For the best experience, open
https://m.suddione.com
on your mobile browser.
Advertisement

ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ : 16 ಬಿಡುಗಡೆ ಬೆನ್ನಲ್ಲೇ 14,15 ಮಾಡೆಲ್ ನಲ್ಲಿ ಬೆಲೆ ಇಳಿಕೆ..!

04:34 PM Sep 10, 2024 IST | suddionenews
ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್   16 ಬಿಡುಗಡೆ ಬೆನ್ನಲ್ಲೇ 14 15 ಮಾಡೆಲ್ ನಲ್ಲಿ ಬೆಲೆ ಇಳಿಕೆ
Advertisement

Advertisement

ಬೆಂಗಳೂರು: ಐಫೋನ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ಐಫೋನ್ ಕ್ರೇಜ್ ಇರುವವರು ಹೊಸ ಮಾಡೆಲ್ ಗಳಿಗಾಗಿನೇ ಕಾಯುತ್ತಿರುತ್ತಾರೆ. ಅದರಲ್ಲೂ ಐಫೋನ್ 16 ಗಾಗಿ ಕಾಯುತ್ತಿರುವ ಮಂದಿ‌ ಕಡಿಮೆ ಏನು ಅಲ್ಲ. ಆ ಫೋನ್ ಮಾಡೆಲ್, ಡಿಸೈನ್, ಫೀಚರ್ ಗಳ ಬಗ್ಗೆ ಸಾಕಷ್ಟು ಕುತೂಹಲದಿಂದಾನೇ ಕಾಯುತ್ತಿದ್ದರು. ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಐಫೋನ್ 16 ರಿಲೀಸ್ ಆಗಿದೆ. ಹೀಗಾಗಿ ಹಳೆಯ ಮಾಡೆಲ್ ಗಳಲ್ಲಿ ಬೆಲೆ ಇಳಿಕೆ ಕಂಡಿದೆ.

Advertisement

ಐಫೋನ್ ಕಂಪನಿ ಪ್ರತಿ ವರ್ಷ ಕೂಡ ಹೊಸ ಹೊಸ ಮಾಡೆಲ್ ಅನ್ನು ಪರಿಚಯಿಸುತ್ತಲೆ ಇರುತ್ತದೆ. ಈಗ ಐಫೋನ್ 16 ಪರಿಚಯಿಸಿದ್ದು ಅದರ ಬೆಲೆ, ವೈಶಿಷ್ಟ್ಯತೆಗಳ ವಿಡಿಯೋ ಮಾಡಿ ಬಿಟ್ಟಿದೆ. ಸದ್ಯ ಈ ಫೋನ್ ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಸದ್ಯ ಭಾರತದಲ್ಲಿ ಐಫೋನ್ 16 ಬೆಲೆಯನ್ನು ಕಂಪನಿ ಅನೌನ್ಸ್ ಮಾಡಿದೆ‌. 128 ಜಿಬಿ ಮಾಡೆಲ್ ದರ 79,900 ರೂಪಾಯಿಂದ ಶುರುವಾಗುತ್ತೆ. 256 ಜಿಬಿ ಹಾಗೂ 512 ಜಿಬಿ ಮಾಡೆಲ್ ನಲ್ಲೂ ಐಫೋನ್ 16 ಲಭ್ಯವಿದ್ದು, ಅವುಗಳ ಬೆಲೆ 89,900 ಹಾಗೂ 1,09,900 ರೂಪಾಯಿ ಆಗಿದೆ.

Advertisement

ಇನ್ನು ಮಾರುಕಟ್ಟೆಯಲ್ಲಿ ಐಫೋನ್ 16 ಲಾಂಚ್ ಆಗುತ್ತಿದ್ದಂತೆ 14,15 ಬೆಲೆ ಇಳಿಕೆಯಾಗಿದೆ. ಒಳ್ಳೆ ಡಿಸ್ಕೌಂಟ್ ಕೊಟ್ಟಿದೆ. ಐಫೋನ್ 15 69,900 ರೂಪಾಯಿ ಆಗಿದೆ. 15 Plus 79,900 ಆಗಿದೆ. ಐಫೋನ್ 14 ದರ 59,900 ಆಗಿದೆ. 14 plus ದರ 69,900 ಆಗಿದೆ. ಎಲ್ಲಾ ಐಫೋನ್ ಗಳ ದರದ ಮೇಲೂ 10 ಸಾವಿರ ರಿಯಾಯಿತಿ ಘೋಷಿಸಿದೆ.

Advertisement
Tags :
Advertisement