ರೀಲ್ಸ್ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ : 50 ಸಾವಿರ ಬಹುಮಾನ ಗೆಲ್ಲಬಹುದು..!
ಈಗಂತೂ ಸೋಷಿಯಲ್ ಮೀಡಯಾ ಓಪನ್ ಮಾಡಿದರೆ ಸಾಕು ರೀಲ್ಸ್ ಗಳ ಹಾವಳಿ. ಇದು ರೀಲ್ಸ್ ಜಮಾನ ಗುರು ಎನ್ನಬಹುದು. ರೀಲ್ಸ್ ಮಾಡುವವರು ಕೂಡ ಹಣ ಸಂಪಾದನೆಯಲ್ಲೂ ಹಿಂದೆ ಉಳಿದಿಲ್ಲ. ಇದೀಗ ರಾಜ್ಯ ಸರ್ಕಾರದಿಂದಾನೂ ರೀಲ್ಸ್ ಮಾಡುವವರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ರಾಜ್ಯ ಸರ್ಕಾರ ರೀಲ್ಸ್ ಮಾಡಿ, ಬಹುಮಾನ ಗೆಲ್ಲಿ ಎನ್ನುವ ಸುವರ್ಣಾವಕಾಶ ನೀಡಿದೆ. ಸಂವಿಧಾನದ ಅರಿವು ಕೇವಲ ಪುಸ್ತಕಗಳಲ್ಲಿ ಅಥವಾ ಶಾಲಾ ಕಾಲೇಜುಗಳಿಗಷ್ಟೇ ಸೀಮಿತವಾಗಿರದೆ, ಪ್ರತಿಯೊಬ್ಬರಿಗೂ ತಲುಪಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಮಾಡಿದೆ. ಈಗಿನ ತಾಂತ್ರಿಕ ಯುಗಕ್ಕೆ ತಕ್ಕಂತೆ ಸಂವಿಧಾನವನ್ನು ವಿದ್ಯಾರ್ಥಿಗಳಿಗೆ, ಯುವಕರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ.
ಈ ಮೂಲಕ ರೀಲ್ಸ್ ಪ್ರಿಯರು ಸಂವಿಧಾನದ ಜಾಗೃತಿ ಜಾಥಾದ ರೀಲ್ಸ್ ಮಾಡುವ ಮೂಲಕ ದೊಡ್ಡ ಬಹುಮಾನದ ಮೊತ್ತ ಪಡೆಯಬಹುದಾಗಿದೆ. ಈ ರೀಲ್ಸ್ 30-40 ಸೆಕೆಂಡ್ ಗಳಷ್ಟೇ ಇರಬೇಕು. ಅದರಲ್ಲಿ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸಬೇಕು. ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 50 ಸಾವಿರ, ದ್ವಿತೀಯ ಬಹುಮಾನವಾಗಿ 25 ಸಾವಿರ, ತೃತೀಯ ಬಹುಮಾನವಾಗಿ 15 ಸಾವಿರ ಬಹುಮಾನ ಸಿಗಲಿದೆ. ಹೀಗಾಗಿ ರೀಲ್ಸ್ ಮಾಡುವವರು ಸಂವಿಧಾನದ ಬಗ್ಗೆಯೂ ರೀಲ್ಸ್ ಮಾಡಬಹುದು.