Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಧಾನಿ ಕಡೆಯಿಂದ ಗುಡ್ ನ್ಯೂಸ್ : ಇಂದು ರೈತರ ಖಾತೆಗೆ ಬರಲಿದೆ 2 ಸಾವಿರ ರೂಪಾಯಿ

11:39 AM Oct 05, 2024 IST | suddionenews
Advertisement

 

Advertisement

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ ರೈತರ ಖಾತೆಗೆ ಹಣ ಹಾಕಲಾಗುತ್ತದೆ. ವರ್ಷಕ್ಕೆ ಆರು ಸಾವಿರದಂತೆ ಮೂರು ಬಾರಿ 2 ಸಾವಿರ ಹಾಕಲಾಗುತ್ತದೆ. ಫಲಾನುಭವಿ ರೈತರು ಈಗಾಗಲೇ ಇದರ ಲಾಭ ಪಡೆಯುತ್ತಿದ್ದಾರೆ. ಇದೀಗ ಇಂದು ಕೂಡ ರೈತರಿಗೆ ಹಣ ಬಿಡುಗಡೆಯಾಗುತ್ತಿದೆ. 18ನೆಯ ಕಂತನ್ನು ಇಂದು ಬಿಡುಗಡೆ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಕಂತಿನ ಹಣ ಬಿಡುಗಡೆ ಮಾಡಲಿದ್ದಾರೆ.

PM-Kisan ಅಧಿಜೃತ ಖಾತೆಯ ಮೂಲಕ ಈ ಸಂಬಂಧ ಮಾಹಿತಿ ನೀಡಲಾಗಿದೆ. ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಕೇಂದ್ರ ಸರ್ಕಾರ ಈ ತೀರ್ಮಾನ ಮಾಡಿದೆ. ಕೃಷಿಗೆ ತಗಲುವ ವೆಚ್ಚದಿಂದ ಪರಿಹಾರ ನೀಡುವುದು ಯೋಜನೆಯ ಉದ್ದೇಶವಾಗಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ಹಣ ತಲುಪಿಸಲಾಗುತ್ತದೆ. ಈ ಯೋಜನೆಯ ಫಲ ಪಡೆಯಿವುದಕ್ಕೆ ರೈತರು ಇ-ಕೆವೈಸಿ ಪೂರ್ಣಗೊಳಿಸಬೇಕಾದದ್ದು ಕಡ್ಡಾಯವಾಗಿದೆ. ರೈತರು ಇ-ಕೆವೈಸಿಯನ್ನು ಇನ್ನು ಪೂರ್ಣಗೊಳಿಸದೆ ಇದ್ದಲ್ಲಿ, ಆದಷ್ಟು ಬೇಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗಿದೆ.

Advertisement

ರೈತರು ಇ-ಕೆವೈಸಿ ಅಪ್ಡೇಟ್ ಮಾಡಲು ತಮ್ಮ ಮೊಬೈಲ್ ಗೆ ಬರುವ ಒಟಿಪಿ ಮೂಲಕವೂ ಮಾಡಬಹುದು. ಇಲ್ಲವಾದರೆ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಬಯೋಮೆಟ್ರಿಕ್ ಕೆವೈಸಿ ಪಡೆಯಬಹುದಾಗಿದೆ. ಆದಷ್ಟು ಬೇಗ ಕೆವೈಸಿ ಅಪ್ಡೇಟ್ ಮಾಡಿಕೊಂಡರೆ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಫಲ ದೊರಕಲಿದೆ‌. ಇನ್ನು ಈಗಾಗಲೇ ಎಲ್ಲಾ ಅಪ್ಡೇಟ್ ಮಾಡಿರುವ ರೈತರಿಗೆ ಇಂದು 18ನೇ ಕಂತಿನ ಹಣ ಸಿಗಲಿದೆ. ಇದು ರೈತರಿಗೆ ಖುಷಿ ನೀಡಿದೆ.

Advertisement
Tags :
accountsbengaluruchitradurgaFarmersgood newsPrime Ministerrupeessuddionesuddione newsಗುಡ್ ನ್ಯೂಸ್ಚಿತ್ರದುರ್ಗಪ್ರಧಾನಿಬೆಂಗಳೂರುರೂಪಾಯಿರೈತರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article