ಮತ್ತೆ ಏರಿಕೆಯತ್ತ ಚಿನ್ನದ ದರ : ಇಂದಿನ ಮಾರುಕಟ್ಟೆ ಬೆಲೆ ಎಷ್ಟಿದೆ..?
ಬೆಂಗಳೂರು: ಒಂದೆರಡು ದಿನ ಇಳಿಕೆ ಕಂಡರೆ ಮತ್ತೆ ಏರಿಕೆಯತ್ತ ಮುಖ ಮಾಡುವ ಚಿನ್ನ ಬರ್ತಾ ಬರ್ತಾ ದುಬಾರಿ ಆಗ್ತಾನೆ ಇದೆ. ಪ್ರಪಂಚದಲ್ಲಿ ನಡೆಯುತ್ತಿರುವ ಯುದ್ಧಗಳು ಸಹ ಈ ಏರಿಕೆಗೆ ಕಾರಣವಾಗುತ್ತಿವೆ. ಸಿರಿಯಾದಲ್ಲಿ ನಡೆಯುತ್ತಿರುವ ಕಾಳಗದಿಂದಾನು ಚಿನ್ನ ಬೆಲೆ ದುಬಾರಿಯಾಗುತ್ತಿದೆ. ಕಳೆದ ವಾರವಷ್ಟೇ ಇಳಿಕೆ ಕಂಡಿದ್ದ ಚಿನ್ನ ಇಂದು ಮತ್ತೆ ಏರಿಕೆಯತ್ತ ಸಾಗುತ್ತಿದೆ. 7,115 ರೂಪಾಯಿ ಇದ್ದ ಚಿನ್ನ ಈಗ 7,130 ರೂಪಾಯಿ ಆಗಿದೆ. ಈ ಮೂಲಕ ಹತ್ತು ಗ್ರಾಂ ಚಿನ್ನದ ಬೆಲೆಯೂ ದುಬಾರಿಯಾದಂತೆ ಆಗಿದೆ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ 7,130 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 7,145 ರೂಪಾಯಿ ಆಗಿದೆ. ಹಾಗೇ ಹತ್ತು ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 71,300 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ಬೆಲೆ 77,780 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,200 ರೂಪಾಯಿ ಆಗಿದೆ.
ಉಳಿದಂತೆ ಬೆಂಗಳೂರಿನಲ್ಲಿದ್ದಂತೆ ಚಿನ್ನದ ದರ ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರದಲ್ಲೂ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 71,300 ರೂಪಾಯಿ ಇದೆ. ಆದರೆ ದೆಹಲಿಯಲ್ಲಿ 71,450 ರೂಪಾಯಿ ಇದ್ರೆ, ಅಹ್ಮದಾಬಾದ್ ನಲ್ಲಿ 71,350 ರೂಪಾಯಿ ಇದೆ. ಜೈಪುರದಲ್ಲಿ ಹಾಗೂ ಲಕ್ನೋದಲ್ಲಿ 71,450 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲೂ ವಿವಿಧ ನಗರಗಳಲ್ಲಿ ವಿವಿಧ ಬೆಲೆ ಇದೆ. ಒಂದು ಕಡೆ ಬೆಳ್ಳಿ ನೂರು ಗ್ರಾಂಗೆ 9,200 ಇದ್ದರೆ ಇನ್ನು ಕೆಲವು ನಗರಗಳಲ್ಲಿ 10,000 ಸಾವಿರ ರೂಪಾಯಿ ಆಗಿದೆ.