ನನ್ನ ಬಳಿ ಇರುವ ದಾಖಲೆ ಕೊಟ್ಟರೆ ಇನ್ನು 6-7 ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ : ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ
ಬೆಂಗಳೂರು: ಗಂಗೇನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಕುಮಾರಸ್ವಾಮಿ ಅವರನ್ನು ವಿಚಾರಣೆಗೆ ಕರೆದಿದ್ದರು. ವಿಚಾರಣೆಗೆ ಹಾಜರಾಗಿ ಬಂದ ಮರುದಿನವೇ ಸುದ್ದಿಗೋಷ್ಟಿ ನಡೆಸಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಮೇಲೆ ಕಿಡಿಕಾರಿದ್ದಾರೆ.
ವಿಚಾರಣೆ ಮಾಡುವುದಕ್ಕೆ ಅನುಮತಿಕೊಡಿ ಅಂತ ಪತ್ರ ಬರೆದಿದ್ದಾರಲ್ಲ ಚಂದ್ರಶೇಖರ್ ಈ ಪತ್ರದ ಮಾಹಿತಿ ಒಂದೇ ಒಂದು ಖಾಸಗಿ ಚಾನೆಲ್ ಗೆ ಹೋಗಿರುವುದು. ಎಲ್ಲಾ ಚಾನೆಲ್ ಗಳಿಗೂ ಮಾಹಿತಿ ಸೋರಿಕೆಯಾಗಿಲ್ಲ. ಐಜಿಪಿ ಕಚೇರಿ, ರಾಜ್ಯಪಾಲರ ಕಚೇರಿ ಮಧ್ಯದಲ್ಲಿ ನಡೆದಿದೆ. ಇಲ್ಲಿ ನಿರಂತರವಾಗಿ ಮೂರು ತಿಂಗಳಿಂದ ಏನು ಹಲವಾರು ಪ್ರಕರಣಗಳು ನಡೆಯುತ್ತಾ ಇದಾವೆ. ಆ ಪ್ರಕರಣಗಳಿಗೆ ಸಂಬಂಧಿಸಿದಂತ ಡಿಜಿ ಕಚೇರಿಗೆ ದೂರುಗಳು ಕೊಟ್ಟ ಮೇಲೆ ಅವರು ಯಾವ ಚಾನೆಲ್ ಗಳಿಗೆ ಹೋಗಿ ಕೂರುತ್ತಾ ಇದಾರೆ. ಯಾವ ಚಾನೆಲ್ ನಲ್ಲಿ ಬಟ್ಟೆ ಕಟ್ಟಿ ಪ್ರತಿದಿನ ಮೂರು ಗಂಟೆ ನಾಲ್ಕು ಗಂಟೆ ಪ್ರಚಾರ ಮಾಡಿಕೊಂಡು ಬಂದ್ರು. ಇಲ್ಲಿ ನೀವೂ ಸೋರಿಕೆ ಮಾಡಿಕೊಂಡು ಬಂದು, ರಾಜ್ಯಪಾಲರ ಕಚೇರಿಯನ್ನ ಸರ್ಚ್ ಮಾಡುವುದಕ್ಕೆ ಅನುಮತಿಕೊಡಿ ಅಂದ್ರೆ ಏನು ಅರ್ಥ. ಈ ಸರ್ಕಾರ ಹೇಗೆ ಆಡಳಿತ ನಡೆಸುತ್ತಾ ಇದೆ.
ಈ ಥರ ಆದ್ರೆ ಇದು ಇಲ್ಲಿಗೆ ನಿಲ್ಲಲ್ಲ. ಹೇಳುದ್ರಲ್ಲ ಸಿದ್ದರಾಮಯ್ಯ ಅವರು 40% ಸರ್ಕಾರ ಅಂತ ಹೇಳಿ. ಜನಗಳ ಮುಂದೆ ಹೇಳಿ ಬಂದಿದ್ರಲ್ಲ, ಆದ್ರೆ ಈಗ ಅವರ ಪಕ್ಷದವರೇ ಹೇಳುತ್ತಾರೆ. ಇವರು ಬಂದ ಮೇಲೆ 40%ಗೂ ಜಾಸ್ತಿಯಾಗಿದೆ ಅಂತ. ಇದಕ್ಕೆ ಜನ ನಿಮಗೆ ಅಧಿಕಾರ ಕೊಟ್ರಾ ಸಿದ್ದರಾಮಯ್ಯ ಅವರೇ. ನಾನು ಏನು ಎಲ್ಲಿಯೂ ಓಡಿ ಹೋಗೊಲ್ಲ. ನನ್ನ ಹತ್ತಿರ ಇರುವ ಡಾಕ್ಯುಮೆಂಟ್ ಬಿಟ್ರೆ, ಇನ್ನು ಆರರಿಂದ ಏಳು ಜನ ಮಂತ್ರಿಗಳು ರಾಜೀನಾಮೆ ಕೊಡಬೇಕಾಗುತ್ತದೆ.
ಬಿಡಣಾ ಬಿಡಣಾ, ಹೆದರಿಕೊಂಡು ಹೋಗಲ್ಲ. ಕುಮಾರಸ್ವಾಮಿ ಏನು ಅನ್ನೋದು, ದೇವೇಗೌಡರ ಕುಟುಂಬ ಕೆದಕಿದರೆ, ದೇವೇಗೌಡರ ಕಣ್ಣಲ್ಲಿ ನೀರು ಹಾಕಿದರೆ, ನಾವ್ಯಾರು ತೀರ್ಪು ಕೊಡೋರಲ್ಲ, ನಾವ್ಯಾರು ಶ್ರಮ ಹಾಕಬೇಕಿಲ್ಲ. ಯಾವ ದೇವೇಗೌಡ್ರು ಶಿವನನ್ನು ನಂಬಿ ಬದುಕಿದ್ದಾರೆ, ಆ ವ್ಯಕ್ತಿಯ ಕಣ್ಣಲ್ಲಿ ನೀರು ಯಾಕೆ ಬಿದ್ದಿದೆ, ನೋವು ಏನಿದೆ ಅದನ್ನ ನೋಡಿ ಆ ಭಗವಂತನೆ ಶಿಕ್ಷೆ ನೀಡುತ್ತಾನೆ ಎಂದಿದ್ದಾರೆ.