ಮತ್ತೆ ಏರಿಕೆಯತ್ತ ಮುಖ ಮಾಡಿದ ಚಿನ್ನ : ಇಂದು ಎಷ್ಟಿದೆ..? ಏರಿಕೆಯಾಗಿದ್ದು ಎಷ್ಟು ರೂಪಾಯಿ...?
ಬೆಂಗಳೂರು: ದೀಪಾವಳಿ ಹಬ್ಬದ ನಂತರ ರೂಪಾಯಿ ಲೆಕ್ಕದಲ್ಲಿ ಇಳಿಕೆಯಾಗುತ್ತಾ ಬರುತ್ತಿದ್ದ ಚಿನ್ನ ಇದೀಗ ಇಂದು ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಅಲ್ಪ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ. ಅದೇನೆ ಇರಲಿ ಇಳಿಕೆಯಾಗುತ್ತಲೆ ಇದ್ದ ಚಿನ್ನ ಒಂದೇ ಒಂದು ರೂಪಾಯಿ ಏರಿಕೆಯಾದರೂ ಮಹಿಳೆಯರಿಗೆ ಮತ್ತೆ ಭರವಸೆ ಹೋಗಿ ಬಿಡುತ್ತದೆ. ಇನ್ನು ಕಡಿಮೆಯಾಗಬಹುದು ಎಂದುಕೊಳ್ಳುವಾಗಲೇ ಐದು ರೂಪಾಯಿ ಏರಿಕೆಯಾಗಿದ್ದು, ಬೇಸರ ತರಿಸಿದೆ. ನಿನ್ನೆಯಷ್ಟೇ ಒಂದು ಗ್ರಾಂಗೆ 6,930 ರೂಪಾಯಿ ಇದ್ದ ಚಿನ್ನದ ದರ ಈಗ 6,935 ರೂಪಾಯಿ ಆಗಿದೆ. ಒಂದೇ ದಿನಕ್ಕೆ ಐದು ರೂಪಾಯಿ ಆಗಿದೆ.
ಭಾರತದಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ:
22 ಕ್ಯಾರೆಟ್ ನ ಚಿನ್ನದ ದರ 10 ಗ್ರಾಂಗೆ 69,350 ರೂಪಾಯಿ ಇದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 75,650 ರೂಪಾಯಿ ಇದೆ.
18 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 56,740 ರೂಪಾಯಿ ಇದೆ.
ಹಾಗೆ ಬೆಳ್ಳಿ ಬೆಲೆ 10 ಗ್ರಾಂಗೆ 89.40 ರೂಪಾಯಿ ಇದೆ.
ಇನ್ನು ಬೆಂಗಳೂರು ನಗರದಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ :
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ದರ 69,350 ರೂಪಾಯಿ ಇದೆ.
24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 75,650 ರೂಪಾಯಿ ಇದೆ.
ಇನ್ನು ಬೆಳ್ಳಿ ಬೆಲೆ 89.40 ರೂಪಾಯಿ ಆಗಿದೆ. ಈ ವರ್ಷದೊಳಗೆ ಚಿನ್ನದ ಬೆಲೆ 70 ಸಾವಿರ ಗಡಿದಾಟಬಹುದು ಎಂದು ಹೇಳಲಾಗಿತ್ತು. ಆದರೆ ಅರ್ಧ ವರ್ಷಕ್ಕೇನೆ ಚಿನ್ನದ ದರ ಗಡಿದಾಟಿದೆ.