For the best experience, open
https://m.suddione.com
on your mobile browser.
Advertisement

ಕರ್ನಾಟಕ ಕೊಬ್ಬರಿ ರೈತರಿಗೆ ಗುಡ್ ನ್ಯೂಸ್ : ಖರೀದಿಗೆ ಮುಂದಾಯ್ತು ಕೇಂದ್ರ ಸರ್ಕಾರ

09:33 PM Jul 18, 2024 IST | suddionenews
ಕರ್ನಾಟಕ ಕೊಬ್ಬರಿ ರೈತರಿಗೆ ಗುಡ್ ನ್ಯೂಸ್   ಖರೀದಿಗೆ ಮುಂದಾಯ್ತು ಕೇಂದ್ರ ಸರ್ಕಾರ
Advertisement

Advertisement

ಬೆಂಗಳೂರು: ಮಂಡ್ಯ, ಹಾಸನ, ತುಮಕೂರು, ದಕ್ಷಿಣ ಕನ್ನಡ, ರಾಮನಗರ ಭಾಗದಲ್ಲಿ ಕೊಬ್ಬರಿ ಬೆಳೆಗಾರರು ಅಧಿಕವಾಗಿದ್ದಾರೆ. ಇಲ್ಲಿನ ಬೆಳೆಗಾರರಿಗೆ ಬೆಂಬಲ ಬೆಲೆ ಸಿಕ್ಕರೆ ಅದಕ್ಕಿಂತ ಇನ್ನೇನು ಖುಷಿ ಬೇಕು ಹೇಳಿ. ಇದೀಗ ಕೇಂದ್ರ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಕೇಂದ್ರ ಸರ್ಕಾರ ಇದೀಗ ಕೊಬ್ಬರಿಯನ್ನು ಕೊಂಡುಕೊಳ್ಳುವುದಾಗಿ ತಿಳಿಸಿದೆ.

ಹೆಚ್ಚುವರಿಯಾಗಿ 7500 ಮೆಟ್ರಿಕ್ ಟನ್ ಕೊಬ್ಬರಿಯನ್ನು ಖರೀದಿ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 2024ನೇ ಸಾಲಿಗೆ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಒಪ್ಪಿಗೆ ಸೂಚಿಸಿದೆ. ಇದರಿಂದಾಗಿ ಕೊಬ್ಬರಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ.

Advertisement

ಕೊಬ್ಬರಿ ಖರೀದಿ ಸಂಬಂಧ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಕೇಂದ್ರಕ್ಕೆ ಮನವಿ ಮಾಡಿದ್ದರು. ಈ ವರ್ಷದಲ್ಲಿ 2,999 ಮೆಟ್ರಿಕ್ ಟನ್ ಖರೀದಿಸಲಾಗುತ್ತದೆ. ಹೆಚ್ಚುವರಿ ಕೊಬ್ಬರಿಯನ್ನು ಖರೀದಿ ಮಾಡುವಂತೆ ಮನವಿ ಮಾಡಿದ್ದರು. 10 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸುವಂತೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದರು. ಇದರಿಂದ 2999 ಮೆಟ್ರಿಕ್ ಟನ್ ಜೊತೆಗೆ ಹೆಚ್ಚುವರಿಯಾಗಿ 7500 ಮೆಟ್ರಕ್ ಟನ್ ಕೊಬ್ಬರಿ ಖರೀದಿಸಲು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಒಪ್ಪಿಗೆ ನೀಡಿದ್ದಾರೆ. ಈ ಮೂಲಕ ಇದೀಗ ಕೇಂದ್ರ ಸರ್ಕಾರ ಒಟ್ಟು 10,500 ಮೆಟ್ರಿಕ್ ಟನ್ ಕೊಬ್ಬರಿ ಖರೀದಸಲಿದೆ. ಇದು ರೈತರಿಗೆ ತುಂಬಾನೇ ಖುಷಿಕೊಟ್ಟಂತ ಸುದ್ದಿಯಾಗಿದೆ. ಈ ಬಾರಿ ಬಂದ ಕೊಬ್ಬರಿಯನ್ನೆಲ್ಲಾ ರೈತರು ಮಾರುಕಟ್ಟೆಗ ಹಾಕಬಹುದು.

Tags :
Advertisement