Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ : ವಿದ್ಯುತ್ ದರ ಯುನಿಟ್ ಗೆ 1 ರೂ. ಇಳಿಕೆ

06:40 PM Feb 28, 2024 IST | suddionenews
Advertisement

 

Advertisement

ಬೆಂಗಳೂರು: ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತಿದೆ. ಆದರೆ ಸರ್ಕಾರ ಅನುಮತಿ ನೀಡಿರುವ ಉಚಿತ ವಿದ್ಯುತ್ ಗಿಂತ ಹಡಚ್ಚಿನ ಯುನಿಟ್ ಬಳಸುವವರಿಗೆ ಮಾತ್ರ ಉಚಿತ ಭಾಗ್ಯ ಸಿಕ್ಕಿಲ್ಲ. ಇನ್ನು ವಾಣಿಜ್ಯ ಉದ್ದಿಮೆದಾರರಿಗೂ ಉಚಿತ ಭಾಗ್ಯ ಸಿಕ್ಕಿಲ್ಲ. ಇದೀಗ ವಿದ್ಯುತ್ ಬಿಲ್ ಪಾವತಿ ಮಾಡುವವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ.

 

Advertisement

ಸರಾಸರಿ 100 ಯುನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗರ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 1 ರೂಪಾಯಿ 10 ಪೈಸೆಯಂತೆ ಇಳಿಕೆ ಮಾಡಲು ಆದೇಶ ನೀಡಿದೆ. ಅಷ್ಟೇ ಅಲ್ಲ ವಾಣಿಜ್ಯ ಬಳಕೆದಾರರಿಗೆ ಪ್ರತಿ ಯೂನಿಟ್ ಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಈ ಮೂಲಕ ವಾಣಿಜ್ಯ ಬಳಕೆದಾರರಿಗೂ ಬಿಗ್ ರಿಲೀಫ್ ನೀಡಿದೆ. ಜೊತೆಗೆ ಶಿಕ್ಷಣ ಮತ್ತು ಆಸ್ಪತ್ರೆಗಳಿಗೆ ಯೂನಿಟ್ ಗೆ 20 ಪೈಸೆ, ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಕಡಿತ ಮಾಡಲಾಗಿದೆ.

 

ಇನ್ನು ರಾಜ್ಯ ಸರ್ಕಾರ ವಿದ್ಯುತ್ ದರ ಇಳಿಕೆ ಮಾಡಿ ಆದೇಶ ಹೊರಡಿಸಿದ್ದು, ಈ ಪರಿಷ್ಕೃತ ದರ ಇದೇ ಮಾರ್ಚ್ 1ರಿಂದ ಅನ್ವಯವಾಗಲಿದೆ. 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಅದಕ್ಕಿಂತ ಕಡಿಮೆ ಯೂನಿಟ್ ಬಳಕೆ ಮಾಡುವವರು ರಿಯಾಯಿತಿಗಾಗಿ ಹೆಚ್ಚಿನ ವಿದ್ಯುತ್ ಬಳಕೆ ಮಾಡದೆ, ಜನ ಹಿತಮಿತವಾಗಿ ಬಳಕೆ ಮಾಡುವುದು ಉತ್ತಮ.

Advertisement
Tags :
bengaluruchitradurgadecreaseElectricitygood newsrate per unitstate governmentsuddionesuddione newsಇಳಿಕೆಗುಡ್ ನ್ಯೂಸ್ಚಿತ್ರದುರ್ಗಬೆಂಗಳೂರುಯುನಿಟ್ರಾಜ್ಯ ಸರ್ಕಾರವಿದ್ಯುತ್ ದರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article