For the best experience, open
https://m.suddione.com
on your mobile browser.
Advertisement

ನಿರುದ್ಯೋಗಿಗಳಿಗೆ ಸುವರ್ಣಾವಕಾಶ : ಬಾಳೆದಿಂಡಿನಿಂದ ನಾರು ಸಂಸ್ಕರಣೆ ತಾಂತ್ರಿಕ ತರಬೇತಿ ; ಅರ್ಜಿ ಸಲ್ಲಿಸಲು ಜನವರಿ 6 ಕೊನೆದಿನ

05:50 AM Jan 03, 2024 IST | suddionenews
ನಿರುದ್ಯೋಗಿಗಳಿಗೆ ಸುವರ್ಣಾವಕಾಶ   ಬಾಳೆದಿಂಡಿನಿಂದ ನಾರು ಸಂಸ್ಕರಣೆ ತಾಂತ್ರಿಕ ತರಬೇತಿ   ಅರ್ಜಿ ಸಲ್ಲಿಸಲು ಜನವರಿ 6 ಕೊನೆದಿನ
Advertisement

Advertisement
Advertisement

ಸುದ್ದಿಒನ್, ಚಿತ್ರದುರ್ಗ, ಜನವರಿ.03 : ಬಾಳೆದಿಂಡಿನಿಂದ ನಾರು ಸಂಸ್ಕರಣೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ 5 ದಿನಗಳ ಉಚಿತ ತರಬೇತಿ ಕಾರ್ಯಾಗಾರಕ್ಕೆ ಐಐಎಸ್ಸಿ ಯಿಂದ ಅರ್ಜಿ ಅಹ್ವಾನಿಸಲಾಗಿದೆ.

Advertisement

ಐಐಎಸ್ಸಿಯ ಅಂಗ ಸಂಸ್ಥೆಯಾದ ಸೊಸೈಟಿ ಫಾರ್ ಇನ್ನೋವೇಷನ್ ಅಂಡ್ ಡೆವಲಪ್‍ಮೆಂಟ್ ಮತ್ತು ಧಾರವಾಡದ ಕೃಷಿವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಈ ತರಬೇತಿಯನ್ನು ಜನವರಿ ತಿಂಗಳ 8 ರಿಂದ 12 ರವರೆಗೆ ಧಾರವಾಡ ವಿವಿಯಲ್ಲಿ ಏರ್ಪಡಿಸಲಾಗಿದೆ.

Advertisement
Advertisement

ತರಬೇತಿ ಕಾರ್ಯಾಗಾರದಲ್ಲಿ ಬಾಳೆದಿಂಡಿನಿಂದ ನಾರು ಉತ್ಪಾದನೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ತಾಂತ್ರಿಕ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಈ ತರಬೇತಿ ಕಾರ್ಯಾಗಾರಕ್ಕೆ ಚಿತ್ರದುರ್ಗ ಜಿಲ್ಲೆಯ ಬಾಳೆ ಬೆಳೆಗಾರರು,ಕುಶಲಕರ್ಮಿಗಳು, ನಿರುದ್ಯೋಗಿಗಳು, ನವೋದ್ಯಮಿಗಳು ಹಾಗೂ ಉದ್ಯಮ ಆರಂಭಿಸುವ ಇಚ್ಚೆಯುಳ್ಳವರು ಅರ್ಜಿ ಸಲ್ಲಿಸಬಹುದಾಗಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿನ ಊಟ,ವಸತಿ ಸೇರಿದಂತೆ ಸಂಪೂರ್ಣ ಉಚಿತವಾಗಿದೆ. ಸ್ಥಳೀಯ ಜನರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ತರಬೇತಿ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 6 ಅಂತಿಮ ದಿನವಾಗಿದೆ.

ಆಸಕ್ತರು ಗಣೇಶ್ ತೋಳಾರ್ (7349695100), ಕೋಟೇಶ್ ಕೊರವರ(9663364234) ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆದು ನೊಂದಾಯಿಸಬಹುದಾಗಿದೆ.

Advertisement
Tags :
Advertisement