ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ : ಇಂದು ಎಷ್ಟಿದೆ..?
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗುತ್ತಿದೆ. ಆದರೆ ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ನಿನ್ನೆಯಿಂದ ಅಂದ್ರೆ ಡಿಸೆಂಬರ್ 15 ರಿಂದ ಧನುರ್ಮಾಸ ಶುರುವಾಗಿದೆ. ಒಂದು ತಿಂಗಳ ಕಾಲ ಅಂದ್ರೆ ಜನವರಿ 15ರ ತನಕ ಇರಲಿದೆ. ಈ ಸಂದರ್ಭದಲ್ಲಿ ಹಿಂದೂ ಸಂಪ್ರದಾಯದಲ್ಲಿ ಅಷ್ಟಾಗಿ ಶುಭಕಾರ್ಯಗಳು ನಡೆಯುವುದಿಲ್ಲ. ಹೀಗಾಗಿ ಚಿನ್ನ ಬೆಳ್ಳಿ ದರ ಇಳಿಯುವ ನಿರೀಕ್ಷೆ ಇದೆ.
ಸದ್ಯ ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರ ಒಂದು ಗ್ರಾಂಗೆ 7,140 ರೂಪಾಯಿ ಇದೆ. 18 ಕ್ಯಾರಟ್ ಚಿನ್ನದ ದರ ಒಂದು ಗ್ರಾಂಗೆ 5,842 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನ 7,789 ರೂಪಾಯಿ ಇದೆ. ಬೆಳ್ಳಿ ದರವೂ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಒಂದು ಗ್ರಾಂಗೆ 92.50 ರೂಪಾಯಿ ಆಗಿದೆ. ಉಳಿದಂತೆ 10 ಗ್ರಾಂ 22 ಕ್ಯಾರಟ್ ಚಿನ್ನದ ದರ 71,400 ರೂಪಾಯಿ ಆಗಿದೆ. 24 ಕ್ಯಾರಟ್ ಚಿನ್ನದ ದರ 77,890 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,250 ರೂಪಾಯಿ ಇದೆ.
ಹಾಗೇ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ:
ಚೆನ್ನೈ, ಮುಂಬೈ, ಕೊಲ್ಕತ್ತಾ, ಕೇರಳ, ಭುವನೇಶ್ವರದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 71,400 ರೂಪಾಯಿ ಇದೆ. ಉಳಿದಂತೆ ದೆಹಲಿ, ಜೈಪುರ, ಲಕ್ನೋ ಭಾಗದಲ್ಲಿ 71,550 ರೂಪಾಯಿ ಇದೆ. ಬೆಳ್ಳಿ ಬೆಲೆಯಲ್ಲೂ ಸ್ವಲ್ಪ ವ್ಯತ್ಯಾಸಗಳಾಗಿವೆ. ಬೆಂಗಳೂರು, ಮುಂಬೈ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ ದಲ್ಲಿ 100 ಗ್ರಾಂ ಬೆಳ್ಳಿಗೆ 9,250 ರೂಪಾಯಿ ಇದೆ.