Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪೊಲೀಸರಿಗೆ ಗುಡ್ ನ್ಯೂಸ್ : ವಿಮಾ ಹಣ 50 ಲಕ್ಷಕ್ಕೆ ಏರಿಕೆ..!

09:23 PM Oct 18, 2024 IST | suddionenews
Advertisement

 

Advertisement

ಪೊಲೀಸರಿಗೆಂದೆ ಗುಂಪು ವಿಮಾ ಯೋಜನೆ ಇದೆ‌. ಅದರಲ್ಲಿ ಪೊಲೀಸರಿಗೆ 20 ಲಕ್ಷ ಹಣ ಸಿಗಲಿದೆ. ಆದರೆ ಆ ಮೊತ್ತ ಏರಿಕೆಯಾಗಿದ್ದು, ಪೊಲೀಸರಿಗೆ ಸಂತಸ ತಂದಿದೆ. ಈ ಸಂಬಂಧ ಪೊಲೀಸ್ ಮಹಾನಿರ್ದೇಶಕ ಇಲಾಖೆ ಇಂದು ಆದೇಶ ಹೊರಡಿಸಿದೆ. ಈ ಆದೇಶದಿಂದ ಪೊಲೀಸರು ಖುಷಿಯಾಗಿದ್ದಾರೆ. 20 ಲಕ್ಷವಿದ್ದ ವಿಮೆ ಈಗ 50 ಲಕ್ಷಕ್ಕೆ ಏರಿಕೆಯಾಗಿದೆ.

ಕಳೆದ ವರ್ಷ ಅಂದ್ರೆ 2023ರಲ್ಲಿ ಆಚರಿಸಿದ ಪೊಲೀಸರ ಹುತಾತ್ಮರ ದಿನಾಚರಣೆಯ ವಿಶೇಷ ದಿನದಂದು ಪೊಲೀಸ್ ಇಲಾಖೆ ಈ ಸಂಬಂಧ ಭರವಸೆ ನೀಡಿತ್ತು. ವಿಮಾ ಯೋಜನೆಯನ್ನು ಹೆಚ್ಚಿಸುವುದಾಗಿಯೂ ತಿಳಿಸಿತ್ತು. ಇದೀಗ ಕೊಟ್ಟ ಮಾತಿನಂತೆ ವಿಮಾ ಯೋಜನಾ ಮೊತ್ತವನ್ನು ಹೆಚ್ಚಿಸಿ, ಆದೇಶ ಹೊರಡಿಸಿದೆ. ಈ ಯೋಜನೆಗಳು ಪೊಲೀಸರ ಕುಟುಂಬಕ್ಕೆ ಬಹಳ ಅನುಕೂಲವಾಗಲಿದೆ. ಇದರ ಜೊತೆಗೆ ಪೊಲೀಸರಿಗೂ ಇದು ಪಾಸಿಟಿವ್ ಆಗಿ ವರ್ಕ್ ಆಗಲಿದೆ. ಅವರಿಗೆ ಇನ್ನಷ್ಟು ಹುಮ್ಮಸ್ಸು ಬರಲಿದೆ.

Advertisement

ಈ ಗುಂಪು ವಿಮಾ ಪೊಲೀಸರ ಕುಟುಂಬಸ್ಥರಿಗೆ ಅನುಕೂಲವಾಗಲಿದೆ. ಕರ್ತವ್ಯದಲ್ಲಿದ್ದಾಗಲೇ ಪೊಲೀಸರು ಮೃತಪಟ್ಟರೆ ಈ ಗುಂಪು ವಿಮಾ ಯೋಜನೆಯ ಹಣವನ್ನು ಕುಟುಂಬಸ್ಥರು ಪಡೆಯಬಹುದು. ಈ ಯೋಜನೆ ಫಾಲೋವರ್, ಪಿಸಿ, ಡಿಜಿಯಿಂದ ಹಿಡಿದು ಐಜಿಪಿವರಗೂ ಅನ್ವಯವಾಗಲಿದೆ‌. ಒಇ ರೀತಿಯಾದ ಯೋಜನೆಗಳು ಅಧಿಕಾರಿ, ಸಿಬ್ಬಂದಿಗಳ ಮನಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಮುಂದೆ ಅವರ ಕೆಲಸಕ್ಕೆ ಹೆಚ್ಚು ಪ್ರೇರಣೆ ಸಿಗಲಿದೆ. ಯಾಕಂದ್ರೆ ಪೊಲೀಸ್ ಅಧಿಕಾರಿಗಳು ತಮ್ಮ ಪ್ರಾಣವನ್ನು ಲೆಕ್ಕಿಸದೆ ಕರ್ತವ್ಯ ಮಾಡುತ್ತಾರೆ. ಈ ಸಂದರ್ಭದಲ್ಲಿ ತಮ್ಮ ಕುಟುಂಬಕ್ಕೆ ಸೆಕ್ಯೂರ್ ಎಂಬ ಭಾವನೆಯನ್ನು ಅವರಿಗೆ ನೀಡುವುದು ಬಹಳ ಮುಖ್ಯವಾಗುತ್ತದೆ. ಈಗ ಪೊಲೀಸ್ ಇಲಾಖೆಯ ಈ ನಿರ್ಧಾರಕ್ಕೆ ಪೊಲೀಸರು ಖುಷಿಯಾಗಿದ್ದಾರೆ.

Advertisement
Tags :
bengaluruchitradurgagood newsinsurancepolicesuddionesuddione newsಗುಡ್ ನ್ಯೂಸ್ಚಿತ್ರದುರ್ಗಪೊಲೀಸರುಬೆಂಗಳೂರುವಿಮಾ ಹಣಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article