೀಸ್ ವಾಪಾಸ್ ಪಡೆಯಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ಮೂಲಗಳ ಪ್ರಕಾರ ಹೀರೆಮಗಳೂರು ಕಣ್ಣನ್ ಅವರಿಗೆ ತಿಂಗಳ ಸಂಬಳ 7,500 ರೂಪಾಯಿ ನೀಡಲಾಗಿತ್ತು. ಆದರೆ ದೇವಾಲಯದ ಆದಾಯ ಕಡಿಮೆ ಇದ್ದ ಕಾರಣಕ್ಕೆ ಬಳಿಕ 4,500 ರೂಪಾಯಿಗೆ ತರಲಾಗಿತ್ತು. ಇದೀಗ 4,500ರೂಪಾಯಿಯಂತೆ 10 ತಿಂಗಳ ಸಂಬಳ ಅಂದರೆ 4,74,000 ಹಣವನ್ನು ವಾಪಾಸ್ ನೀಡಬೇಕೆಂದು ತಹಶಿಲ್ದಾರ್ ನೋಟೀಸ್ ನೀಡಿದ್ದರು. ಇದು ಸರ್ಕಾರದ ಗಮನಕ್ಕೆ ಬರುತ್ತಿದ್ದಂತೆ, ಆ ಯಡವಟ್ಟನ್ನು ಸರಿ ಮಾಡುವ ಪ್ರಯತ್ನ ಮಾಡಿದೆ.