Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿನ್ನದ ಬೆಲೆ ಮತ್ತೆ ಏರಿಕೆ.. ಬೆಳ್ಳಿಯಲ್ಲಿ ಕೊಂಚ ಇಳಿಕೆ..!

05:40 PM Dec 11, 2024 IST | suddionenews
Advertisement

ಕಳೆದ ಒಂದು ವಾರದಿಂಸ ಚಿನ್ನದ ಬೆಲೆ ಏರುತ್ತಲೆ ಇದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 7,300 ಗಡಿದಾಟಿದ್ದು, ಇಂದು ಬೆಂಗಳೂರು ನಗರದಲ್ಲಿ 7,285 ರೂಪಾಯಿ ಚಿನ್ನದ ದರವಿದೆ. ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ ಕಂಡಿದೆ‌. ನಿನ್ನೆಯೆಲ್ಲ 4-5 ರೂಪಾಯಿ ಏರಿಕೆ ಕಂಡಿದ್ದ ಚಿನ್ನ ಇಂದು 1 ರೂಪಾಯಿ ಇಳಿಕೆಯಾಗಿದೆ‌‌. ಬೆಂಗಳೂರು ನಗರದಲ್ಲಿ ಇಂದು ಹತ್ತು ಗ್ರಾಂ ಬೆಳ್ಳಿ ಬೆಲೆ 95.50 ರೂಪಾಯಿ ಇದೆ.

Advertisement

ಬೆಂಗಳೂರಿನಲ್ಲಿ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 72,850 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ಬೆಲೆ ಹತ್ತು ಗ್ರಾಂಗೆ 79,470 ರೂಪಾಯಿ ಇದೆ. 100 ಗ್ರಾಂ ಬೆಳ್ಳಿಯ ಬೆಲೆ 9,550 ರೂಪಾಗಿ ಆಗಿದೆ. ಉಳಿದಂತೆ ಬೇರೆ ಬೇರೆ ಕಡೆಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣಾ.

ಬೆಂಗಳೂರು ನಗರ ಸೇರಿದಂತೆ ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 72,850 ರೂಪಾಯಿ ಇದೆ. ಉಳಿದಂತೆ ದೆಹಲಿಯಲ್ಲಿ 73,000 ಇದೆ. ಅಹ್ಮದಾಬಾದ್ ನಲ್ಲಿ 72,900 ರೂಪಾಯಿ ಇದೆ. ಜೈಪುರದಲ್ಲಿ 73 ಸಾವಿರ ಇದೆ. ಲಕ್ನೋದಲ್ಲಿಯೂ 73 ಸಾವಿರ‌ ಇದೆ. ಬೆಳ್ಳಿ ಬೆಲೆಯಲ್ಲಿಯೂ ಕೊಂಚ ವ್ಯತ್ಯಾಸವಿದೆ. ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರದಲ್ಲಿ 9,550 ರೂಪಾಯಿ ಇದ್ರೆ ಚೆನ್ನೈ, ಭುವನೇಶ್ವರದಲ್ಲಿ ಮಾತ್ರ ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸವಾಗಿದೆ. 350 ರೂಪಾಯಿ ಹೆಚ್ಚಿದ್ದು 10,300 ರೂಪಾಯಿ ಇದೆ.

Advertisement

Advertisement
Tags :
bengaluruchitradurgaGold priceskannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿನ್ನದ ಬೆಲೆಬೆಂಗಳೂರುಬೆಳ್ಳಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article