Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್ : 50ಕ್ಕೆ ಇಳಿಯುವ ಸಾಧ್ಯತೆಯ ಸೂಚನೆ..!

12:54 PM May 28, 2024 IST | suddionenews
Advertisement

ಚಿನ್ನ ಅಂದ್ರೆ ಯಾವ ಹೆಣ್ಣು ಮಕ್ಕಳಿಗೆ ಇಷ್ಟ ಇರುವುದಿಲ್ಲ ಹೇಳಿ. ಆದರೆ ದಿನೇ ದಿನೇ ಚಿನ್ನದ ಮೇಲೆ ಬೆಲೆ ಏರಿಕೆ ಆಗುತ್ತಲೇ ಇದೆ. ಚಿನ್ನ ತೆಗೆದುಕೊಳ್ಳುವುದು ಕನಸಿನ ಮಾತಾಗಿ ಉಳಿದಿದೆ. ಆದರೂ ಚಿನ್ನಕೊಳ್ಳುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಸದ್ಯಕ್ಕೆ ಹತ್ತು ಗ್ರಾಂ ಚಿನ್ನದ ಬೆಲೆ 66,650 ರೂಪಾಯಿ ಇದೆ. ಇಂದು ಒಂದು ಲಕ್ಷಕ್ಕೆ ಬಂದರೂ ಆಶ್ಚರ್ಯವೇನಿಲ್ಲ. ಆದರೆ ಈಗ ಖುಷಿಯ ವಿಚಾರವೊಂದು ಹರಿದಾಡುತ್ತಿದೆ. ಅದು ಸತ್ಯವಾಗಿ ಬಿಟ್ಟರೆ ಮಹಿಳಾ ಮಣಿಗಳಿಗೆ ಸಂತಸವೋ ಸಂತಸ.

Advertisement

ಚಿನ್ನದ ಬೆಲೆಯಲ್ಲಿ ಬಾರೀ ಕುಸಿತ ಕಾಣುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ ಹತ್ತು ಗ್ರಾಂಗೆ ಐವತ್ತು ಸಾವಿರಕ್ಕೆ ಇಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ತಿಂಗಳಿನಿಂದ ಬಾರೀ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಇಳಿಕೆ ಕಂಡರೆ ಖುಷಿಯ ವಿಚಾರವೇ ಅಲ್ವೆ.

ಈ ಹಿಂದೆ ಭೂಮಿಯೊಳಗೆ ಚಿನ್ನ ಸಿಗುತ್ತಿತ್ತು. ಹೀಗಾಗಿ ಚಿನ್ನದ ಬೆಲೆ ಎಲ್ಲರ ಕೈಗೆ ಎಟಕುವಂತೆ ಇತ್ತು. ಆದರೆ ಈಗ ಅದು ಕೂಡ ನಿಂತು ಹೋಗಿದೆ. ಹೀಗಾಗಿ ದಿನೇ ದಿನೇ ಏರಿಕೆಯತ್ತಲೇ ಸಾಗುತ್ತಿದೆ. ಇನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಈಗ ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ ನಿಂತಿದೆ. ಪ್ಯಾಲೆಸ್ತೀನ್ ಭಾಗದಲ್ಲಿ ಶಾಂತಿಯ ವಾತಾವರಣ ಮೂಡಿದೆ. ಹೀಗಾಗಿ ಚಿನ್ನದ ಬೆಲೆಯಲ್ಲೂ ಕುಸಿತ ಕಾಣಬಹುದು ಎಂಬ ನಿರೀಕ್ಷೆ ಇದ್ದು, 50 ಸಾವಿರಕ್ಕೆ ಇಳಿಯಬಹುದು ಎಂದು ಹೇಳಲಾಗುತ್ತಿದೆ. ಇದು ಹೂಡಿಕೆದಾರರಿಗೆ ಕಹಿ ಸುದ್ದಿಯಾದರೆ ಕೊಳ್ಳುವ ಗ್ರಾಹಕರಿಗೆ ಡಬಲ್ ಧಮಾಕದ ಸುದ್ದಿ.

Advertisement

Advertisement
Tags :
50ಕ್ಕೆ ಇಳಿಯುವbengaluruchitradurgagold loversGold Rategood newssuddionesuddione newsಗುಡ್ ನ್ಯೂಸ್ಚಿತ್ರದುರ್ಗಚಿನ್ನಬೆಂಗಳೂರುಸಾಧ್ಯತೆಯ ಸೂಚನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article