ಬಿಗ್ ಬಾಸ್ ಮನೆಯಿಂದ ಹೊರ ಬಂದ ಗೋಲ್ಡ್ ಸುರೇಶ್ : ಕುಟುಂಬದವರ ಬಗ್ಗೆ ವದಂತಿ ಹಬ್ಬಿದ್ದೇಕೆ..
ಬೆಂಗಳೂರು: ಈ ವಾರದ ನಾಮಿನೇಷನ್ ನಿಂದ ಗೋಲ್ಡ್ ಸುರೇಶ್ ಬಚಾವ್ ಆಗಿದ್ದರು. ಆದರೂ ಸಹ ಮನೆಯಿಂದ ಹೊರಗೆ ಬಂದಿದ್ದಾರೆ. ತುರ್ತು ಪರಿಸ್ಥಿತಿಯಿಂದ ಹೊರಗೆ ಬಂದಿದ್ದಾರೆ. ಆದರೆ ಅವರ ಕುಟುಂಬಸ್ಥರೆಲ್ಲ ಆರೋಗ್ಯವಾಗಿಯೇ ಇದ್ದಾರೆ. ಆದರೂ ಈ ರೀತಿಯ ಸುದ್ದಿಯೊಂದು ಹಬ್ಬಿದ್ದು ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ.
ಬಿಗ್ ಬಾಸ್ ಬಿಟ್ಟೊರುವ ಪ್ರೋಮೋದಲ್ಲಿ 'ಮನೆಹಲ್ಲಿರುವ ಒಬ್ಬರು ಹೊರಗೆ ಬರಬೇಕಿದೆ. ಅವರ ಅಗತ್ಯ ಬಿಗ್ ಬಾಸ್ ಮನೆಗಿಂತ ಕುಟುಂಬದವರಿಗೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ನಿಮ್ಮ ವಸ್ತುಗಳನ್ನೆಲ್ಲ ತೆಗೆದುಕೊಂಡು ಹೊರಡಿ' ಎಂದಿದ್ದಾರೆ. ಒಂದು ಕ್ಷಣ ಎಲ್ಲರು ಶಾಕ್ ಆಗಿದ್ದಾರೆ. ಹನುಮಂತು ಅಂತು ಮಾವನಿಗೆ ಸಮಾಧಾನ ಮಾಡಿದ್ದಾರೆ. ಗೋಲ್ಡ್ ಸುರೇಶ್ ಕೂಡ ತಾಯಿ ಏನು ಆಗದಂತೆ ನೋಡಿಕೊಳ್ಳುತ್ತಾಳೆಂದು ಸಮಾಧಾನ ಮಾಡಿಕೊಂಡು ಹೊರಟಿದ್ದಾರೆ.
ಗೋಲ್ಡ್ ಸುರೇಶ್ ಮೂಲತಃ ಬೆಳಗಾವಿಯ ಅಥಣಿಯವರು. ಅವರ ತಂದೆ, ಸಹೋದರರು ಬೆಳಗಾವಿಯಲ್ಲಿಯೆರ ಇರುವುದು. ಈ ರೀತಿಯಾದ ಸುದ್ದಿಯೊಂದು ಹೊರಬಿದ್ದ ಬಳಿಕ ವಿಡಿಯೋ ಕಿಉಡ ಹಂಚಿಕೊಂಡಿದ್ದಾರೆ. ತಂದೆ ಹಾಗೂ ಸೋದರಿರಿಬ್ಬರು ಕ್ಷೇಮವಾಗಿರುವ ಬಗ್ಗೆ ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಎಲಿಮಿನೇಷನ್ ಇದ್ದ ದಿನವೇ ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಹೊರ ಬಂದಿದ್ದೇಕೆ ಎಂಬ ಅನುಮಾನಗಳು ಮೂಡಿವೆ. ಈ ರೀತಿಯ ವದಂತಿಗಳನ್ನು ಹಬ್ಬಿಸಿದ್ಯಾರು, ಬಿಗ್ ಬಾಸ್ ತನಕ ತಂದಿದ್ಯಾರು ಗೊತ್ತಾಗುತ್ತಿಲ್ಲ. ನಾಮಿನೇಷನ್ ಟ್ವಿಸ್ಟ್ ಕೊಟ್ಟರು ಫ್ಯಾಮಿಲಿ ವಿಚಾರದಲ್ಲಿ ಬಿಗ್ ಬಾಸ್ ಹುಡುಗಾಟ ಆಡಲ್ಲ. ಹೀಗಾಗಿ ಏನಾಯ್ತು ಎಂಬುದು ಇವತ್ತಿನ ಕಿಚ್ಚನ ಪಂಚಾಯ್ತಿಯಿಂದ ತಿಳಿಯಲಿದೆ. ಆದ್ರೆ ಬಿಗ್ ಬಾಸ್ ಮಂದಿ ಮಾತ್ರ ಟೆನ್ಶನ್ ನಲ್ಲಿದ್ರು.